ನಿಪ್ಪಾಣಿ: ಜೀವನದಲ್ಲಿ ಸೋಲು&ಗೆಲುವು ಸಾಮಾನ್ಯ. ಎದುರಾಗುವ ಸೋಲನ್ನೇ ಗೆಲುವಿಗೆ ಸೋಪಾನವಾಗಿಸಿಕೊಳ್ಳುವುದೇ ಜೀವನದ ಸಾರ ಎಂದು ವಿಎಸ್ಎಂ ಚೇರ್ಮನ್ ಚಂದ್ರಕಾಂತ ಕೋಠಿವಾಲೆ ಹೇಳಿದರು.
ನಗರದಲ್ಲಿ ಚಿಕ್ಕೋಡಿ ಪದವಿಪೂರ್ವ ಶಿಣ ಇಲಾಖೆ ಹಾಗೂ ನಿಪ್ಪಾಣಿ ವಿಎಸ್ಎಂ ಜಿ.ಐ. ಬಾಗೇವಾಡಿ ಸಂಯುಕ್ತ ಪದವಿಪೂರ್ವ ಮಹಾವಿದ್ಯಾಲಯ ಸಂಯುಕ್ತಾಶ್ರಯದಲ್ಲಿ ವಿಎಸ್ಎಂ ಸೋಮಶೇಖರ ಆರ್. ಕೋಠಿವಾಲೆ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಈಚೆಗೆ ಜರುಗಿದ 2023&24ನೇ ಸಾಲಿನ ಚಿಕ್ಕೋಡಿ ಶೈಣಿಕ ಜಿಲ್ಲೆಯ ಕ್ರೀಡಾಕೂಟ ಉದ್ಘಾಟಿಸಿ ಅವರು ಮಾತನಾಡಿದರು.
ವಿದ್ಯಾರ್ಥಿಗಳು ಪಠ್ಯದ ಜತೆಗೆ ಪಠ್ಯೇತರ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡು ವ್ಯಕ್ತಿತ್ವ ರೂಪಿಸಿಕೊಳ್ಳಬೇಕು. ಜತೆಗೆ ಆರೋಗ್ಯದ ಕಾಳಜಿ ವಹಿಸಬೇಕು ಎಂದರು.
ಪದವಿಪೂರ್ವ ಶಿಣ ಇಲಾಖೆ ಉಪನಿರ್ದೇಶಕ ಪಾಂಡುರಂಗ ಭಂಡಾರಿ ಮಾತನಾಡಿ, ವಿದ್ಯಾರ್ಥಿಗಳು ಕ್ರೀಡಾ ಮನೋಭಾವದಿಂದ ಕ್ರೀಡೆಯಲ್ಲಿ ಭಾಗವಹಿಸಬೇಕು ಎಂದರು. ವೈಸ್&ಚೇರ್ಮನ್ ಪಪ್ಪು ಪಾಟೀಲ ಮಾತನಾಡಿ, ಸದೃಢ ದೇಹದಲ್ಲಿ ಸದೃಢ ಮನಸ್ಸಿರುತ್ತದೆ ಎಂದರು. ಸಿಇಒ ಡಾ.ಸಿದ್ಧಗೌಡ ಪಾಟೀಲ, ಪ್ರಾಚಾರ್ಯ ಡಾ.ನಿಂಗಪ್ಪ ಮಾದಣ್ಣವರ ಮಾತನಾಡಿದರು.
ಮಂಡಳದ ಕಾರ್ಯದರ್ಶಿ ಹರಿಶ್ಚಂದ್ರ ಶಾಂಡಗೆ, ಸಂಚಾಲಕ ಸಂಜಯ ಮೊಳವಾಡೆ, ಚಿಕ್ಕೋಡಿ ಶೆಣಿಕ ಜಿಲ್ಲೆಯ ಕ್ರೀಡಾ ಸಂಯೋಜಕ ಅಜಯ ಮೋನೆ, ಜಿನದತ್ತ ಪಾಟೀಲ, ವೈ.ಬಿ.ಮಾಚಕನೂರ ಹಾಗೂ ಪ್ರಾಚಾರ್ಯ ಡಾ.ಉಮೇಶ ಪಾಟೀಲ, ದೈಹಿಕ ಶಿಕ್ಷಣ ಶಿಕ್ಷಕಿ ಅಶ್ವಿನಿ ಬುಲಬುಲಿ, ಅಯ ಪಟ್ಟಣಕುಡಿ, ಸಂಜಯ ಮುತ್ನಾಳೆ, ಪ್ರವಿಣ ಪಾಯಮಲ್ಲೆ ಇತರರಿದ್ದರು.