ವಿಜಯವಾಣಿ ಸುದ್ದಿಜಾಲ ಕೋಲಾರ
ಪಠ್ಯ ಪುಸ್ತಕ, ಗೈಡ್ ಮತ್ತು ಸಾಹಿತ್ಯ ಕೃತಿಗಳ ರವಾಣೆಗಾಗಿಯೇ ಮೀಸಲಿರಿಸಿದ ಭಾರತೀಯ ಅಂಚೆ ಇಲಾಖೆಯ 'ಜ್ಞಾನ ಅಂಚೆ' ಸೇವೆ ಇದೇ ಮೇ ೧ ರಿಂದ ಆರಂಭಗೊAಡಿದೆ ಎಂದು ಕೋಲಾರ ವಿಭಾಗದ ಹಿರಿಯ ಅಂಚೆ ಅಧೀಕ್ಷಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಈ ಮೊದಲು ಪಠ್ಯಪುಸ್ತಕ, ಗೈಡ್ ಮತ್ತು ಸಾಹಿತ್ಯ ಕೃತಿಗಳನ್ನು ಭಾರತೀಯ ಅಂಚೆಯ ಬುಕ್ ಪಾಕೆಟ್ ಬುಕ್ ಪೋಸ್ಟ್ಗಳ ಮೂಲಕ ಕಳುಹಿಸಬೆಕಿತ್ತು. ಭಾರತೀಯ ಅಂಚೆ ಕಾಯ್ದೆಗೆ ೨೦೧೩ರಲ್ಲಿ ತಿದ್ದುಪಡಿ ತರುವ ಮೂಲಕ 'ಬುಕ್ ಪ್ಯಾಕೆಟ್ ಸೇವೆಯನ್ನು ೨೦೨೪ರ ಜೂನ್‌ನಲ್ಲಿ ರದ್ದುಪಡಿಸಲಾಗಿತ್ತು. ಬುಕ್ ಪೋಸ್ಟ್ ಸೇವೆಯ ಹೆಸರನ್ನು ಬದಲಿಸಿ, ದರವನ್ನು ಏರಿಕೆ ಮಾಡಲಾಗಿತ್ತು.
ಬುಕ್ ಪ್ಯಾಕೆಟ್ ಮತ್ತು ಬುಕ್ ಪೋಸ್ಟ್ ಸೇವೆಗಳ ರದ್ದತಿಯಿಂದ ಪಠ್ಯ ಪುಸ್ತಕ, ಸಾಹಿತ್ಯ ಕೃತಿಗಳ ರವಾನೆ ದುಬಾರಿ ಬಾಬತ್ತಾಗಿ ಬದಲಾಗಿತ್ತು. ಈಗ ಭಾರತೀಯ ಅಂಚೆ ಕಾಯ್ದೆಗೆ ಮತ್ತೆ ತಿದ್ದುಪಡಿ ತಂದಿರುವ ಕೇಂದ್ರ ಸರ್ಕಾರವು 'ಜ್ಞಾನ ಅಂಚೆ' ಸೇವೆ ಆರಂಭಕ್ಕೆ ಮುಂದಾಗಿದೆ. ಪಠ್ಯ ಪುಸ್ತಕ, ಸಾಹಿತ್ಯ ಕೃತಿಗಳಿಗಷ್ಟೇ ಈ ಸೇವೆ ಮೀಸಲಾಗಿದೆ. ಬಿಲ್ ಬುಕ್‌ಗಳು, ಆಹ್ವಾನ ಪತ್ರಿಕೆಗಳು, ಕರಪತ್ರಗಳು, ನಿಯತಕಾಲಿಕೆಗಳಿಗೆ ಈ ಸೇವೆ ಲಭ್ಯವಿಲ್ಲ
ಈ ಸೇವೆ ಅಡಿ ಪುಸ್ತಕಗಳನ್ನು ಕಳುಹಿಸುವವರು ಅದರ ಮೇಲೆ 'ಜ್ಞಾನ ಅಂಚೆ' ಎಂದು ಕಡ್ಡಾಯವಾಗಿ ನಮೂದಿಸಿರಬೇಕು. ಕಳುಹಿಸುವವರು ಮತ್ತು ಪಡೆಯುವವರ ಜತೆಗೆ ಪ್ರಕಾಶಕರ ಹೆಸರು ಹಾಗೂ ವಿಳಾಸ ಇರಬೇಕು. ಯಾವುದೇ ವಾಣಿಜ್ಯ ಉದ್ದೇಶದ ಕರಪತ್ರ ಮತ್ತು ಬರಹ ಇರಬಾರದು. ಕನಿಷ್ಠ ೩೦೦ ಗ್ರಾಂನಿAದ ೫ ಕೆ.ಜಿ.ವರೆಗಿನ ಪಾರ್ಸೆಲ್ ಗಳನ್ನು ಮಾತ್ರ ಜ್ಞಾನಅಂಚೆ ಎಂದು ಪರಿಗಣಿಸಲಾಗುತ್ತದೆ.
ಶುಲ್ಕ ಪಟ್ಟಿ ವಿವರ :
೩೦೦ ಗ್ರಾಂ ವರೆಗೆ ೨೦ ರೂ.ಗಳು, ೩೦೧ ರಿಂದ ೫೦೦ ಗ್ರಾಂ ವರೆಗೆ ೨೫ ರೂ.ಗಳು, ೫೦೧ ರಿಂದ ೧,೦೦೦ ಗ್ರಾಂ ವರೆಗೆ ೩೫ ರೂ.ಗಳು, ೧.೦೦೧ ರಿಂದ ೨,೦೦೦ ಗ್ರಾಂ ವರೆಗೆ ೫೦ ರೂ.ಗಳು, ೨.೦೦೧ ರಿಂದ ೩.೦೦೦ ಗ್ರಾಂ ವರೆಗೆ ೬೫ ರೂ.ಗಳು, ೩,೦೦೧ ರಿಂದ ೧,೦೦೦ ಗ್ರಾಂ ವರೆಗೆ ೮೦ ರೂ.ಗಳು, ೪,೦೦೧ ರಿಂದ ೫,೦೦೦ ಗ್ರಾಂ ವರೆಗೆ ೧೦೦ ರೂ.ಗಳು ನಿಗಧಿ ಮಾಡಲಾಗಿದೆ.
ಚಿತ್ರ ೦೨ ಕೆ.ಎಲ್.ಆರ್. ೦೩ : ಅಂಚೆ ಸಂಗ್ರಹ ಚಿತ್ರ