ಜಿಲ್ಲೆ

ಪಟ್ಟಿ ಪರಿಷ್ಕ್ಕರಣೆ ಸದುಪಯೋಗ ಪಡಿಸಿಕೊಳ್ಳಿ


ಯಾದಗಿರಿ: ಮತದಾರರ ಪಟ್ಟಿ ಪರಿಷ್ಕ್ಕರಣೆ ನಡೆಯುತ್ತಿದ್ದು, ಅರ್ಹ ಮತದಾರರು ಇದರ ಸದುಪಯೋಗ ಪಡೆದುಕೊಳ್ಳುವಂತೆ ಜಿಲ್ಲಾಕಾರಿ ಸ್ನೇಹಲ್ ಆರ್., ಮನವಿ ಮಾಡಿದರು.

ಸಮೀಕ್ಷೆ ಹಿನ್ನೆಲೆಯಲ್ಲಿ ಶನಿವಾರ ಯಾದಗಿರಿ ತಾಲೂಕಿನ ಮುಸ್ಟೂರು, ಲಿಂಗೇರಿ, ಮಲ್ಹಾರ್, ಸಾವೂರು, ಆನೂರು (ಕೆ), ಆನೂರು (ಬಿ) ಮತ್ತು ವಡಿಗೇರಾ ತಾಲೂಕಿನ ಕಂದಳ್ಳಿ, ಅಜರ್ುನಗಿ, ಗೋಡಿಹಾಳ ಗ್ರಾಮಗಳ ಮತಗಟ್ಟೆಗಳಿಗೆ ಮತ್ತು ಮನೆಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಅವರು, ಯಾವುದೇ ದೋಷಗಳಿಲ್ಲದ ಶುದ್ಧ ಮತದಾರರ ಪಟ್ಟಿಯನ್ನು ಸಿದ್ಧಪಡಿಸುವಂತೆ ಸಂಬಂಸಿದ ಅಕಾರಿಗಳಿಗೆ ಸೂಚಿಸಿದರು.

ಅರ್ಹ ಮತದಾರರು ಪಟ್ಟಿಯಿಂದ ಯಾವುದೇ ಕಾರಣಕ್ಕೂ ಹೊರಗುಳಿಯಬಾರದು. ಗ್ರಾಮಗಳಲ್ಲಿನ ಸಕರ್ಾರಿ ಶಾಲೆಯಲ್ಲಿರುವ ಮತಗಟ್ಟೆ ಕೇಂದ್ರಗಳಿಗೆ ಭೇಟಿ ನೀಡಿ, ಕೇಂದ್ರದ ವ್ಯವಸ್ಥೆ, ಮೂಲಭೂತ ಸೌಕರ್ಯ, ದುರಸ್ಥಿಪಡಿಸುವಂಥ ಇನ್ನಿತರ ವಿಷಯಗಳನ್ನು ಅಕಾರಿಗಳೊಂದಿಗೆ ಚಚರ್ಿಸಿದರು. ಇದೇ ವೇಳೆ ಶಾಲೆಗಳಲ್ಲಿ ಮಕ್ಕಳ ಶೈಕ್ಷಣಿಕ ಗುಣಮಟ್ಟವನ್ನು ಖುದ್ದಾಗಿ ಪರಿಶೀಲಿಸಿದರು.

ಅಲ್ಲದೇ ವೋಟರ್ ಹೆಲ್ಪ್ಲೈನ್ ಆ್ಯಪ್ ಮೂಲಕವೂ ತಮ್ಮ ಮೊಬೈಲ್ ಸಂಖ್ಯೆ ನಮೂದಿಸಿ ಹೆಸರನ್ನು ನೋಂದಾಯಿಸಬಹುದು. ಹೆಸರು ಅನ್ಯ ಮತಗಟ್ಟೆಗೆ ಸ್ಥಳಾಂತರ, ತೆಗೆದು ಹಾಕುವುದು, ತಿದ್ದುಪಡಿಯನ್ನೂಮಾಡಿಕೊಳ್ಳಬಹುದಾಗಿದೆ. ಬಿಎಲ್ಓಗಳು ಯುವ ಜನತೆಗೆ ಆ್ಯಪ್ನ ಬಗ್ಗೆ ಹೆಚ್ಚಿನ ಪ್ರಮಾಣದಲ್ಲಿ ಜಾಗೃತಿ ಮೂಡಿಸಬೇಕು ಎಂದು ನಿದರ್ೇಶನ ನೀಡಿದರು.

ಮತದಾರರ ಪಟ್ಟಿಯಲ್ಲಿ ಹೆಸರಿದ್ದು ಅವರುಗಳು ಸ್ಥಳಾಂತರ ಹೊಂದಿದ್ದಲ್ಲಿ, ಮೃತ ಪಟ್ಟಲ್ಲಿ ಮತ್ತು ಹೆಸರು ಪುನರಾವರ್ತನೆಯಾಗಿದ್ದಲ್ಲಿ ತೆಗೆದು ಹಾಕಲು ನಮೂನೆ-7ರಲ್ಲಿ, ಹೆಸರು ಇತ್ಯಾದಿ ತಿದ್ದುಪಡಿ ಬಯಸಿದ್ದಲ್ಲಿ ನಮೂನೆ-8ರಲ್ಲಿ ಸೂಕ್ತ ದಾಖಲೆಯೊಂದಿಗೆ ಅಜರ್ಿಗಳನ್ನು ಸಂಬಂಧಪಟ್ಟ ಮತಗಟ್ಟೆ ಅಕಾರಿಗೆ ಡಿ.08ರ ವರೆಗೆ ಹಕ್ಕು ಮತ್ತು ಆಕ್ಷೇಪಣೆಗಳನ್ನು ಸಲ್ಲಿಸಲು ಅವಕಾಶ ನೀಡಲಾಗಿದೆ ಎಂದು ಹೇಳಿದರು.

ಅಲ್ಲದೆ ದಾಖಲೆ ಪರಿಶೀಲನೆಗೆ ನಮ್ಮ ಅಕಾರಿಗಳು ಮನೆಗೆ ಬಂದಾಗ ಜನತೆ ಸರಿಯಾದ ಮಾಹಿತಿ ನೀಡಿ ಸಹಕರಿಸಬೇಕು ಎಂದರು. ತಹಶೀಲ್ದಾರ್ ಚನ್ನಮಲ್ಲಪ್ಪ ಘಂಟಿ, ಸುರೇಶ ಅಂಕಲಗಿ, ಮಲ್ಲಪ್ಪ, ಸಂಗಮೇಶ ದೇಸಾಯಿ, ಹಾಗೂ ಸಂಬಂಸಿದ ಬೂತ್ ಮಟ್ಟದ ಅಕಾರಿಗಳು ಇದ್ದರು.