ಜಿಲ್ಲೆ

ಪಟ್ಟದ್ದೇವರು ಹೆಸರು ಕೈಬಿಟ್ಟಿದಕ್ಕೆ ಆಕ್ರೋಶ

ರಮೇಶ ಮೇಳಕುಂದಾ

ಭಾಲ್ಕಿ: ಪಟ್ಟಣದ ಪುರಭವನದಲ್ಲಿ ಏರ್ಪಡಿಸಿದ್ದ ತಾಲೂಕು ಆಡಳಿತದ ರಾಜ್ಯೋತ್ಸವ ಆಮಂತ್ರಣ ಪತ್ರಿಕೆಯಲ್ಲಿ ಡಾ.ಬಸವಲಿಂಗ ಪಟ್ಟದ್ದೇವರ ಹೆಸರು ಕೈಬಿಟ್ಟಿರುವುದಕ್ಕೆ ಹಾಗೂ ಕಾರ್ಯಕ್ರಮ್ಮೆ ಹೊಸ ಬ್ಯಾನರ್ ಬರೆಸದೇ ಇರುವುದಕ್ಕೆ ಕನ್ನಡಪರ ಸಂಘಟನೆಗಳ ಮುಖಂಡರು ತಹಸೀಲ್ದಾರ್ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.

ಹಿರೇಮಠ ಸಂಸ್ಥಾನವೂ ಹೊರಗೆ ಉರ್ದು ನಾಮಫಲಕ ಹಾಕಿ, ಒಳಗೆ ಕನ್ನಡ ಕಲಿಸಿದೆ. ಇಂತಹ ಪರಂಪರೆಯ ಪೂಜ್ಯರಿಗೆ ಗೌರವ ನೀಡಲು ಅವರ ಸಾನ್ನಿಧ್ಯದಲ್ಲಿ ಪ್ರತಿ ವರ್ಷ ರಾಜ್ಯೋತ್ಸವ ಆಯೋಜಿಸಲಾಗುತ್ತಿದೆ. ಇದೇ ಮೊದಲ ಬಾರಿಗೆ ಶಿಷ್ಟಾಚಾರದ ನೆಪದಲ್ಲಿ ಹೆಸರು ಕೈಬಿಟ್ಟಿರುವುದು ಸರಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ಮುಖಂಡರಾದ ಗಣೇಶ ಪಾಟೀಲ್, ಕೆ.ಡಿ.ಗಣೇಶ, ಸಂತೋಷ ಬಿಜಿ ಪಾಟೀಲ್, ಸತೀಶ ಮಡಿವಾಳ, ಮಾಳಸ್ಕಾಂತ ವಾಘೆ, ರಾಜಕುಮಾರ ಡಾವರಗಾಂವ, ಸಂಜು ನಾವದಗಿ, ಭದ್ರೇಶ ಸ್ವಾಮಿ ಇತರರಿದ್ದರು.