ಜಿಲ್ಲೆ

ಪಟ್ಟಣದ ಅಭಿವೃದ್ಧಿಗೆ ಆದಾಯ ಕ್ರೋಡೀಕರಿಸಿ

ಸೊರಬ: ಪುರಸಭೆಯಾಗಿ ಮೇಲ್ದರ್ಜೆಗೇರಿದ ಬಳಿಕ ಪಟ್ಟಣದ ವ್ಯಾಪ್ತಿ ವಿಸ್ತಾರವಾಗá-ವುದರ ಜತೆಗೆ ಆದಾಯ ಕೂಡ ಹೆಚ್ಚಾಗಬೇಕು. ಇದಕ್ಕೆ ಸಂಬಂಧಿಸಿ ಆದಾಯ ಕ್ರೋಡೀಕರಿಸಲು ಸೂಕ್ತ ಕ್ರಮ ಕೈಗೊಳ್ಳಬೇಕá- ಎಂದು ಪಪಂ ಮುಖ್ಯಾಧಿಕಾರಿ ಜಗದೀಶ್ ನಾಯ್್ಕ ಅವರಿಗೆ ಶಾಸಕ ಕುಮಾರ ಬಂಗಾರಪ್ಪ ಸೂಚಿಸಿದರು.

ಪಟ್ಟಣದ ತಾಲೂಕು ಕಚೇರಿಯಲ್ಲಿ ಮಂಗಳವಾರ ಕಂದಾಯ ಹಾಗೂ ಪಪಂ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು, ಪಟ್ಟಣ ಅಭಿವೃದ್ಧಿ ಆಗಬೇಕಾದರೆ ಮುಖ್ಯವಾಗಿ ಆದಾಯ ಸಂಗ್ರಹ ಆಗಬೇಕಿದೆ. ಬಹಳಷ್ಟು ಜನರು ಪಪಂನಿಂದ ಎನ್​ಒಸಿ ಪಡೆಯದೆ ಅಂಗಡಿ ಮುಂಗಟ್ಟು ಹಾಗೂ ಕಟ್ಟಡಗಳನ್ನು ನಿರ್ವಿುಸಿಕೊಳ್ಳುತ್ತಿದ್ದಾರೆ. ಅವುಗಳಿಗೆ ಮುನ್ಸಿಪಲ್ ಕಾಯ್ದೆಯಡಿ ಕಡ್ಡಾಯವಾಗಿ ಕಂದಾಯ ವಸೂಲಿ ಮಾಡಬೇಕು ಎಂದು ತಿಳಿಸಿದರು.

ಪಪಂನ 5 ಕಿಮೀ ವ್ಯಾಪ್ತಿಯಲ್ಲಿ ಯಾವುದೇ ಬಗರ್​ಹುಕಂ ಮಂಜೂರಾತಿ ಮಾಡಿಕೊಡಬಾರದು ಮತ್ತು ಸರ್ವೆ ನಂ. 113ರಲ್ಲಿ ಅಗತ್ಯವಿರುವ ಸರ್ಕಾರಿ ಇಲಾಖೆಗಳಿಗೆ ಹಾಗೂ ಪತ್ರಿಕಾ ಭವನಕ್ಕೆ 1 ಎಕರೆ ಜಮೀನನ್ನು ಮಂಜೂರು ಮಾಡಿಕೊಡುವಂತೆ ತಹಸೀಲ್ದಾರ್ ಶಿವಾನಂದ ರಾಣೆ ಅವರಿಗೆ ಸೂಚಿಸಿದರು.

ಪಟ್ಟಣದಲ್ಲಿ ಈಗಾಗಲೇ ಮಿನಿ ವಿಧಾನಸೌಧ, ಹೆಲಿಪ್ಯಾಡ್, ತಾಪಂ ಕಟ್ಟಡಕ್ಕೆ ಜಾಗ ಗುರುತಿಸಲು ಕ್ರಮ ಕೈಗೊಳ್ಳಲಾಗಿದೆ. ಆನವಟ್ಟಿ ಗ್ರಾಪಂ ಶೀಘ್ರವೇ ಪಪಂ ಆಗಿ ಮೇಲ್ದರ್ಜೆಗೇರಲಿದೆ. ಅದಕ್ಕೆ ಬೇಕಾಗುವ ಕಟ್ಟಡಗಳು ಮತ್ತು ಹೆಲಿಪ್ಯಾಡ್​ಗೆ ಜಾಗ ಗುರುತಿಸಬೇಕು ಎಂದು ತಹಸೀಲ್ದಾರ್​ಗೆ ನಿರ್ದೇಶನ ನೀಡಿದರು.

ಶಾಸಕ ಕುಮಾರ ಬಂಗಾರಪ್ಪ ಅವರನ್ನು ಪಪಂ ಸದಸ್ಯರು ಇದೇ ಸಂದರ್ಭ ಸನ್ಮಾನಿಸಿದರು. ಪಪಂ ಇಂಜಿನಿಯರ್ ಶಲ್ಜಾ, ರಮೇಶ್ ಇತರರಿದ್ದರು.