ವಿರಾಜಪೇಟೆ: ಪಟ್ಟಣ ಸಹಕಾರ ಬ್ಯಾಂಕ್‌ನ ಆಡಳಿತ ಮಂಡಳಿಗೆ ಜು.31ರಂದು ಚುನಾವಣೆ ನಡೆಯಲಿದ್ದು, ಮತದಾರರು ತಮ್ಮ ಹಕ್ಕನ್ನು ಚಲಾಯಿಸಬೇಕು ಎಂದು ಪುರಸಭಾ ಸದಸ್ಯ ಪಟ್ಟಡ ರಂಜಿ ಪೂಣಚ್ಚ ಮನವಿ ಮಾಡಿದರು.
ಇಪ್ಪತ್ತು ವರ್ಷಗಳ ನಂತರ ಚುನಾವಣೆ ನಡೆಯುತ್ತಿದೆ. ಪ್ರಸ್ತುತ ಬ್ಯಾಂಕ್‌ನ ಬಡ್ಡಿ ದರ ವಿಪರೀತವಾಗಿದ್ದು, ಈ ಬಾರಿ ಮತದಾರರು ಸರಿಯಾದ ವ್ಯಕ್ತಿಗೆ ಮತ ನೀಡಿದರೆ ನ್ಯಾಯಯುತವಾದ ಬಡ್ಡಿ ದರವನ್ನು ನಿಗದಿ ಮಾಡಿ ಗ್ರಾಹಕರಿಗೆ ಹೊರೆ ಕಡಿಮೆಯಾಗುವಂತೆ ಮಾಡಬಹುದು ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಬ್ಯಾಂಕ್‌ನ ಸದಸ್ಯರು ಮತದಾನದ ಪಾವಿತ್ರೃತೆಯನ್ನು ಕಾಪಾಡಿಕೊಂಡು ಉತ್ತಮ ಅಭ್ಯರ್ಥಿಗಳ ಆಯ್ಕೆಗೆ ಮುಂದಾಗಬೇಕು ಎಂದು ಪುರಸಭೆ ಸದಸ್ಯ ರಾಜೇಶ್ ಪದ್ಮನಾಭ ತಿಳಿಸಿದರು.
ಸಾಮಾನ್ಯ ವರ್ಗದಿಂದ ಏಳು ಜನರು ಕಣದಲ್ಲಿದ್ದು, ರಂಜಿ ಪೂಣಚ್ಚ, ಸಿ.ಕೆ.ಪೃಥ್ವಿನಾಥ್, ರಾಜೇಶ್ ಪದ್ಮನಾಭ, ಭೀಮಯ್ಯ ಎಂ.ನೆಲ್ಲಚಂಡ ಸಂತೋಷ್, ಪಿ.ಮುತ್ತಣ್ಣ, ಮರ್‌ವಿನ್‌ಲೋಬೋ, ಮಹಿಳಾ ಅಭ್ಯರ್ಥಿಗಳಾಗಿ ದೇಚಮ್ಮ ಕಾಳಪ್ಪ, ಲಾಲಿ ಸತೀಶ್ ಕುಮಾರ್, ಪರಿಶಿಷ್ಟ ಜಾತಿ ಮೀಸಲು ಸ್ಥಾನಕ್ಕೆ ಎಚ್.ಮಹಾದೇವ, ಹಿಂದುಳಿದ ವರ್ಗ ಸ್ಥಾನಕ್ಕೆ ಜೋಕಿಂ ರೋಡ್ರಿಗ್ರಸ್, ಕೋಳುಮಂಡ ರಫೀಖ್ ಸ್ಫರ್ಧಿಸುತ್ತಿದ್ದಾರೆ ಎಂದು ತಿಳಿಸಿದರು.