ಜಿಲ್ಲೆ

ಪಟಾಕಿ ಹಚ್ಚಿ ಸಂಭ್ರಮಿಸಿದ ಅಭಿಮಾನಿಗಳು

ಬಳ್ಳಾರಿ : ಮಾಜಿ ಸಚಿವ ಬಿ. ನಾಗೇಂದ್ರ ಅವರಿಗೆ ವಾಲ್ಮೀಕಿ ಅಭಿವೃದ್ಧಿ ನಿಗಮ ಪ್ರಕರಣದಲ್ಲಿ ಸೋಮವಾರ ಜಾಮೀನು ದೊರೆತಿದ್ದರಿಂದ ಜಿಲ್ಲೆಯಲ್ಲಿ ನಾಗೇಂದ್ರ ಅಭಿಮಾನಿಗಳು ಹಾಗೂ ಕಾರ್ಯಕರ್ತರು ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸಿದರು.
ಕಾಂಗ್ರೆಸ್ ಜಿಲ್ಲಾದ್ಯಕ್ಷ ಅಲ್ಲಂ ಪ್ರಶಾಂತ ಮಾತನಾಡಿ, ಕಳೆದ ಕೆಲ ದಿನಗಳಿಂದ ಅಭಿವೃದ್ಧಿಯಲ್ಲಿ ಜಿಲ್ಲೆ ಹಿಂದೆ ಉಳಿದಿತ್ತು. ಈ ಎಲ್ಲ ಕಾಮಗಾರಿಗಳಿಗೆ ವೇಗ ದೊರೆಯಲಿದೆ. ಅಲ್ಲದೆ, ವಾಲ್ಮೀಕಿ ಜಯಂತಿ ದಿನದ ಒಂದು ಮುಂಚೆ ಬಿ. ನಾಗೇಂದ್ರ ಬಳ್ಳಾರಿಗೆ ಬರಲಿದ್ದಾರೆ. ಆ ದೇವರು ಅವರಿಗೆ ಒಳ್ಳೆಯದು ಮಾಡಲಿ. ಜಿಲ್ಲೆಗೆ ಅವರ ಆಗಮನದಿಂದ ಕಾಂಗ್ರೆಸ್ ಪಕ್ಷಕ್ಕೆ ಇನ್ನಷ್ಟು ಬಲ ಬರಲಿದೆ ಎಂದರು.
ನಾಗೇಂದ್ರ ಅಭಿಮಾನಿಗಳು ಹಾಗೂ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಮಂಗಳವಾರ ನಗರದ ಕನಕ ದುರ್ಗಮ್ಮ ದೇವಿಗೆ ವಿಶೇಷ ಪೂಜೆ ಸಲ್ಲಿಸಿ, 1001 ಟೆಂಗಿನಕಾಯಿ ಹೊಡೆದು ಭಕ್ತಿ ಅರ್ಪಿಸಲಿದ್ದಾರೆ ಎಂದು ನಾಗೇಂದ್ರ ಅಭಿಮಾನಿ ಕನಕ ತಿಳಿಸಿದರು.