ಜಿಲ್ಲೆ

ಪಟಾಕಿ ಸದ್ದಿಗೆ ಮಳೆಯ ತಣ್ಣೀರು

ಮೈಸೂರು: ನಗರದಲ್ಲಿ ಶುಕ್ರವಾರ ಸಂಜೆ ಸುರಿದ ಮಳೆ ಪಟಾಕಿ ಸಿಡಿಸುವವರ ಸಂಭ್ರಮಕ್ಕೆ ತಣ್ಣೀರೆರಚಿತು. ಪಟಾಕಿ ಸಿಡಿಸಲು ಮುಂದಾದ ಜನರಿಗೆ ಮಳೆ ನಿರಾಶೆ ಮೂಡಿಸಿತು.

ಕಳೆದ ಎರಡು ದಿನಗಳಿಂದ ದೀಪಾವಳಿಗಾಗಿ ಸಿದ್ಧತೆ ಮಾಡಿಕೊಂಡ ಜನರು, ಶುಕ್ರವಾರ ಪಟಾಕಿ ಸಿಡಿಲು ಸಜ್ಜಾಗಿದ್ದರು. ಅದಕ್ಕಾಗಿ ಪಟಾಕಿಗಳನ್ನು ಖರೀದಿಸಿದ್ದರು.

ಸಂಜೆಯಾಗುತ್ತಿದ್ದಂತೆ ಮಕ್ಕಳು, ಯುವ ಜನರು ಪಟಾಕಿ ಹೊಡೆಯಲು ಬೀದಿಗಿಳಿದರು. ಸಂಜೆ 6.30ರಿಂದ 7.45ಗಂಟೆ ವರೆಗೂ ಪಟಾಕಿ ಸದ್ದು ಎಲ್ಲೆಡೆ ಮಾರ್ದನಿಸಿತು. ಈ ಹೊತ್ತಿನಲ್ಲಿ ಮಳೆರಾಯ ರಂಗ ಪ್ರವೇಶವಾಯಿತು.

ಹನಿ ಹನಿ ಸಿಂಚನದೊಂದಿಗೆ ಮನೆಯ ಅಂಗಳ, ರಸ್ತೆಗಳು ನೀರಿನಲ್ಲಿ ಒದ್ದೆಯಾಯಿತು. ಇದರಿಂದ ನೀರು ನಿಂತುಕೊಂಡಿದ್ದರಿಂದ ಪಟಾಕಿ ಸಿಡಿಸಲು ಆಗಲಿಲ್ಲ.

ಹೀಗಾಗಿ ಮಕ್ಕಳು, ಯುವ ಜನರು ಮನೆ ಸೇರಿಕೊಂಡರು. ಶನಿವಾರ ನಡೆಯುವ ಬಲಿಪಾಡ್ಯಮಿ ದಿನ ಪಟಾಕಿ ಸದ್ದು ಅಬ್ಬರಿಸಲಿದೆ.