ಜಿಲ್ಲೆ

ಪಟಾಕಿ ಬಿಟ್ಟಾಕಿ ಪರಿಸರ ಉಳಿಸಿ ಜಾಥಾ

ಕೆ.ಎಂ.ದೊಡ್ಡಿ: ಪಟ್ಟಣದಲ್ಲಿ ಕರ್ನಾಟಕ ವೈಜ್ಞಾನಿಕ ಪರಿಷತ್ ಹಾಗೂ ಪ್ರಗತಿಪರ ಸಂಘಟನೆಗಳಿಂದ ‘ಪಟಾಕಿ ಬಿಟ್ಟಾಕಿ ಪರಿಸರ ಉಳಿಸಿ’ ಜಾಗೃತಿ ಜಾಥಾ ನಡೆಯಿತು.

ಪಟ್ಟಣ ಮದ್ದೂರು-ಮಳವಳ್ಳಿ ಮುಖ್ಯರಸ್ತೆ ಸೇರಿದಂತೆ ಪ್ರಮುಖ ಬೀದಿಗಳಲ್ಲಿ ಕ್ಯಾಂಡಲ್ ಹಿಡಿದು ಜಾಥಾ ನಡೆಸಿದ ಸಂಘಟನೆಯ ಕಾರ್ಯಕರ್ತರು ಪಟಾಕಿಯಿಂದ ದೂರವಿರುವಂತೆ ಜಾಗೃತಿ ಮೂಡಿಸಿದರು. ಕರ್ನಾಟಕ ವೈಜ್ಞಾನಿಕ ಪರಿಷತ್ ಜಿಲ್ಲಾಧ್ಯಕ್ಷ ಚಿಕ್ಕರಸಿನಕೆರೆ ಶಿವಲಿಂಗಯ್ಯ ಮಾತನಾಡಿ, ಪಟಾಕಿಯಿಂದ ಪರಿಸರ ಹಾಳಾಗುವುದರ ಜತೆಗೆ ಪ್ರಾಣಿ-ಪಕ್ಷಿ ಸಂಕುಲಗಳಿಗೆ ತೊಂದರೆಯಾಗಲಿದೆ. ಪಾಲಕರು ಮಕ್ಕಳಿಗೆ ಪಟಾಕಿ ಬದಲು ದೀಪ ಹಚ್ಚಿ ದೀಪಾವಳಿ ಹಬ್ಬ ಆಚರಿಸಲು ಹೇಳಿಕೊಡಬೇಕು ಎಂದು ಮನವಿ ಮಾಡಿದರು. ಸುಧಾಮೂರ್ತಿ ಅಭಿಮಾನಿಗಳ ಬಳಗದ ಅಧ್ಯಕ್ಷೆ ವಸಂತಮ್ಮ, ಸಮತಾ ಸೈನಿಕ ದಳದ ಜಿಲ್ಲಾಧ್ಯಕ್ಷ ಕರಡಕೆರೆ ಯೋಗೇಶ್, ಆಸರೆ ಸೇವಾ ಟ್ರಸ್ಟ್ ಅಧ್ಯಕ್ಷ ರಘು ವೆಂಕಟೆಗೌಡ, ಮುಖಂಡರಾದ ಮುಡಿನಹಳ್ಳಿ ತಿಮ್ಮಯ್ಯ, ಗುಡಿಗೆರೆ ಬಸವರಾಜು, ಸುಜಾತಾ, ಲೀಲಾ ರಾಮೇಗೌಡ, ವಿಜಯಲಕ್ಷ್ಮೀ, ಪುಟ್ಟಲಕ್ಷ್ಮಮ್ಮ, ಸವಿತಾ ಹಲವರಿದ್ದರು.