ಜಿಲ್ಲೆ

ಪಜೀರು ದೈವದ ಕಟ್ಟೆ ಮೇಲೆ ಚಪ್ಪಲಿ ಇಟ್ಟು ವಿಕೃತಿ ಮೆರೆದ ಕಿಡಿಗೇಡಿಗಳು

ಮಂಗಳೂರು: ಪಜೀರು ಬಳಿಯ ಮುಚ್ಚಿರ ಎಂಬಲ್ಲಿ ಕಲ್ಲು ಗುಳಿಗ ದೈವದ ಕಟ್ಟೆಯ ಮೇಲೆ ಚಪ್ಪಲಿ ಇಟ್ಟು ದುಷ್ಕರ್ಮಿಗಳು ವಿಕೃತಿ ಮೆರೆದಿದ್ದಾರೆ.

ಮಂಗಳವಾರ ಬೆಳಗ್ಗೆ ಈ ಘಟನೆ ಬೆಳಕಿಗೆ ಬಂದಿದೆ. ಕೊಣಾಜೆ ಪೊಲೀಸರಿಗೆ ದೂರು ನೀಡಲಾಗಿದೆ. ಧಾರ್ಮಿಕ ಭಾವನೆಗೆ ಧಕ್ಕೆ ಉಂಟು ಮಾಡುವ ಕೃತ್ಯಗಳು ಪದೇ ಪದೆ ನಡೆಯುತ್ತಿರುವುದು ಜನರಲ್ಲಿ ಆತಂಕ ಉಂಟು ಮಾಡಿದೆ.