ಪಿರಿಯಾಪಟ್ಟಣ ತಾಲೂಕಿನ ಹಂಡಿತವಳ್ಳಿ ಗ್ರಾಮದಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಶಾಸಕ ಕೆ.ಮಹದೇವ್ ಭೂಮಿಪೂಜೆ ನೆರವೇರಿಸಿದರು. ಅಣ್ಣಯ್ಯಶೆಟ್ಟಿ, ಗಗನ್, ರಾಮಚಂದ್ರ, ನಾಗೇಂದ್ರ, ಪುಟ್ಟಪ್ಪ, ಗೋವಿಂದರಾಜು, ಭಾಸ್ಕರ್ ಇತರರಿದ್ದರು. 
ಜಿಲ್ಲೆ

ಪಕ್ಷಭೇದ ಮರೆತು ಅಭಿವೃದ್ಧಿಗೆ ಒತ್ತು

ರಾವಂದೂರು: ನನ್ನ ಅಧಿಕಾರಾವಧಿಯಲ್ಲಿ ತಾಲೂಕಿನ ಕಟ್ಟಕಡೆಯ ಗ್ರಾಮದ ಅಭಿವೃದ್ಧಿಗೂ ಹೆಚ್ಚಿನ ಆದ್ಯತೆ ನೀಡಲಾಗಿದೆ ಎಂದು ಶಾಸಕ ಕೆ.ಮಹದೇವ್ ಹೇಳಿದರು.

ಪಿರಿಯಾಪಟ್ಟಣ ತಾಲೂಕಿನ ಹಂಡಿತವಳ್ಳಿ ಗ್ರಾಮದಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಶುಕ್ರವಾರ ಚಾಲನೆ ನೀಡಿ ಮಾತನಾಡಿದ ಅವರು, ಜಾತಿ, ಪಕ್ಷಭೇದ ಮರೆತು ಎಲ್ಲ ಗ್ರಾಮಗಳ ಅಭಿವೃದ್ಧಿಗೆ ಒತ್ತು ನೀಡಲಾಗುತ್ತಿದೆ ಎಂದರು.

ಜೆಡಿಎಸ್ ಪಿರಿಯಾಪಟ್ಟಣ ತಾಲೂಕು ಅಧ್ಯಕ್ಷ ಅಣ್ಣಯ್ಯಶೆಟ್ಟಿ, ಮುಖಂಡರಾದ ಗಗನ್, ರಾಮಚಂದ್ರ, ನಾಗೇಂದ್ರ, ಪುಟ್ಟಪ್ಪ, ಗೋವಿಂದರಾಜು, ಭಾಸ್ಕರ್, ಶಿವಾನಂದ್ ಗ್ರಾಪಂ ಸದಸ್ಯರಾದ ಎಚ್.ಆರ್.ದೀಪು, ಶಿವಮೂರ್ತಿ, ಕಾರ್ಯದರ್ಶಿ ನೇತ್ರಾವತಿ ಮತ್ತಿತರರು ಹಾಜರಿದ್ದರು.