?????????????????????????????????????????????????????????????????????????????????????????????????????????????????????????????????????????????????????????????????????????????????????????????? 
ಜಿಲ್ಲೆ

ಪಕ್ಷದ್ರೋಹಿಗಳಿಗೆ ಮತದಾರರಿಂದ ತಕ್ಕಪಾಠ

ಅರಸೀಕೆರೆ: ಪಕ್ಷದ್ರೋಹಿಗಳಿಗೆ ಚುನಾವಣೆಯಲ್ಲಿ ಮತದಾರರು ತಕ್ಕಪಾಠ ಕಲಿಸಲಿದ್ದಾರೆ. ರಾಜಕೀಯ ಏಳಿಗೆಗೆ ಕಾರಣರಾಗಿರುವ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರಿಗೆ ಮೋಸ ಮಾಡಬಹುದು. ಆದರೆ, ದೇವರ ಶಿಕ್ಷೆಯಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಮಾಜಿ ಸಚಿವ ಎಚ್.ಡಿ.ರೇವಣ್ಣ ವಿರುದ್ಧ ಕಿಡಿಕಾರಿದರು.

ನಗರದ ಸುನ್ನಿಚೌಕ ಬಡಾವಣೆಯಲ್ಲಿ ಗುರುವಾರ ಸಂಜೆ ಆಯೋಜಿಸಿದ್ದ ಅಲ್ಪಸಂಖ್ಯಾತ ಮುಖಂಡರು ಹಾಗೂ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದರು.

ವೀರಶೈವ ಲಿಂಗಾಯತರ ಕ್ಷೇತ್ರದಲ್ಲಿ ಈತನಿಗೆ ಟಿಕೆಟ್ ನೀಡಬಾರದು ಎಂದು ರಾಜ್ಯಸಭಾ ಮಾಜಿ ಸದಸ್ಯ ಎಚ್.ಕೆ.ಜವರೇಗೌಡ ಹಾಗೂ ವಿಧಾನಪರಿಷತ್ ಮಾಜಿ ಸದಸ್ಯ ಪಟೇಲ್ ಶಿವರಾಮು ಹೇಳಿದ್ದರು. ಅವರ ಮಾತು ಕೇಳದೆ ಮೂರು ಬಾರಿ ಶಾಸಕನನ್ನಾಗಿ ಮಾಡಿದ್ದು ನಮ್ಮ ಬಹುದೊಡ್ಡ ಪ್ರಮಾದವಾಗಿದೆ ಎಂದು ಶಿವಲಿಂಗೇಗೌಡರ ವಿರುದ್ಧ ಆಕ್ರೋಶವ್ಯಕ್ತಪಡಿಸಿದರು.

ಅರಸೀಕೆರೆ ವಿಧಾನಸಭಾ ಕ್ಷೇತ್ರದ ಸಮಗ್ರ ಅಭಿವೃದ್ಧಿ ಮನಗಂಡು ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಎಚ್.ಡಿ. ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದ ವೇಳೆ ಇನ್ನೂರೈವತ್ತು ಕೋಟಿ ರೂ. ಅನುದಾನ ಬಿಡುಗಡೆ ಮಾಡಿದ್ದರು. ಲಭ್ಯವಾದ ಆರ್ಥಿಕ ನೆರವಿನಿಂದ ಯಾವ ಕೆಲಸ, ಕಾರ್ಯಗಳು ನಡೆದಿವೆ ಎಂಬುದನ್ನು ಜನರೆದುರು ಹೇಳಬೇಕು. ಅದೇನೋ ಬಿಚ್ಚಿಡಲಿ ಎಂದು ಸವಾಲು ಹಾಕಿದ್ದನ್ನು ನಾವು ಸ್ವೀಕರಿಸಿದ್ದೇವೆ. ಇದೀಗ ನಮ್ಮದೇನಿದೆ ಎಂಬುದನ್ನು ಅವರು ಬಿಚ್ಚಿಡಬೇಕು ಎಂದರು.

ಇತ್ತೀಚೆಗೆ ನಮ್ಮಿಬ್ಬರ ನಡುವೆ ನಡೆದಿದ್ದ ಆಡಿಯೋ ಸಂಭಾಷಣೆ ಎಡಿಟ್ ಮಾಡಲಾಗಿದೆ ಎಂದು ಶಿವಲಿಂಗೇಗೌಡ ಆರೋಪಿಸಿದ್ದಾರೆ. ಬಿಜೆಪಿಯವರು ರಾಗಿ ಕಳ್ಳ ಎಂದ ಕೂಡಲೇ ಧರ್ಮಸ್ಥಳಕ್ಕೆ ಹೋಗಿ ಆಣೆ ಪ್ರಮಾಣ ಮಾಡಿದರು. ಆಡಿಯೋ ಎಡಿಟ್ ಮಾಡಿಲ್ಲವೆಂದು ನಾವು ಮಂಜುನಾಥನ ಸನ್ನಿಧಿಯಲ್ಲಿ ಆಣೆ ಮಾಡುತ್ತೇವೆ. ಇದಕ್ಕೆ ಶಾಸಕರು ಸಿದ್ಧರಾಗಿದ್ದಾರೆಯೇ ಎಂದು ಪಂಥಾಹ್ವಾನ ನೀಡಿದರು.

ರಾಜ್ಯದ ಉದ್ದಗಲಕ್ಕೂ ಪದವಿ,ಪದವಿ ಪೂರ್ವ ಹಾಗೂ ಪ್ರೌಢಶಾಲೆಗಳನ್ನು ಆರಂಭಿಸುವ ಮೂಲಕ ಶೈಕ್ಷಣಿಕ ಕ್ರಾಂತಿ ನಡೆಸಿದ್ದೇವೆ. ವಿದ್ಯುತ್ ಕ್ಷೇತ್ರಕ್ಕೆ ನಾವು ನೀಡಿದ ಕೊಡುಗೆಯನ್ನು ಯಾರು ಅಲ್ಲಗಳೆಯುವಂತಿಲ್ಲ. ಬಿಳಿಚೌಡಯ್ಯ, ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಬಂಡಿಗೌಡರ ರಾಜಣ್ಣ, ಜಿಪಂ ಮಾಜಿ ಅಧ್ಯಕ್ಷ ಹುಚ್ಚೇಗೌಡರಿಗೆ ಸ್ಥಾನಮಾನ ನೀಡಿದ್ದನ್ನು ಮರೆಯಬಾರದು.ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಜೆ.ಸಿ.ಪುರ, ಬಾಣಾವರ, ಹಾರನಹಳ್ಳಿ ಸೇರಿ ವಿವಿಧ ಗ್ರಾಮಗಳಲ್ಲಿರುವ ಶಾದಿಮಹಲ್, ಮಸೀದಿ ಅಭಿವೃದ್ಧಿಗೆ ಹೆಚ್ಚಿನ ಅನುದಾನ ನೀಡುವುದಾಗಿ ಭರವಸೆ ನೀಡಿದರು.

ವಕ್ಫ್ ಬೋರ್ಡ್ ಜಿಲ್ಲಾಧ್ಯಕ್ಷ ಸಯ್ಯದ್ ಸಿಕಂದರ್ ಮಾತನಾಡಿ, ನಮ್ಮ ರಾಜಕೀಯ ಏಳಿಗೆ ಸಹಿಸದ ಶಾಸಕ ಕೆ.ಎಂ.ಶಿವಲಿಂಗೇಗೌಡ ಹಾಗೂ ಮತ್ತವರ ಬೆಂಬಲಿಗರು ನೀಡಿರುವ ಕಿರುಕುಳವನ್ನು ಸಹಿಸಿಕೊಂಡಿದ್ದೇನೆ. ಅಲ್ಪಸಂಖ್ಯಾತ ಸಮುದಾಯ ಯಾರ ಕಪಿಮುಷ್ಠಿಯಲ್ಲಿಲ್ಲ ಎಂಬುದನ್ನು ಮೊದಲು ಅರ್ಥ ಮಾಡಿಕೊಳ್ಳಲಿ ಎಂದರು.

ತಾಲೂಕು ಜೆಡಿಎಸ್ ಅಧ್ಯಕ್ಷ ಕೆ.ಎಸ್.ಚಂದ್ರಶೇಖರ್, ಅಭ್ಯರ್ಥಿ ಬಾಣಾವರ ಅಶೋಕ್, ನಗರಸಭೆ ಸದಸ್ಯ ಝಾಕೀರ್, ತಾಪಂ ಮಾಜಿ ಸದಸ್ಯ ಗಂಗಾಧರ್, ಮುಖಂಡರಾದ ಕೆಂಕೆರೆ ಕೇಶವಮೂರ್ತಿ, ಹರ್ಷವರ್ಧನ್, ಭಾಷಾ, ದಾದು, ಸಾಬ್ ಜಾನ್ ಸಾಬ್, ಆರೀಫ್, ಇಕ್ಬಾಲ್, ಜೆ.ಸಿ.ಪುರ ಸಿಕಂದರ್, ಪ್ಯಾರು ಇನ್ನಿತರರಿದ್ದರು. 24ಎಆರ್‌ಎಸ್1ಇಪಿ
ಸುನ್ನಿಚೌಕ್ ಬಡಾವಣೆಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಎಚ್.ಡಿ.ರೇವಣ್ಣ ಮಾತನಾಡಿದರು. ಅಶೋಕ್, ಗಂಗಾಧರ್, ಕೇಶವ ಮೂರ್ತಿ, ಹರ್ಷವರ್ಧನ್, ಭಾಷಾ, ದಾದು, ಸಾಬ್ ಜಾನ್ ಸಾಬ್, ಆರೀಪ್, ಇಕ್ಬಾಲ್ ಇತರರಿದ್ದಾರೆ.