ಜಿಲ್ಲೆ

ಪಕ್ಷದಲ್ಲಿನ ಗೊಂದಲ ವಾರದಲ್ಲಿ ಬಗೆಹರಿಯಲಿದೆ

ವಿಜಯವಾಣಿ ಸುದ್ದಿಜಾಲ ಹುಬ್ಬಳ್ಳಿ:

ರಾಜ್ಯ ಬಿಜೆಪಿ ಸಂಘಟನೆಯಲ್ಲಿ ಗೊಂದಲ ಇರುವುದು ಸತ್ಯ. ಮುಂದಿನ ಒಂದು ವಾರದಲ್ಲಿ ಎಲ್ಲ ಗೊಂದಲ ಬಗೆಹರಿಯುವ ಸಾಧ್ಯತೆ ಇದೆ ಎಂದು ಮಾಜಿ ಸಚಿವ ಮುರುಗೇಶ ನಿರಾಣಿ ಹೇಳಿದರು.

ಹುಬ್ಬಳ್ಳಿಯಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗೊಂದಲವನ್ನು ಪಕ್ಷದ ರಾಷ್ಟ್ರೀಯ ಮುಖಂಡರು ಹಾಗೂ ಪರಿವಾರದವರು ಸೂಕ್ಷ ್ಮಾಗಿ ಗಮನಿಸುತ್ತಿದ್ದಾರೆ. ಎಲ್ಲರೊಂದಿಗೆ ಮುಖಾಮುಖಿಯಾಗಿ ಹಾಗೂ ಗುಂಪಾಗಿ ಕರೆಯಿಸಿ ಈಗಾಗಲೇ ಮಾತುಕತೆ ನಡೆಸಿದ್ದಾರೆ ಎಂದರು.

ಮುಂದಿನ 10 ವರ್ಷಗಳಲ್ಲಿ ದೇಶದಲ್ಲಿ ಡಿಸೇಲ್, ಪೆಟ್ರೋಲ್ ಚಾಲಿತ ವಾಹನಗಳು ಕಾಣಸಿಗುವುದಿಲ್ಲ. ಸಿಎನ್​ಜಿ ಹಾಗೂ ವಿದ್ಯುತ್ ಚಾಲಿತ ವಾಹನಗಳೇ ಇರಲಿವೆ. ಪ್ರಧಾನಿ ನರೇಂದ್ರ ಮೋದಿ ಅವರು ಇಥೆನಾಲ್ ಬಳಕೆಗೆ ಉತ್ತೇಜನ ನೀಡುವ ಮೂಲಕ ಶೇ. 20ರಷ್ಟು ತೈಲ ಆಮದು ತಗ್ಗಿಸಲು ಕ್ರಮ ಕೈಗೊಂಡಿದ್ದಾರೆ. ಮುಂದಿನ ದಿನಗಳಲ್ಲಿ ವಿಮಾನಗಳು ಬಳಸುವ ಇಂಧನದಲ್ಲಿ ಶೇ. 5ರಷ್ಟು ಪ್ರಮಾಣವು ಸ್ವದೇಶಿ ಉತ್ಪನ್ನವಾಗಿರಲಿದೆ ಎಂದು ಅಭಿಪ್ರಾಯಪಟ್ಟರು.