ಪಾ.ಶ್ರೀ.ಅನಂತರಾಮ್ ಕೋಲಾರ
ಬಿಜೆಪಿಯ ತತ್ವ ಸಿದ್ಧಾಂತ, ಕಾರ್ಯಕ್ರಮಗಳ ಬಗ್ಗೆ ವಿಶ್ವಾಸವಿಟ್ಟು ಪಕ್ಷಕ್ಕೆ ಸೇರುವವರನ್ನು ಸೇರ್ಪಡೆ ಮಾಡಿಕೊಳ್ಳಲು ವಿರೋಧ ವ್ಯಕ್ತಪಡಿಸದೆ ಬೂತ್ಮಟ್ಟದಲ್ಲಿ ಪಕ್ಷದ ಬಲವರ್ಧನೆಗೆ ಮುಖಂಡರು ಗಮನಹರಿಸುವಂತೆ ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ಸಿಂಗ್ ತಾಕೀತು ಮಾಡಿದ್ದಾರೆ.
ಬೆಂಗಳೂರಿನ ದೇವನಹಳ್ಳಿಯಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಪಕ್ಷ ಸಂಟನಾ ಸಭೆಯಲ್ಲಿ ಜಿಲ್ಲೆಯಿಂದ ಪಾಲ್ಗೊಂಡಿದ್ದ ಮುಖಂಡರೊಂದಿಗೆ ಪಕ್ಷದ ಸ್ಥಿತಿ&ಗತಿಗೆ ಸಂಬಂಧಿಸಿದಂತೆ ಮಾಹಿತಿ ಪಡೆದ ಬಳಿಕ ಮಾತನಾಡಿ, ಚುನಾವಣೆಯಲ್ಲಿ ಕೋಲಾರದ 6 ೇತ್ರಗಳ ಪೈಕಿ ಕನಿಷ್ಠ 3ರಿಂದ 4 ಸ್ಥಾನ ಗೆಲ್ಲಬೇಕು ಎಂದು ಸೂಚಿಸಿದ್ದಾರೆ.
ವರ್ತೂರ್, ಕೋಡಿಹಳ್ಳಿ ಸೇರಲು ಗ್ರೀನ್ ಸಿಗ್ನಲ್: ಮಾಜಿ ಶಾಸಕರಾದ ವರ್ತೂರ್ ಪ್ರಕಾಶ್, ಕೆ.ಎಸ್.ಮಂಜುನಾಥಗೌಡ ಸೇರಿ ಯಾರೇ ಪಕ್ಷಕ್ಕೆ ಬಂದರೂ ಮುಕ್ತಕಂಠದಿಂದ ಸ್ವಾಗತಿಸಿ, ಯಾರಿಗೆ ಟಿಕೆಟ್ ಕೊಡುವುದನ್ನು ವರಿಷ್ಠರು ನಿರ್ಧರಿಸುತ್ತಾರೆ. ಅಭ್ಯರ್ಥಿ ಆಯ್ಕೆಗೆ ಮುನ್ನ ಜನಾಭಿಪ್ರಾಯ ಸಂಗ್ರಹಣೆ ಮಾಡಿ, ಯಾರ ಪರವಾಗಿ ಜನತೆ ಒಲವು ಹೊಂದಿರುತ್ತಾರೋ ಅಂತಹವರಿಗೆ ಬಿ.ಫಾರಂ ನೀಡಲಾಗುತ್ತದೆ. ಪಕ್ಷದ ಬಲವರ್ಧನೆಗಾಗಿ ಪ್ರಮುಖರನ್ನು ಸೇರ್ಪಡೆ ಮಾಡಿಕೊಳ್ಳುವುದು ಅಗತ್ಯವೆಂದು ಪರೋಕ್ಷವಾಗಿ ವರ್ತೂರ್ ಪ್ರಕಾಶ್, ಮಂಜುನಾಥಗೌಡ ಸೇರ್ಪಡೆಗೆ ಗ್ರೀನ್ ಸಿಗ್ನಲ್ ನೀಡಿದ್ದಾರೆ.
ರೌಡಿಶೀಟರ್, ರೆಪಿಸ್ಟ್ಗಳು ಬೇಡ: ಜಿಲ್ಲಾ ಉಸ್ತುವಾರಿ ಸಚಿವ ಮುನಿರತ್ನ, ಸಂಸದ ಎಸ್.ಮುನಿಸ್ವಾಮಿ ಅವರು ವರ್ತೂರ್ ಪ್ರಕಾಶ್, ಮಂಜುನಾಥಗೌಡ ಪಕ್ಷಕ್ಕೆ ಸೇರುವುದರಿಂದ ಆಗುವ ಲಾಭ ಕುರಿತು ಅಭಿಪ್ರಾಯ ತಿಳಿಸಿದಾಗ, ಪಕ್ಷಕ್ಕೆ ಲಾಭವಾಗುವುದಾದರೆ ಸೇರಿಸಿಕೊಳ್ಳಲು ಅಭ್ಯಂತರವಿಲ್ಲ. ಆದರೆ ರೌಡಿಶೀಟರ್, ರೆಪಿಸ್ಟ್, ಭ್ರಷ್ಟರು ಬೇಡವೆಂದು ಸೂಚಿಸಿದರೆಂದು ಮೂಲಗಳಿಂದ ತಿಳಿದು ಬಂದಿದೆ.
ಯಾರನ್ನು ಸೇರಿಸಿಕೊಳ್ಳಬೇಕು ಎಂಬುದರ ಬಗ್ಗೆ ಜಿಲ್ಲಾ ಕೋರ್ ಕಮಿಟಿ ಸಭೆಯಲ್ಲಿ ಆದಷ್ಟು ಬೇಗನೆ ತೀರ್ಮಾನ ತೆಗೆದುಕೊಂಡು ರಾಜ್ಯಾಧ್ಯಕ್ಷರ ಮೂಲಕ ತಮಗೆ ತಿಳಿಸಿದಲ್ಲಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ನಡ್ಡಾ ಅವರೊಂದಿಗೆ ಚರ್ಚಿಸಿ ಸೂಕ್ತ ತೀರ್ಮಾನ ತೆಗೆದುಕೊಳ್ಳಲಾಗುವುದು. ಸಾಧ್ಯವಾದರೆ ಮೇ ತಿಂಗಳಲ್ಲೇ ಪಕ್ಷ ಸೇರ್ಪಡೆ ಕಾರ್ಯಕ್ರಮ ಆಯೋಜನೆಗೆ ಒಪ್ಪಿಗೆ ದೊರೆತಲ್ಲಿ ಪ್ರಮುಖ ನಾಯಕರನ್ನು ಜಿಲ್ಲೆಗೆ ಕರೆತರಲಾಗುವುದು ಎಂದು ಭರವಸೆ ನೀಡಿದ್ದಾರೆ ಎನ್ನಲಾಗಿದೆ.
ಅಸಮಾಧಾನ: ಮಾಜಿ ಶಾಸಕರಾದ ವರ್ತೂರ್ ಪ್ರಕಾಶ್ ಮತ್ತು ಮಂಜುನಾಥಗೌಡ ಬಿಜೆಪಿ ಸೇರ್ಪಡೆಗೆ ವಿರೋಧ ವ್ಯಕ್ತಪಡಿಸಲು ಕೆಲವರು ತಯಾರಿದ್ದರಾದರೂ ಧೈರ್ಯ ಸಾಲದೆ ಮೌನಕ್ಕೆ ಶರಣಾಗಿದ್ದರಲ್ಲದೆ, ಸಭೆ ಮುಗಿದ ಬಳಿಕ ಜಿಲ್ಲಾಧ್ಯಕ್ಷ ಡಾ.ವೇಣುಗೋಪಾಲ್ ಹಾಗೂ ಕೋರ್ ಕಮಿಟ್ ಸದಸ್ಯರ ಬಳಿ ವಿರೋಧ ವ್ಯಕ್ತಪಡಿಸಿದಾಗ ಸಂಟನೆ ಮಾಡೋಣ, ಟಿಕೆಟ್ ವಿಚಾರ ವರಿಷ್ಠರು ನಿರ್ಧರಿಸುತ್ತಾರೆಂದು ಹೇಳಿದ್ದಾರೆಂದು ತಿಳಿದುಬಂದಿದೆ.
ಮುಖಂಡರಿಗೆ ಕ್ಲಾಸ್: ಕೇಂದ್ರ ಮತ್ತು ರಾಜ್ಯ ಸರ್ಕಾರ ಜಾರಿಗೆ ತಂದಿರುವ ಜನಪರ ಯೋಜನೆಗಳು ಹಾಗೂ ಬಜೆಟ್ ಬಗ್ಗೆ ಬೂತ್ ಮಟ್ಟದಲ್ಲಿ ಪ್ರಚಾರ ಕೈಗೊಳ್ಳಲು ಕಾರ್ಯಕರ್ತರನ್ನು ಸಜ್ಜುಗೊಳಿಸದ ಬಗ್ಗೆ ಅರುಣ್ ಸಿಂಗ್ ಮುಖಂಡರನ್ನು ತರಾಟೆಗೆ ತೆಗೆದುಕೊಂಡು ಮೇ 30ರೊಳಗೆ ಬೂತ್ ಮಟ್ಟದಲ್ಲಿ ಪ್ರವಾಸ ಕೈಗೊಂಡು ಮನೆಮನೆಗೆ ಬಿಜೆಪಿ ಕಾರ್ಯಕ್ರಮ ತಲುಪಿಸುವುದರ ಮೂಲಕ ಪಕ್ಷ ಸಂಟನೆಗೆ ಒತ್ತು ನೀಡುವಂತೆ ಸೂಚಿಸಿದ್ದಾರೆ.
ಬಿಎಸ್ವೈ ಕಿವಿಮಾತು: ರಾಜ್ಯದಲ್ಲಿ ಮತ್ತೆ ಬಿಜೆಪಿಯನ್ನು ಅಧಿಕಾರಕ್ಕೆ ತರಲು ಕಾರ್ಯಕರ್ತರು ಒಟ್ಟಾಗಿ ಕೆಲಸ ಮಾಡಬೇಕು, ಪಕ್ಷಕ್ಕೆ ಯಾರೇ ಸೇರಿದರೂ ಸ್ವಾಗತಿಸೋಣ. ಪಕ್ಷದ ನಿಷ್ಠಾವಂತ ಕಾರ್ಯಕರ್ತರಿಗೆ ಎಂದೂ ಅನ್ಯಾಯವಾಗಲ್ಲ ಎಂದು ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಕಿವಿಮಾತು ಹೇಳಿ, ಕೋಲಾರ ಜಿಲ್ಲೆಯಲ್ಲಿ ಪ್ರವಾಸ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ.
ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ, ಸಚಿವರಾದ ಆರ್.ಅಶೋಕ್, ಮುನಿರತ್ನ, ಸಂಸದ ಎಸ್.ಮುನಿಸ್ವಾಮಿ, ವಿಧಾನ ಪರಿಷತ್ ನಲ್ಲಿ ಮುಖ್ಯ ಸಚೇತಕರಾಗಿರುವ ವೈ.ಎ.ನಾರಾಯಣಸ್ವಾಮಿ ವೇದಿಕೆಯಲ್ಲಿದ್ದರು.ಬಿಜೆಪಿ ಜಿಲ್ಲಾ ಕೋರ್ ಕಮಿಟಿ ಸದಸ್ಯರಾದ ವಿಜಯಕುಮಾರ್, ಎಸ್.ಬಿ.ಮುನಿವೆಂಕಟಪ್ಪ, ಸುರೇಶ ನಾರಾಯಣ ಕುಟ್ಟಿ, ಬಿ.ಪಿ.ವೆಂಕಟಮುನಿಯುಪ್ಪ, ಯಟ್ಟಕೋಡಿ ಕೃಷ್ಣಾರೆಡ್ಡಿ, ಎಂ.ಕೆ.ವಾಸುದೇವ, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಕೃಷ್ಣಮೂರ್ತಿ, ಕೂಡಾ ಅಧ್ಯಕ್ಷ ಓಂಶಕ್ತಿ ಚಲಪತಿ, ವಕೀಲ ಮಾಗೇರಿ ನಾರಾಯಣಸ್ವಾಮಿ, ಮಾಜಿ ಶಾಸಕರಾದ ಎಂ.ನಾರಾಯಣಸ್ವಾಮಿ, ವೈ.ಸಂಪಂಗಿ, ಜಿಪಂ ಮಾಜಿ ಸದಸ್ಯರಾದ ಅಶ್ವಿನಿ, ಬಿ.ಪಿ.ಮಹೇಶ್, ಕೋಲಾರ ನಗರ ಟಕ ಅಧ್ಯಕ್ಷ ತಿಮ್ಮರಾಯಪ್ಪ, ಗ್ರಾಮಾಂತರ ಅಧ್ಯಕ್ಷ ಸಿ.ಡಿ.ರಾಮಚಂದ್ರ, ಮಾಲೂರು ೇತ್ರದ ಮುಖಂಡರಾದ ಪ್ರಭಾಕರ್, ಹೂಡಿ ವಿಜಯಕುಮಾರ್, ಮಾಜಿ ಜಿಲ್ಲಾಧ್ಯಕ್ಷ ಸುರೇಂದ್ರಗೌಡ, ಯುವ ಮೋರ್ಚಾ ಅಧ್ಯಕ್ಷ ಬಾಲಾಜಿ, ಶ್ರೀನಿವಾಸಪುರದ ಜಯರಾಮರೆಡ್ಡಿ, ಬಂಗಾರಪೇಟೆ ಪುರಸಭೆ ಸದಸ್ಯ ಕೆ.ಚಂದ್ರಾರೆಡ್ಡಿ, ಎಸ್ಟಿ ಮೋರ್ಚಾ ಮುಖಂಡ ಹನುಮಂತಪ್ಪ, ಯುವ ಮೋರ್ಚಾ ಅಧ್ಯಕ್ಷ ಬಾಲಾಜಿ, ಮಹಿಳಾ ಮೋರ್ಚಾ ಮುಖಂಡರಾದ ಅರುಣಮ್ಮ, ಮಮತಾ ಸೇರಿದಂತೆ 70ಕ್ಕೂ ಹೆಚ್ಚು ಅಪೇತರು ಸಭೆಯಲ್ಲಿ ಪಾಲ್ಗೊಂಡಿದ್ದರು.