ಚಿಕ್ಕಮಗಳೂರು: ಸೈದ್ಧಾಂತಿಕ ಆಂದೋಲನ, ರಾಷ್ಟç ಮೊದಲು ಹಾಗೂ ತತ್ವದ ಮೇಲೆ ನಂಬಿಕೆಯಿಟ್ಟುಕೊಳ್ಳುವ ಜೊತೆಗೆ ಹಿಂದುತ್ವದ ವಿಚಾರಧಾರೆಗಳನ್ನು ಅಳವಡಿಸಿಕೊಂಡಿರುವ ಪಕ್ಷ ಭಾರತೀಯ ಜನತಾಪಾರ್ಟಿ ಎಂದು ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ತಿಳಿಸಿದರು.
ನಗರದ ಜಿಲ್ಲಾ ಬಿಜೆಪಿ ಪಾಂಚಜನ್ಯ ಕಚೇರಿಯಲ್ಲಿ ಏರ್ಪಡಿಸಿದ್ಧ ಪಕ್ಷ ಸೇರ್ಪಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಪಕ್ಷದಲ್ಲಿ ನಿಷ್ಠೆ ಹಾಗೂ ಪರಿಶ್ರಮದಿಂದ ಮುಂದುವರೆದವರಿಗೆ ಸೂಕ್ತ ಸ್ಥಾನಮಾನಗಳು ಲಭಿಸಲಿವೆ ಎಂದು ಹೇಳಿದರು.
ಹೊಳೆಯಲ್ಲಿ ಸುಳಿಗಳು ಕಣ್ಣಿಗೆ ಕಾಣುತ್ತವೆ. ಆದರೆ ರಾಜಕೀಯದ ಹೊಳೆಯಲ್ಲಿ ಸುಳಿಗಳು ಕಾಣುವುದಿಲ್ಲ. ಫಲಾಪೇಕ್ಷೆ ಇಲ್ಲದೇ ಕೆಲಸ ನಿರ್ವಹಿಸುವ ಜೊತೆಗೆ ಏಳುಬೀಳನ್ನು ಸರಿಸಮಾನಾಗಿ ಸ್ವೀಕರಿಸಿದವರಿಗೆ ಮಾತ್ರ ಪಕ್ಷವು ಮುಂದೊAದು ದಿನದಲ್ಲಿ ಅವಕಾಶಗಳನ್ನು ಕಲ್ಪಿಸಿಕೊಡಲಿದೆ ಎಂದರು.
ರಾಜಕೀಯದಲ್ಲಿ ಜೀವನ ಪೂರ್ತಿ ಸ್ಪರ್ಧೆಗಳು ಸಾಮಾನ್ಯ. ಸ್ಪರ್ಧೆಗಳು ಇಂದಿಗೆ ಮುಗಿಯಿತೆಂದು ಭಾವಿಸಿಕೊಳ್ಳಬಾರದರು. ಆ ನಿಟ್ಟಿನಲ್ಲಿ ಹೊಸದಾಗಿ ಸೇರ್ಪಡೆಗೊಂಡಿರುವ ಮಹಿಳಾ ತಂಡ ಪಕ್ಷದ ಸಿದ್ದಾಂತ, ಬದ್ಧತೆಯನ್ನು ಶ್ರದ್ಧೆಯಿಂದ ನಿರ್ವಹಿಸಿದರೆ ಭವಿಷ್ಯದ ಚುನಾವಣೆಗಳಲ್ಲಿ ಸ್ಥಾನಗಳು ಸಿಗಲಿದೆ ಎಂದು ಹೇಳಿದರು.
ಕೆಲವು ಮಂದಿ ರಾಜಕಾರಣ ಹೊಲಸು ಎನ್ನುತ್ತಾರೆ. ಆದರೆ ಪರಿವರ್ತನೆಗೆ ಮುಂದಾಗುವುದಿಲ್ಲ. ಜನಪರ ಕೆಲಸ ಮಾಡುವುದು ಅತಿದೊಡ್ಡ ಜವಾಬ್ದಾರಿ. ಜನಸಾಮಾನ್ಯರ ನೋವು, ಸಂಕಷ್ಟ ಹಾಗೂ ಸಮಸ್ಯೆಗಳಿಗೆ ತಳಮಟ್ಟದಿಂದಲೇ ಸ್ಪಂದಿಸಿದಾಗ ಸಮಾಜದ ಮುಂದೆ ನಾಯಕರೆನಿಸಿಕೊಳ್ಳಲು ಸಾಧ್ಯ ಎಂದರು.
ಇAದಿನ ರಾಜಕಾರಣಕ್ಕೆ ಪರಿಣಿತರು, ಅನುಭವಿಗಳು ಹಾಗೂ ಯುವ ಮುಂದಾಳುಗಳು ಹೆಜ್ಜೆ ಇಡಬೇಕು. ಅಲ್ಲದೆ ರಾಜಕೀಯ ಹಿನ್ನೆಲೆಯಿಲ್ಲದ ಕುಟುಂಬದ ಮಕ್ಕಳು ರಾಜಕಾರಣಕ್ಕೆ ಧಾವಿಸಿದಾಗ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಉತ್ತಮ ನಾಯಕರಾಗಿ ಹೊರಹೊಮ್ಮಲು ಸಹಕಾರಿಯಾಗಲಿದೆ ಎಂದು ಹೇಳಿದರು.
ಬಿಜೆಪಿ ಎಂದಿಗೂ ಜಾತಿರಾಜಕಾರಣ ಮಾಡದಿರುವ ವಿಭಿನ್ನ ಪಕ್ಷವಾಗಿದೆ. ಕಾಂಗ್ರೆಸ್‌ನಲ್ಲಿ ರಾಷ್ಟçದ ಗೀತೆಗಳನ್ನು ಹಾಡಿದರೆ ಕ್ಷಮೆ ಕೇಳಬೇಕಾಗುತ್ತದೆ. ಆದರೆ ವಿಧಾನಸಭೆಯಲ್ಲಿ ಪಾಕಿಸ್ತಾನ ಜಿಂದಾಬಾದ್ ಎನ್ನುವ ಘೋಷಣೆಗಳಿಗೆ ಇಂದಿಗೂ ಕ್ಷಮೆ ಬಂದಿಲ್ಲ. ಇದೇ ಬಿಜೆಪಿ ಹಾಗೂ ಇತರೆ ಪಕ್ಷಗಳಿಗಿರುವ ವ್ಯತ್ಯಾಸ ಎಂದರು.
ಬಿಜೆಪಿ ಜಿಲ್ಲಾಧ್ಯಕ್ಷ ಎಂ.ಆರ್.ದೇವರಾಜ್‌ಶೆಟ್ಟಿ ಮಾತನಾಡಿ, ದೇಶದಲ್ಲಿ ನರೇಂದ್ರ ಮೋದಿ ಆಡಳಿತ ವೈಖರಿ, ಸಿದ್ದಾಂತ ಹಾಗೂ ರಾಷ್ಟçದ ಮೇಲಿಟ್ಟಿರುವ ಪ್ರೇಮವನ್ನು ಪಾಲಿಸಿಕೊಂಡು ಇಂದು ಸುಮಾರು ೫೦ಕ್ಕೂ ಹೆಚ್ಚು ಮಂದಿ ಪಕ್ಷ ಸೇರ್ಪಡೆಗೊಂಡಿರುವುದು ಹೆಮ್ಮೆಯ ಸಂಗತಿ. ಹೀಗಾಗಿ ಹೊಸ ಸದಸ್ಯರು ನಾಡು ಮತ್ತು ದೇಶ ಕಟ್ಟುವ ಕಾಯಕದಲ್ಲಿ ಪ್ರಾಮಾಣಿಕವಾಗಿ ತೊಡಗಿಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.
ಪಕ್ಷ ಸೇರ್ಪಡೆಗೊಂಡು ಮಾತನಾಡಿದ ವರ್ಷ ಅಭಿಷೇಕ್‌ಗೌಡ, ಕೇಂದ್ರದಲ್ಲಿ ನರೇಂದ್ರ ಮೋದಿ ಹಾಗೂ ರಾಜ್ಯದಲ್ಲಿ ಸಿ.ಟಿ.ರವಿ ಅವರ ಆಡಳಿತವನ್ನು ಕೂಲಂಕಷವಾಗಿ ಅರಿತುಕೊಂಡು ಬಿಜೆಪಿ ಸೇರ್ಪಡೆಗೊಂಡಿz್ದೆÃನೆ. ಅಲ್ಲದೇ ಬಿಜೆಪಿಯಲ್ಲಿ ಮಹಿಳೆಯರಿಗೆ ವಿಶೇಷ ಗೌರವ ಹೊಂದಿರುವ ಕಾರಣ ತಮ್ಮ ಜೊತೆ ಅನೇಕರು ಇಂದು ಪಕ್ಷಕ್ಕೆ ಸೇರ್ಪಡೆಗೊಂಡಿದ್ದಾರೆ ಎಂದು ತಿಳಿಸಿದರು.
ಇದೇ ವೇಳೆ ವರ್ಷ ಅಭಿಷೇಕ್‌ಗೌಡ ಸಾರಥ್ಯದಲ್ಲಿ ಸುಮಾರು ೫೦ ಮಂದಿ ಮಹಿಳೆಯರು ಬಿಜೆಪಿಗೆ ಸೇರ್ಪಡೆಗೊಂಡರು. ಬಿಜೆಪಿ ಜಿಲ್ಲಾಧ್ಯಕ್ಷರು ಪಕ್ಷದ ಬಾವುಟ ನೀಡಿ ಅವರನ್ನು ಬರಮಾಡಿಕೊಂಡರು.
ಈ ಸಂದರ್ಭದಲ್ಲಿ ಬಿಜೆಪಿ ನಗರಾಧ್ಯಕ್ಷ ಪುಷ್ಪರಾಜ್, ಜಿಲ್ಲಾ ಉಪಾಧ್ಯಕ್ಷೆ ವೀಣಾ ರತ್ನಕರ್, ಓಬಿಸಿ ರಾಜ್ಯ ಕಾರ್ಯದರ್ಶಿ ಬಿ.ರಾಜಪ್ಪ, ಸಿಡಿಎ ಮಾಜಿ ಅಧ್ಯಕ್ಷ ಕೋಟೆ ರಂಗನಾಥ್, ನಗರಸಭೆ ಉಪಾಧ್ಯಕ್ಷೆ ಲಲಿತಾ ರವಿನಾಯ್ಕ್, ಮುಖಂಡರಾದ ಕೌಶಿಕ್, ಬಸವರಾಜ್, ಡಾ. ಜೆ.ಪಿ.ಕೃಷ್ಣೇಗೌಡ, ಕುಮಾರ್ ಮತ್ತಿತರರು ಉಪಸ್ಥಿತರಿದ್ದರು.