ಜಿಲ್ಲೆ

ಪಕ್ಷ ನಿಷ್ಠೆ, ನಿಸ್ವಾರ್ಥ ಕಾರ್ಯದಿಂದ ಉನ್ನತ ಸ್ಥಾನ

ಚಿಕ್ಕಮಗಳೂರು: ಪಕ್ಷ ನಿಷ್ಠೆ, ಸಾಮಾನ್ಯರ ಒಳಿತಿಗೆ ನಿಸ್ವಾರ್ಥದಿಂದ ಕೆಲಸ ಮಾಡಿದ ಹಿನ್ನೆಲೆಯಲ್ಲಿ ನನ್ನನ್ನು ಗುರುತಿಸಿ ಈ ಸ್ಥಾನದವರೆಗೂ ಪಕ್ಷ ಕರೆತಂದಿದೆ ಎಂದು ನೂತನ ಉಪ ಸಭಾಪತಿ ಎಂ.ಕೆ.ಪ್ರಾಣೇಶ್ ಹೇಳಿದರು.

ಉಪ ಸಭಾಪತಿಯಾಗಿ ಆಯ್ಕೆಯಾದ ನಂತರ ಮೊದಲ ಬಾರಿಗೆ ಜಿಲ್ಲಾ ಬಿಜೆಪಿ ಕಚೇರಿಗೆ ಆಗಮಿಸಿದ ಅವರು, ಪಕ್ಷದಿಂದ ಏರ್ಪಡಿಸಿದ್ದ ಸಮಾರಂಭದಲ್ಲಿ ಅಭಿನಂದನೆ ಸ್ವೀಕರಿಸಿ ಮಾತನಾಡಿದರು.

30 ವರ್ಷಗಳ ರಾಜಕೀಯ ಅನುಭವದಲ್ಲಿ ಜವಾಬ್ದಾರಿ ನಿಭಾಯಿಸುವ ರೀತಿ ಕಲಿಸಿದ್ದು ರಾಷ್ಟ್ರೀಯ ಸ್ವಯಂ ಸೇವಕ ಸಂಘ ಎಂದು ಸ್ಮರಿಸಿದರು.

ರಾಜಕೀಯವಾಗಿ ಹಿಂದಿನ ಬೆಂಚ್​ನಲ್ಲಿ ಕುಳಿತುಕೊಳ್ಳುತ್ತಿದ್ದ ನಾನು ಈ ಜಾಗಕ್ಕ್ಕೆ ಬರಲು ಪ್ರಾಮಾಣಿಕತೆ ಮತ್ತು ಶ್ರದ್ಧೆ ಅತಿ ಮುಖ್ಯವಾಯಿತು. ಮಧ್ಯಮ ವರ್ಗದಿಂದ ಬಂದ ನನ್ನನ್ನು ಬಾಲ್ಯದಲ್ಲಿಯೇ ದಯಾನಂದ ನಾಯ್ಕ ಅವರು ಆರ್​ಎಸ್​ಎಸ್ ಶಾಖೆಗೆ ಸೇರಿಸಿದ್ದರು. ಅಲ್ಲಿ ನಡವಳಿಕೆಗಳನ್ನು ತಿದ್ದಿ ತೀಡಿರುವುದು ವ್ಯಕ್ತಿಯಾಗಿ ರೂಪುಗೊಳ್ಳಲು ಸಹಕಾರಿಯಾಯಿತು ಎಂದರು.

1989ರಲ್ಲಿ ಆರಂಭವಾದ ರಾಮಜನ್ಮ ಭೂಮಿ ಹೋರಾಟ ಆಟೋ ಚಾಲಕರ ಸಂಘದ ಅಧ್ಯಕ್ಷನಾಗಿದ್ದ ನನ್ನನ್ನು ಆಕರ್ಷಿಸಿತು. ಅದೇ ವಿಚಾರವನ್ನಿಟ್ಟುಕೊಂಡು ಹೋರಾಡುತ್ತಿದ್ದ ಬಿಜೆಪಿಗೆ ಸೇರ್ಪಡೆಗೊಂಡೆ. ಎಂದಿಗೂ ಅಧಿಕಾರದ ಅಪೇಕ್ಷೆ ಇರಲಿಲ್ಲ ಎಂದರು.

30ಸಿಕೆಎಂ11: ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಉಪ ಸಭಾಪತಿ ಎಂ.ಕೆ.ಪ್ರಾಣೇಶ್ ಅವರನ್ನು ಅಭಿನಂದಿಸಲಾಯಿತು. ಎಚ್.ಸಿ.ಕಲ್ಮರುಡಪ್ಪ, ಬಿ.ರಾಜಪ್ಪ, ಬೆಳವಾಡಿ ರವೀಂದ್ರ, ದೇವರಾಜ್ ಶೆಟ್ಟಿ, ಮಧುಕುಮಾರ್ ರಾಜ್ ಅರಸ್, ರಂಗನಾಥ್, ಸಿ.ಎಚ್.ಲೋಕೇಶ್ ಇತರರಿದ್ದರು.