ಅಜ್ಜಂಪುರ: ಪಟ್ಟಣ ಸಮೀಪದ ತಿಮ್ಮಾಪುರ ಪಂಪ್‌ಹೌಸ್‌ನಿಂದ ನೀರು ಬಿಡುವಂತೆ ಒತ್ತಾಯಿಸಿ ಭದ್ರಾ ಮೇಲ್ದಂಡೆ ಯೋಜನೆಯ ವಿಶ್ವೇಶ್ವರಯ್ಯ ಜಲಮಂಡಳಿ ನಿಗಮದ ಎಇಇ ರಾಕೇಶ್ ಅವರಿಗೆ ಗೆಜ್ಜಗೊಂಡನಹಳ್ಳಿ, ಹಣ್ಣೆ ಗ್ರಾಮಸ್ಥರು ಬುಧವಾರ ಮನವಿ ಸಲ್ಲಿಸಿದರು.
ಭದ್ರಾ ಮೇಲ್ದಂಡೆ ಯೋಜನೆಯಡಿ ತಿಮ್ಮಾಪುರ ಗ್ರಾಮದಲ್ಲಿ ಪಂಪ್‌ಹೌಸ್ ನಿರ್ಮಾಣವಾಗಿದೆ. ಗೆಜ್ಜಗೊಂಡನಹಳ್ಳಿ, ಹಣ್ಣೆ ಗ್ರಾಮಕ್ಕೆ ಒಳಪಡುವ ಗೋಪಾಲರಾಯನ ಕೆರೆ, ಅಯ್ಯನಕೆರೆ, ಮಾಟನಕಟ್ಟೆ ಕೆರೆಗಳು ಸುತ್ತಮುತ್ತಲಿನ ಹತ್ತಾರು ಹಳ್ಳಿಗಳಿಗೆ ಜೀವನಾಡಿಗಳಿದ್ದಂತೆ. ಆದರೆ ಈ ಕೆರೆಗಳು ಬತ್ತಿಗೆಹೋಗಿವೆ ಎಂದು ಮನವರಿಕೆ ಮಾಡಿಕೊಟ್ಟರು.
ಕೆಲವೊಮ್ಮೆ ಕಾಡು ಪ್ರಾಣಿಗಳು ನೀರಿಗಾಗಿ ಗ್ರಾಮದೊಳಗೆ ಬಂದು ಸಾರ್ವಜನಿಕರಿಗೆ ತೊಂದರೆ ಕೊಡುತ್ತಿವೆ. ಅಂತರ್ಜಲ ಸಹ ಬತ್ತಿಹೋಗುತ್ತಿದ್ದು, ರೈತರಿಗೆ ತೊಂದರೆಯಾಗಿದೆ. ಈ ಬಗ್ಗೆ ಹಲವು ಸಲ ಕೆರೆಗಳಿಗೆ ನೀರು ತುಂಬುವ ಯೋಜನೆಯನ್ನು ಕೈಗೆತ್ತಿಕೊಂಡಿರುವುದಿಲ್ಲ. ಈಗ ತಿಮ್ಮಾಪುರದಲ್ಲಿ ಪಂಪ್‌ಹೌಸ್ ನಿರ್ಮಾಣವಾಗಿದೆ. ಇಲ್ಲಿಂದ ಕೆರೆಗಳಿಗೆ ನೀರು ನೀಡಬೇಕೆಂದು ಒತ್ತಾಯಿಸಿದರು.
ಅತ್ತಿಮೊಗ್ಗೆ ಗ್ರಾಪಂ ಉಪಾಧ್ಯಕ್ಷ ಜಿ.ಎಂ.ಭೋಜರಾಜ, ಜಿ.ಎಲ್.ಶೇಖರ್, ಡಿ.ಇ.ಕುಮಾರ್, ಚಂದ್ರಪ್ಪ, ರಾಜು, ನವೀನ್, ಜಯಪ್ಪ, ರಾಜಶೇಖರ್ ಇತರರಿದ್ದರು.