ಜಿಲ್ಲೆ

ಪಂಪ್‌ಸೆಟ್ ಆರ್‌ಆರ್ ಸಂಖ್ಯೆಗೆ ಆಧಾರ್ ಸಂಖ್ಯೆ ಜೋಡಣೆ ಮಾಡಿಕೊಳ್ಳಿ

ಜಯತೀರ್ಥ ಪಾಟೀಲ

ಕಲಬುರಗಿ: ವಿದ್ಯುತ್ ಕಂಪನಿಗಳು ಐಪಿ ಪಂಪ್‌ಸೆಟ್‌ಗಳ ಆರ್‌ಆರ್ ಸಂಖ್ಯೆಗೆ ಮಾಲಿಕರ ಆಧಾರ್ ಸಂಖ್ಯೆ ಜೋಡಣೆ ಮಾಡುವ ಕಾರ್ಯ ಆರಂಭಿಸಿದ್ದು, ಇದರಿಂದ ೧೦ ಹೆಚ್‌ಪಿ ಒಳಗಿನ ಎಲ್ಲಾ ಐಪಿ ಸೆಟ್ ಹೊಂದಿರುವವರ ಮಾಹಿತಿಯು ವಿದ್ಯುತ್ ಕಂಪನಿಗಳಿಗೆ ಲಭ್ಯವಾಗಲಿದೆ ಎಂದು ಜೆಸ್ಕಾಂ ಕಾರ್ಯ ಮತ್ತು ಪಾಲನೆ ವಿಭಾಗ-೨ರ ಕಾರ್ಯನಿರ್ವಾಹಕ ಅಭಿಯಂತರರ ಕಚೇರಿ ಪ್ರಕಟಣೆ ತಿಳಿಸಿದೆ.
ಕೃಷಿ ಬಳಕೆಯ ೧೦ ಹೆಚ್.ಪಿ.ಒಳಗಿನ ಪಂಪ್‌ಸೆಟ್‌ಗಳ ಆರ್‌ಆರ್ ಸಂಖ್ಯೆಗೆ ಮಾಲಿಕರ ಆಧಾರ್ ಸಂಖ್ಯೆ ಜೋಡಣೆ ಮಾಡುವುದನ್ನು ರಾಜ್ಯದ ಎಲ್ಲಾ ವಿದ್ಯುತ್ ಕಂಪನಿಗಳು ಆರಂಭಿಸಿದ್ದು, ಇದರಿಂದ ಕೃಷಿ ಪಂಪಸೆಟ್‌ಗಳ ನಿಖರತೆ, ಒದಗಿಸಲಾಗುವ ಅನುದಾನ ಅರಿಯುವ ಕೆಲಸಕ್ಕೆ ಜೆಸ್ಕಾಂ ಮುಂದಾಗಿದೆ.
ಒAದು ವೇಳೆ ಜೋಡಣೆಯಾಗದಿದ್ದಲ್ಲಿ, ಐಪಿ ಪಂಪಸೆಟ್ ಸ್ಥಾವರಗಳಿಗೆ ಸರ್ಕಾರ ಅನುದಾನ ಒದಗಿಸುವುದಿಲ್ಲ ಎಂದು ಹೇಳಿರುವ ಹಿನ್ನೆಲೆಯಲ್ಲಿ ಆಧಾರ್ ಸಂಖ್ಯೆ ಜೋಡಣೆ ಕಾರ್ಯ ಚುರುಕುಗೊಂಡಿದೆ.
ಹೀಗಾಗಿ ಜೆಸ್ಕಾಂ ಅಡಿಯಲ್ಲಿ ಪಂಪ್‌ಸೆಟ್‌ಗಳ ಆರ್‌ಆರ್ ನಂಬರ್ ಹೊಂದಿರುವ ಎಲ್ಲಾ ಮಾಲಿಕರು ಹತ್ತಿರದ ಪವರ್‌ಮ್ಯಾನ್, ಶಾಖಾಧಿಕಾರಿ ಮತ್ತು ಮೇಲ್ವಿಚಾರಕರನ್ನು ಸಂಪರ್ಕಿಸಿ ಆರ್‌ಆರ್ ಸಂಖ್ಯೆಗೆ ಆಧಾರ್‌ಸಂಖ್ಯೆ ಜೋಡಣೆ ಮಾಡಿಕೊಳ್ಳಬೇಕು ಎಂದು ತಿಳಿಸಿದೆ.