ಅಫಜಲಪುರ: ತಾಲೂಕಿನಲ್ಲಿ ಪ್ರಸಕ್ತ ಸಾಲಿನಲ್ಲಿ ಮಳೆ ಕೊರತೆಯಿಂದಾಗಿ ರೈತರು ತಮ್ಮ ಜಮೀನಿನಲ್ಲಿ ಬೆಳೆದ ಬೆಳೆಗಳಿಗೆ ನೀರಾವರಿ ಕಲ್ಪಿಸಿಕೊಳ್ಳಲು ನದಿ ತೀರದಲ್ಲಿ ಅಳವಡಿಸಿದ್ದ 3 ಪಂಪ್ ಸೆಟ್ ಮೋಟರ್ ಗಳನ್ನು ಕಳ್ಳತನ ಮಾಡಿದ್ದಾರೆ ಜೊತೆಗೆ 5 ವಿವಿಧ ಕಂಪನಿಯ ಬೈಕ್ ಗಳನ್ನು ಮೂರು ಕಳ್ಳರು ಕಳ್ಳತನ ಮಾಡಿದ್ದು, ಆರೋಪಿಗಳನ್ನು ಅಫಜಲಪುರ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಎಸ್ಪಿ ಇಶಾ ಪಂತ್, ಎಎಸ್ಪಿ ಶ್ರೀನಿಧಿ, ಡಿವೈಎಸ್ಪಿ ಗೋಪಿ.ಬಿ.ಆರ್, ಅಫಜಲಪುರ ಸಿಪಿಐ ಪಂಡೀತ್ ಸಗರ ಅವರ ಮಾರ್ಗದರ್ಶನದಲ್ಲಿ ಪಿಎಸ್ಐಗಳಾದ ಸಿದ್ದೇಶ್ವರ ಗೆರೆಡೆ ಹಾಗೂ ಮಡಿವಾಳಪ್ಪ ಬಾಗೋಡಿ ನೇತೃತ್ವದಲ್ಲಿ ತಂಡ ರಚಿಸಿ ಈ ಪ್ರಕರಣವನ್ನು ಭೇದಿಸಿ ಭೋಸಗಾ ಗ್ರಾಮದ ರೇವಣಸಿದ್ದ ಬಿರಾದಾರ (23). ದೇವಣಗಾಂವ ಗ್ರಾಮದ ಮಂದಾರ ಅಳ್ಳಗಿ (23), ದೇವಣಗಾಂವದ ನಾಗರಾಜ ಅಳ್ಳಗಿ (27) ಈ ಆರೋಪಿಗಳನ್ನು ಬಂಧಿಸಿ ಬಂದಿತರಿಂದ ವಿವಿಧ ಕಂಪನಿಗಳ 40,000 ಸಾವಿರ ಮೌಲ್ಯಸ 3 ಪಂಪ್ ಸೆಟ್ ಗಳು ಹಾಗೂ ವಿವಿಧ ಕಂಪನಿಯ 2,40,000 ಮೌಲ್ಯದ ಮೌಲ್ಯದ 5 ಬೈಕ್ ಗಳನ್ನು ಜಪ್ತಿ ಮಾಡಿಕೊಳ್ಳಲಾಗಿದೆ ಎಂದು ಸಿಪಿಐ ಪಂಡೀತ ಸಗರ ತಿಳಿಸಿದ್ದಾರೆ.
ಈ ತಂಡದಲ್ಲಿ ಅಫಜಲಪುರ ಠಾಣೆಯ ಪೇದೆಗಳಾದ ಸಂತೋಷ, ಕಾಶಿನಾಥ, ಆನಂದ, ಯಲ್ಲಪ್ಪ ಕಾರ್ಯಾಚರಣೆಯಲ್ಲು ಪಾಲ್ಗೊಂಡಿದ್ದರು.