ಬಾಗಲಕೋಟೆ: ಮತದಾನ ಮಹತ್ವ ಸಾರಲು ನವನಗರದ ಕಾಳಿದಾಸ ಸರ್ಕಲ್‍ನಲ್ಲಿ ಹಮ್ಮಿಕೊಂಡ ಪಂಜಿನ ಜಾಥಾಕ್ಕೆ ಜಿಲ್ಲಾಧಿಕಾರಿ ಜಾನಕಿ ಕೆ.ಎಂ ಚಾಲನೆ ನೀಡಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ ಹಾಗೂ ಜಿಲ್ಲಾ ಸ್ವೀಪ್ ಸಮಿತಿ ವತಿಯಿಂದ ಮತದಾನ ಜಾಗೃತಿಗಾಗಿ ಹಮ್ಮಿಕೊಂಡ ಪಂಜಿನ ಜಾಥಾ ಕಾಳಿದಾಸ ಸರ್ಕಲ್‍ನಿಂದ ಪ್ರಾರಂಭಗೊಂಡು ವಿದ್ಯಾಗಿರಿ ವೃತ್ತಕ್ಕೆ ಮುಕ್ತಾಯಗೊಂಡಿತು. ಪಂಜಿನ ಜಾಥಾ ಕಾರ್ಯಕ್ರಮ ಎಲ್ಲರ ಗಮನ ಸೆಳೆಯುವಂತೆ ಮಾಡಿತು. ಜಾಥಾದೂದ್ದಕ್ಕೂ ಮತದಾನ ಜಾಗೃತಿಯ ಘೋಷಣೆಗಳನ್ನು ಕೂಗಲಾಯಿತು.
ವಿದ್ಯಾಗಿರಿ ವೃತ್ತದಲ್ಲಿ ಬೃಹತ್ ಮಾನವ ಸರಪಳಿ ನಿರ್ಮಿಸುವ ಮೂಲಕ ನೆರೆದ ಜನರ ಗಮನ ಸೆಳೆಯುವಂತೆ ಮಾಡಿತು. ಪಂಜಿನ ಬೆಳಕಿನಲ್ಲಿ ವೃತ್ತವೆಲ್ಲ ಬಣ್ಣದ ಹಬ್ಬದ ವಾತಾವರಣ ಸೃಷ್ಠಿಸಿತು. ಇದರ ಜೊತೆಗೆ ಸ್ವಚ್ಚ ವಾಹಿನಿಯಲ್ಲಿ ಮತವ ಹಾಕುವಿರಾ ಇಲ್ಲ ಮತವ ಮಾಡುವಿರಾ ಮತವಕ್ಕೆ ಬೆಲೆಯ ಕಟ್ಟುವಿರಾ ಸೇರಿದಂತೆ ವಿವಿಧ ಮತದಾನ ಜಾಗೃತಿಯ ಹಾಡುಗಳನ್ನು ಸಹ ಹಕಲಾಗಿತ್ತು.
ಜಿ.ಪಂ ಸಿಇಓ ಆಗಿರುವ ಜಿಲ್ಲಾ ಸ್ವೀಪ್ ನೋಡಲ್ ಅಧಿಕಾರಿ ಶಶಿಧರ ಕುರೇರ ಮತದಾನ ಜಾಗೃತಿ ಕುರಿತು ಪ್ರತಿಜ್ಞಾವಿಧಿಯನ್ನು ಬೋಧಿಸಿದರು. ಪ್ರಜಾಪ್ರಭುತ್ವದ ಘನತೆಯನ್ನು ಎತ್ತಿ ಹಿಡಿಯುವದರ ಜೊತೆಗೆ ಪ್ರತಿಯೊಂದು ಚುನಾವಣೆಯಲ್ಲಿ ತಪ್ಪದೇ ಮತದಾನ ಮಾಡುವುದಾಗಿ ಬೋಧಿಸಲಾಯಿತು.
ಜಾಥಾದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಮರನಾಥ ರೆಡ್ಡಿ, ನಗರಸಭೆ ಪೌರಾಯುಕ್ತ ವಾಸಣ್ಣ ಆರ್ ಸೇರಿದಂತೆ ಪೌರ ಕಾರ್ಮಿಕರು, ನಗರಸಭೆ ಸಿಬ್ಬಂದಿ ವರ್ಗದವರು ಪಾಲ್ಗೊಂಡಿದ್ದರು.