ಪಂಚರತ್ನ ಯಾತ್ರೆಯನ್ನು ಜೆಡಿಎಸ್ ಕಾರ್ಯಕರ್ತರು, ಮುಖಂಡರು ಹಾಗೂ ಪಕ್ಷದ ಅಭಿಮಾನಿಗಳು ಅದ್ದೂರಿಯಾಗಿ ಬರಮಾಡಿಕೊಂಡರು. 
ಜಿಲ್ಲೆ

ಪಂಚರತ್ನ ಯಾತ್ರೆಗೆ ಅದ್ದೂರಿ ಸ್ವಾಗತ

Hassan

ಹೊಳೆನರಸೀಪುರ: ಪಟ್ಟಣಕ್ಕೆ ಬುಧವಾರ ಆಗಮಿಸಿದ ಪಂಚರತ್ನ ಯಾತ್ರೆಯನ್ನು ಜೆಡಿಎಸ್ ಕಾರ್ಯಕರ್ತರು, ಮುಖಂಡರು ಹಾಗೂ ಪಕ್ಷದ ಅಭಿಮಾನಿಗಳು ಅದ್ದೂರಿಯಾಗಿ ಬರಮಾಡಿಕೊಂಡರು.

ಬೃಹತ್ ಗಾತ್ರದ ಒಣದ್ರಾಕ್ಷಿ ಹಾರವನ್ನು ಕ್ರೇನ್‌ನಲ್ಲಿ ತಂದು ಪಕ್ಷದ ನಾಯಕರಿಗೆ ಹಾಕಲಾಯಿತು. ಮಾಜಿ ಮುಖ್ಯಮಂತ್ರಿ ಕುಮಾರ ಸ್ವಾಮಿ, ಮಾಜಿ ಸಚಿವ ರೇವಣ್ಣ, ಸಂಸದ ಪ್ರಜ್ವಲ್ ರೇವಣ್ಣ, ವಿಧಾನ ಪರಿಷತ್ ಸದಸ್ಯ ಸೂರಜ್ ರೇವಣ್ಣ ಅವರ ಪರ ಜಯಘೋಷ ಮೊಳಗಿತು. ಕಾರ್ಯಕರ್ತರು ಪಟಾಕಿ ಸಿಡಿಸಿ ಸಂಭ್ರಮಿಸಿದರು.

ಜೆಡಿಎಸ್ ಮುಖಂಡರಾದ ಕೆ.ಎಂ.ಶಿವಕುಮಾರ್, ಜಿ.ರಮೇಶ್, ಎಚ್.ಎಸ್.ವಿಜಯಕುಮಾರ್, ಹರೀಶ್, ಯೋಗೇಶ್, ಡಿ.ಬಿ. ದೇವರಾಜೇಗೌಡ, ನಿಂಗರಾಜು, ರವಿಕುಮಾರ್, ಮನುಕುಮಾರ್ ಹಲವರು ಹಾಜರಿದ್ದರು.