ಹಾಸನ:ಗ್ರಾಮ ಪಂಚಾಯಿತಿಗಳ ಮಾಹಿತಿ ಸೇವೆಗಳು ಹಾಗೂ ಕುಂದುಕೊರತೆಗಳ ಪರಿಹಾರ ಕುರಿತು ವಾಟ್ಸ್ ಆ್ಯಪ್ ನಂಬರ್‌ಗೆ ಬಳಕೆಗೆ ಜಿಲ್ಲಾ ಪಂಚಾಯಿತಿ ಸಂಭಾಗಣದಲ್ಲಿ ಸೋಮವಾರ ಜಿಲ್ಲಾ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಬಿ.ಆರ್ ಪೂರ್ಣಿಮಾ ಅವರು ಚಾಲನೆ ನೀಡಿದರು.
ನಂತರ ಮಾತನಾಡಿದ ಅವರು, ಗ್ರಾಮ ಪಂಚಾಯಿತಿಯ ಸೇವೆಗಳಿಗೆ ಅರ್ಜಿ ಸಲ್ಲಿಸಲು ವೆಬ್ ಸೈಟ್ ಪೋಟಲ್‌ಗಳಲ್ಲಿ ಭೇಟಿ ನೀಡಬೇಕಾಗಿತ್ತು. ಅಲ್ಲದೆ ಗ್ರಾಮ ಪಂಚಾತಿಯಿಗಳ ಸಂಬಂಧಸಿದ ಎಲ್ಲ ಬಗ್ಗೆಯ ಕುಂದು ಕೊರತೆಗಳನ್ನು ದಾಖಲಿಸಿ ನಿವಾರಣೆ ಮಾಡಲು ನಿರ್ದಿಷ್ಟವಾದ ವೆಬ್ ಸೈಟ್‌ಗಳು ಪೋರ್ಟಲ್‌ಗಳು ಇರುವುದಿಲ್ಲ ಆದ್ದರಿಂದ ಸಾರ್ವಜನಿಕರಿಗೆ ಅನುಕೂಲವಾಗುವಂತೆ ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಡಿ ಎಲ್ಲಾ ಗ್ರಾಮ ಪಂಚಾಯಿತಿಗಳಲ್ಲಿ ಮಾಹಿತಿ ಮತ್ತು ವಿವರಗಳನ್ನು ಪಡೆಯಲು ಗ್ರಾಮ ಪಂಚಾಯಿತಿಗೆ ಸಂಬಂಧಿಸಿದ ಸೇವೆಗಳಿಗೆ ಈ ನಂಬರ್ ಮೂಲಕ ಪಡೆಯಬಹುದಾಗಿದೆ ಎಂದು ಮಾಹಿತಿ ನೀಡಿದರು.
ರಾಜ್ಯದ ಎಲ್ಲಾ ಗ್ರಾಮ ಪಂಚಾಯಿತಿಗಳಿಗೆ ಸಂಬಂಧಿಸದಂತೆ ಸೇವೆಗಳಿಗೆ ಅರ್ಜಿ ಸಲ್ಲಿಸಲು, ಅರ್ಜಿಯ ಸ್ಥಿತಿಗತಿಗಳನ್ನು ತಿಳಿದುಕೊಳ್ಳಲು ಹಾಗೂ ಸಂಬಂಧಿಸಿದ ಕುಂದು ಕೊರತೆಗಳನ್ನು ದಾಖಲಿಸಲು ದೇಶದಲ್ಲೇ ಪ್ರಪ್ರಥಮವಾಗಿ ಬಾರಿ ವಾಟ್ಸ್‌ಪ್ ಚಾಟ್‌ನ್ನು ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ಇಲಾಖೆಯಿಂದ ಅಭಿವೃದ್ಧಿಪಡಿಸಿ ಅನಿಷ್ಠಾನಗೊಳಿಸಲಾಗಿದೆ ಎಂದರು
ಪಂಚಮಿತ್ರ ವಾಟ್ಸ್‌ಆ್ಯಪ್ ಚಾಟ್ ನಂ: 8277506000 ಇನ್ನೂ ಮುಂದೆ ಗ್ರಾಮ ಪಂಚಾಯಿತಿಗಳ ಮಾಹಿತಿ ಮತ್ತು ವಿವರಗಳನ್ನು ಈ ವಾಟ್ಸ್‌ಪ್ ಮೂಲಕ ದಾಖಲಿಸಬಹುದಾಗಿದೆ. ಚುನಾಯಿತ ಪ್ರತಿನಿಧಿಗಳ ವಿವರ, ಸಿಬ್ಬಂದಿಗಳ ವಿವರ, ಪೂರ್ಣ ಘಟ್ಟಗಳ ಗ್ರಾಮ ಪಂಚಾಯಿತಿಗಳ, ಸಭೆಗಳ ನಡವಳಿ, ಗ್ರಾಮ ಪಂಚಾಯಿತಿಗಳ ಮುಂಬರುವ ಸೇವೆಗಳಗಳು ವಿವರಗಳು, ಸ್ವ ಸಹಾಯ ಗುಂಪುಗಳ ವಿವರಗಳನ್ನು ವಾಟ್ಸ್‌ಆ್ಯಪ್ ಚಾಟ್ ಮೂಲಕ ಗ್ರಾಮ ಪಂಚಾಯಿತಿಗೆ ಸಂಬಂಧಿಸಿದ ಹಲವಾರು ಮಾಹಿತಿಗಳನ್ನು ತಿಳಿದುಕೊಳ್ಳಬಹುದು ಹಾಗೆಯೇ ಕುಂದು ಕೊರತೆಗಳ ದಾಖಲಿಸುವುದಕ್ಕೆ ಈ ವಾಟ್ಸ್‌ಪ್ ಚಾಟ್ ಅನುಕೂಲವಾಗಿದೆ ಎಂದು ಹೇಳಿದರು.
ಈ ವೇಳೆಯಲ್ಲಿ ಮಖ್ಯ ಲೆಕ್ಕಾಧಿಕಾರಿ ತಪ್ಸುಲ್‌ಲ್ ಹುಸೇನ್ , ಉಪಕಾರ್ಯದರ್ಶಿ ಕೃಷ್ಣಮೂರ್ತಿ, ಸಹಾಯಕ ಕಾರ್ಯದರ್ಶಿ ಹರೀಶ್ ಇದ್ದರು