ಜಿಲ್ಲೆ

ಪಂಚಗಂಗಾ ಎಕ್ಸ್‌ಪ್ರೆಸ್ ರೈಲು ಮಡಗಾಂವಗೆ ವಿಸ್ತರಣೆ

ಕಾರವಾರ:ಬೆಂಗಳೂರು-ಕಾರವಾರ ಪಂಚಗಂಗಾ ಎಕ್ಸ್ ಪ್ರೆಸ್ ರಾತ್ರಿ ರೈಲನ್ನು ಹೊಸ ಸಂಖ್ಯೆಯೊಂದಿಗೆ ಗೋವಾ ಮಡಗಾಂವ ವರೆಗೆ ವಿಸ್ತರಿಸಲಾಗುತ್ತಿದೆ.
ಪ್ರತಿ ದಿನ ಸಾಯಂಕಾಲ 6.50 ಕ್ಕೆ ಬೆಂಗಳೂರಿನಿಂದ ಹೊರಟು ಮರುದಿನ ಬೆಳಗ್ಗೆ 8.25 ಕ್ಕೆ ಕಾರವಾರ  ತಲುಪಲಿರುವ ಪಂಚಗಂಗಾ ಎಕ್ಸ್ ಪ್ರೆಸ್ ರೈಲನ್ನು 01595 ಸಂಖ್ಯೆ ನೀಡಿ ವಿಶೇಷ ರೈಲಿನ‌ ಹೆಸರಿನಲ್ಲಿ   ನವೆಂಬರ್ 1 ರಿಂದ ಪ್ರತಿದಿ‌‌ನ ಮಡಗಾಂವ ವರೆಗೆ ತೆರಳಲಿದೆ. ಬೆಳಗ್ಗೆ 8.30 ಕ್ಕೆ ಕಾರವಾರದಿಂದ ಹೊರಟು 9.45 ಕ್ಕೆ ಮಡಗಾಂವ ಸೇರಲಿದೆ.
ಅದೇ ದಿನ ಮಧ್ಯಾಹ್ನ 4.30 ಕ್ಕೆ ಮಡಗಾಂವನಿಂದ‌ ಹೊರಡುವ (ಸಂಖ್ಯೆ- 01596) ರೈಲು ಸಾಯಂಕಾಲ 5.45 ಕ್ಕೆ ವಾಪಸ್ ಕಾರವಾರ ತಲುಪಲಿದೆ. 6 ಗಂಟೆಗೆ ಬೆಂಗಳೂರಿನತ್ತ ಪಂಚಗಂಗಾ ಹೆಸರಿನಲ್ಲಿ ಹೊರಡಲಿದೆ. ರೈಲಿನಲ್ಲಿ ಎಸಿ ಸೇರಿ 14 ಬೋಗಿಗಳು ಇರಲಿದ್ದು, ಕಾರವಾರ ಮಡಗಾಂವ ನಡುವೆ ಕಾಣಕೋಣದಲ್ಲಿ ನಿಲುಗಡೆ ಇದೆ ಎಂದು ಕೊಂಕಣ ರೈಲ್ವೆ ಪ್ರಕಟಣೆ ತಿಳಿಸಿದೆ. ಇದುರೆಗೆ ರೈಲು ಬೆಳಗ್ಗೆ ಕಾರವಾರಕ್ಕೆ ಬಂದು ನಿಂತು ಸಾಯಂಕಾಲ ಬೆಂಗಳೂರಿಗೆ ಹೊರಡುತ್ತಿತ್ತು.