ಜಿಲ್ಲೆ

ಪ. ಮಲ್ಲೇಶ್ ಬಂಧನಕ್ಕೆ ಆಗ್ರಹ

ಗುಂಡ್ಲುಪೇಟೆ: ಬ್ರಾಹ್ಮಣ ಸಮುದಾಯ ಮತ್ತು ವೇದಗಳನ್ನು ಕುರಿತು ಅವಹೇಳನಕಾರಿಯಾಗಿ ಮಾತನಾಡಿರುವ ಪ. ಮಲ್ಲೇಶ್ ಬಂಧನಕ್ಕೆ ಒತ್ತಾಯಿಸಿ ಗುರುವಾರ ಪಟ್ಟಣದಲ್ಲಿ ತಾಲೂಕು ಬ್ರಾಹ್ಮಣ ಮಹಾ ಸಭಾ ವತಿಯಿಂದ ಮೌನ ಮೆರವಣಿಗೆ ಮಾಡಲಾಯಿತು. ಮಹಾಸಭಾ ತಾಲೂಕು ಅಧ್ಯಕ್ಷ ಗೋಪಾಲಕೃಷ್ಣ ಭಟ್ ನೇತೃತ್ವದಲ್ಲಿ ಪಟ್ಟಣದ ವಿಜಯನಾರಾಯಣಸ್ವಾಮಿ ದೇವಾಲಯದ ಬಳಿ ಸಮಾವೇಶಗೊಂಡ ಸದಸ್ಯರು ತಾಲೂಕು ಕಚೇರಿವರೆಗೆ ಫಲಕಗಳನ್ನು ಹಿಡಿದು ಸಾಗಿದರು. ಈಗಾಗಲೇ ಪ. ಮಲ್ಲೇಶ್ ವಿರುದ್ಧ ವಿವಿಧ ಠಾಣೆಗಳಲ್ಲಿ ದೂರು ದಾಖಲಾಗಿದೆ. ಹಾಗಾಗಿ ಆತನನ್ನು ಕೂಡಲೇ ಬಂಧಿಸಬೇಕು ಎಂದು ಒತ್ತಾಯಿಸಿ ತಹಸೀಲ್ದಾರ್ ರವಿಶಂಕರ್‌ಗೆ ಮನವಿ ಪತ್ರ ಸಲ್ಲಿಸಿದ್ದರು.
ಮುಖಂಡರಾದ ಶ್ರೀನಿವಾಸಮೂರ್ತಿ, ದೊರೆಸ್ವಾಮಿ, ಸುಬ್ಬರಾವ್, ಅನಂತು, ಶಂಕರನಾರಾಯಣ ಜೋಯಿಸ್, ಸುಧೀಂದ್ರ ವೈದ್ಯ, ಗುಂಡೂರಾವ್, ಸತೀಶ್, ಗಾಯತ್ರಿ ಲಕ್ಷ್ಮಿ, ಮಹಾಲಕ್ಷ್ಮಿ ಸೇರಿದಂತೆ ಹಲವರು ಇದ್ದರು.