ಚಿಕ್ಕೋಡಿಯ ಸಾರ್ವಜನಿಕ ಆಸ್ಪತ್ರೆಯ ಾರ್ಮಸಿ ಹಾಗೂ ಔಷಧ ವಿತರಣಾ ವಿಭಾಗಕ್ಕೆ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಎಸ್.ಎಲ್.ಚವ್ಹಾಣ, ಪ್ರಧಾನ ದಿವಾಣಿ ನ್ಯಾಯಾಧೀಶ ಚಿದಾನಂದ ಬಡಿಗೇರ ನೇತೃತ್ವದ ತಂಡ ಭೇಟಿ ನೀಡಿ, ಪರಿಶೀಲಿಸಿತು. ಶ್ರೀಕಾಂತ ಟಿ., ಆರ್.ಐ.ಖೋತ, ನಾಗೇಶ ಕಿವಡ ಇತರರಿದ್ದರು. 
ಜಿಲ್ಲೆ

ನ್ಯಾಯಾಧೀಶರಿಂದ ವ್ಯವಸ್ಥೆ ಪರಿಶೀಲನೆ

ಚಿಕ್ಕೋಡಿ: ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ಬುಧವಾರ ಜಿಲ್ಲಾ ಹಾಗೂ ಸತ್ರ ನ್ಯಾಯಾ ಧೀಶ ಎಸ್.ಎಲ್.ಚವ್ಹಾಣ ಹಾಗೂ ಪ್ರಧಾನ ದಿವಾಣಿ ನ್ಯಾಯಾಧೀಶ ಚಿದಾನಂದ ಬಡಿಗೇರ ನೇತೃತ್ವದ ತಂಡ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿತು.
ಆಸ್ಪತ್ರೆಯ ಾರ್ಮಸಿ ಹಾಗೂ ಔಷಧ ವಿತರಣಾ ವಿಭಾಗಕ್ಕೆ ಭೇಟಿ ನೀಡಿದ್ದ ಸಂದರ್ಭದಲ್ಲಿ ವಿಭಾಗದ ಮೇಲ್ಭಾಗದ ಶೌಚಗೃಹದಿಂದ ನೀರು ಸೋರಿ ಕಂಪ್ಯೂಟರ್‌ಗಳು ಶಾಕ್ ಹೊಡೆಯುವ ಜತೆಗೆ ಗಬ್ಬು ವಾಸನೆ ಬರುತ್ತಿತ್ತು. ಈ ಬಗ್ಗೆ ಲಿಖಿತವಾಗಿ ಮೇಲಧಿಕಾರಿಗಳ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ ಎಂದು ಹಿರಿಯ ಔಷಧ ಅಧಿಕಾರಿ ವಿಜಯಾರಾಣಿ ಬಸನ್ನವರ ತಮ್ಮ ಅಳಲು ತೋಡಿಕೊಂಡರು.

ಇದನ್ನು ದುರಸ್ತಿಗೊಳಿಸಿ ಎಂದು ಸೂಚಿಸಿದ ಪ್ರಧಾನ ದಿವಾಣಿ ನ್ಯಾಯಾಧೀಶ ಚಿದಾನಂದ ಬಡಿಗೇರ, ಅವ್ಯವಸ್ಥೆ ಕುರಿತು ಕಾನೂನು ಸೇವಾ ಪ್ರಾಧಿಕಾರದ ಮೂಲಕ ಸಂಬಂಧಿಸಿದ ಮೇಲಧಿಕಾರಿಗಳ ಗಮನಕ್ಕೆ ತರಲಾಗುವುದು ಎಂದರು. ಬಳಿಕ ಆಸ್ಪತ್ರೆಯ ಎಲ್ಲ ವಾರ್ಡ್
ಗಳು, ಚುಚ್ಚು ಮದ್ದು ಕೊಠಡಿ ಸೇರಿ ವಿವಿಧ ವಿಭಾಗಗಳಿಗೆ ಭೇಟಿ ನೀಡಿ ಸಂಬಂಧಪಟ್ಟ ಅಧಿಕಾರಿಗಳಿಂದ ಮಾಹಿತಿ ಪಡೆದರು. ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯ ಕಾನೂನು ಸೇವಾ ಪ್ರಾಧಿಕಾರದ ನಿರ್ದೇಶನದಂತೆ ಆಸ್ಪತ್ರೆಗೆ ಭೇಟಿ ನೀಡಲಾಗಿತ್ತು. ವಾಸ್ತವ ಸಂಗತಿಗಳ ಬಗ್ಗೆ ಪ್ರಾಧಿಕಾರಕ್ಕೆ ವರದಿ ಸಲ್ಲಿಸಲಾಗುವುದು. ಆಸ್ಪತ್ರೆಯ ಸೇವೆ ಮೇಲ್ನೋಟಕ್ಕೆ ಉತ್ತಮ ಎಂದು ಕಂಡು ಬಂದಿದೆ. ರೋಗಿಗಳಿಂದಲೂ ಇದೇ ಉತ್ತರ ಬಂದಿದೆ ಎಂದು ತಿಳಿಸಿದರು. ಜಿಲ್ಲಾ ಹಾಗೂ ನ್ಯಾಯಾಧೀಶ ಎಸ್.ಎಲ್.ಚವ್ಹಾಣ, ಪ್ರಧಾನ ಹಿರಿಯ ದಿವಾಣಿ ನ್ಯಾಯಾಧೀಶ ಶ್ರೀಕಾಂತ ಟಿ., ಎಜಿಪಿ ಆರ್.ಐ.ಖೋತ, ಸರ್ಕಾರಿ ಅಭಿಯೋಜಕ ವೈ.ಜಿ.ತುಂಗಳ, ವಕೀಲರ ಸಂಘದ ಅಧ್ಯಕ್ಷ ನಾಗೇಶ ಕಿವಡ, ರವಿ ಹುದ್ದಾರ, ಡಾ.ವಿವೇಕ ಹೊನ್ನಳ್ಳಿ, ಡಾ. ವಿಶಾಲಲಕ್ಷ್ಮೀಕಾಂತ ಕಡ್ಲೆಪ್ಪಗೋಳ, ಜಯಲಕ್ಷ್ಮೀ ಮುಸಾಳೆ ಇತರರಿದ್ದರು.