ಅರಕಲಗೂಡು: ಭಾರತೀಯ ಸಂಸ್ಕೃತಿಯಲ್ಲಿ ಸತ್ಯ, ನ್ಯಾಯ- ನೀತಿಗಳನ್ನು ನಿರೂಪಿಸಿರುವ ಪೌರಾಣಿಕನಾಟಕಗಳನ್ನು ಎಲ್ಲರೂ ಪ್ರೋತ್ಸಾಹಿಸುವುದು ಅತ್ಯವಶ್ಯಕ ಎಂದು ಕಾಂಗ್ರೆಸ್ ಮುಖಂಡ ಎಚ್.ಪಿ. ಶ್ರೀಧರ್‌ಗೌಡ ಹೇಳಿದರು.
ಪಟ್ಟಣದ ಕ್ರೀಡಾಂಗಣದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಶ್ರೀ ದೊಡ್ಡಮ್ಮದೇವಿ ಕಲಾ ಸಂಘ ಮತ್ತು ಸಾಂಸ್ಕೃತಿಕ ಸಂಘದ ಸಹಯೋಗದಲ್ಲಿ ಇತ್ತೀಚೆಗೆ ನಡೆದ ಹಗಲು ಪೌರಾಣಿಕ ನಾಟಕೋತ್ಸವ ಮತ್ತು ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಪಾಶ್ಚಿಮಾತ್ಯ ದೇಶಗಳಿಗೆ ಹೋಲಿಸಿದರೆ ನಮ್ಮ ಭಾರತೀಯ ಸಂಸ್ಕೃತಿ ಇಂದಿಗೂ ಉನ್ನತ ಸ್ಥಾನ ಉಳಿಸಿಕೊಳ್ಳುವಲ್ಲಿ ಪೌರಾಣಿಕ ನಾಟಕಗಳ ಕೊಡುಗೆ ಕೂಡ ಅಪಾರವಾಗಿದೆ.
ಪೌರಾಣಿಕ ನಾಟಕಗಳು ಭಾರತೀಯ ಸಂಸ್ಸತಿಯ ಜೀವಾಳವಾಗಿದ್ದು ಹತ್ತು ದಿನಗಳ ಕಾಲ ಹಗಲು ವೇಳೆ ಅತ್ತುತ್ತಮ ಕಲಾವಿರಿಂದ ವರ್ಣರಂಜಿತ ವೇದಿಕೆ ಮೇಲೆ ಪೌರಾಣಿಕ ನಾಟಗಳನ್ನು ಪ್ರದರ್ಶಿಸಿ ಮನರಂಜನೆ ಜತೆಗೆ ಸಮಾಜವನ್ನು ತಿದ್ದಲು ಪ್ರಯತ್ನಿಸುತ್ತಿರುವುದು ಉತ್ತಮ ಬೆಳವಣಿಗೆಯಾಗಿದೆ ಎಂದು ಪ್ರಶಂಸಿದರು.
ಜಿಪಂ ಮಾಜಿ ಉಪಾಧ್ಯಕ್ಷ ಎಚ್ ಪಿ ಶ್ರೀನಿವಾಸ್, ಕೆಪಿಸಿಸಿ ಸದಸ್ಯ ಎಚ್.ಟಿ. ಮಂಜುನಾಥ್, ಪಪಂ ಸದಸ್ಯ ಸುಬಾನ ಷರೀಫ್, ಜಾಮೀಯಾ ಮಸೀದಿ ಅಧ್ಯಕ್ಷ ಸಲೀಂ, ಜಿಲ್ಲಾ ಕುರುಬರ ಸಂಘದ ಉಪಾಧ್ಯಕ್ಷ ಎಸ್.ಎಲ್. ಗಣಪತಿ, ಕುರಿ ಮತ್ತು ಉಣ್ಣೆ ನಿಗಮದ ನಿರ್ದೇಶಕ ಎಲ್. ಕೃಷ್ಣ, ಮುಖಂಡರಾದ ಗುರುಮೂರ್ತಿ, ಕಬ್ಬಳಿಗೆರೆ ಸೋಮಶೇಖರ್, ಬನ್ನೂರು ಗ್ರಾಪಂ ಮಾಜಿ ಉಪಾಧ್ಯಕ್ಷ ದಶರಥ, ಓಡನಹಳ್ಳಿ ಕುಮಾರ್, ಶಾಂತಕುಮಾರ್, ಕರವೇ ಸೋಮಶೇಖರ್, ಆಟೋ ಧರ್ಮ, ಅತ್ನಿ ಯೋಗೇಶ್, ರಾಜೇಗೌಡ ಇತರರಿದ್ದರು.