ಜಿಲ್ಲೆ

ನ್ಯಾಮನಹಳ್ಳಿಯಲ್ಲಿ ಶಾಲೆಗೆ ದಾನಿಗಳ ಕೊಡುಗೆ

Mysuru - Desk - Yashavanth Kumar N

ಮೇಲುಕೋಟೆ: ಸಮೀಪದ ನ್ಯಾಮನಹಳ್ಳಿಯಲ್ಲಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಗೆ ಸ್ವಾತಂತ್ರೊೃೀತ್ಸವ ಅಂಗವಾಗಿ ದಾನಿಗಳು ವಿವಿಧ ಕೊಡುಗೆ ನೀಡಿದರು. ನ್ಯಾಮನಹಳ್ಳಿಯ ಸೋಮಶೇಖರ್ 32 ಊಟದ ತಟ್ಟೆಗಳು, ಜಕ್ಕನಹಳ್ಳಿ ರಾಘವೇಂದ್ರ, ಕುಮಾರ್ ಮತ್ತು ಲಕ್ಷ್ಮೀ ಮೆಡಿಕಲ್ಸ್‌ನ ಲತಾ 12 ಲೀಟರ್‌ನ ಎರಡು ಕುಕ್ಕರ್‌ಗಳು, ಎಸ್‌ಡಿಎಂಸಿ ಉಪಾಧ್ಯಕ್ಷೆ ಪವಿತ್ರಾ ಶಾಲೆಯ ಎಲ್ಲ ಮಕ್ಕಳಿಗೂ ಸ್ವೆಟರ್‌ಗಳು, ನ್ಯಾಮನಹಳ್ಳಿ ಗ್ರಾಮದ ಎಂ.ಸಿ.ಕುಮಾರ್ ಎಂಬುವರು 8 ಸಾವಿರ ರೂ. ಮೌಲ್ಯದ ಅಲ್ಮೆರಾ ಹಾಗೂ ಎಸ್‌ಡಿಎಂಸಿಯ 18 ಸದಸ್ಯರು ತಲಾ ಒಂದೊಂದು ರಾಷ್ಟ್ರ ನಾಯಕರ ಫೋಟೋಗಳನ್ನು ಕೊಡುಗೆ ನೀಡಿದರು. ಎಸ್‌ಡಿಎಂಸಿ ಅಧ್ಯಕ್ಷ ಸೈನಿಕ ನಲ್ಲಹಳ್ಳಿ ಮಲ್ಲೇಶ್, ಮುಖ್ಯಶಿಕ್ಷಕಿ ಪೂರ್ಣಿಮಾ ಹಾಗೂ ಶಿಕ್ಷಕರಿದ್ದರು.