ಜಿಲ್ಲೆ

ಕೆಂಚಿಕೊಪ್ಪದಲ್ಲಿ ಗ್ರಂಥಪಾಲಕರ ದಿನಾಚರಣೆ

ನ್ಯಾಮತಿ: ತಾಲೂಕಿನ ಕೆಂಚಿಕೊಪ್ಪ ಗ್ರಾಮದ ಗ್ರಂಥಾಲಯದಲ್ಲಿ ಗ್ರಾಪಂ, ಶಾಲೆ ಮತ್ತು ಗ್ರಾಮಸ್ಥರ ಸಹಯೋಗದಲ್ಲಿ ಭಾರತೀಯ ಗಣಿತಜ್ಞ, ಗ್ರಂಥಾಲಯ ಪಿತಾಮಹ ಡಾ.ಎನ್.ಆರ್. ರಂಗನಾಥನ್ ಅವರ ಜನ್ಮದಿನದ ಅಂಗವಾಗಿ ಶನಿವಾರ ಗ್ರಂಥಪಾಲಕರ ದಿನ ಆಚರಿಸಲಾಯಿತು.
ದಿನಾಚರಣೆ ಪ್ರಯುಕ್ತ ಮಕ್ಕಳಿಗೆ ಚಿತ್ರಕಲಾ, ಪ್ರಬಂಧ, ಮಣ್ಣಿನಿಂದ ಆಕೃತಿ ತಯಾರಿಸುವುದು ಸೇರಿದಂತೆ ವಿವಿಧ ಸ್ಪರ್ಧೆ ನಡೆಸಲಾಯಿತು. ಸ್ಪರ್ಧೆಯಲ್ಲಿ ವಿಜೇತರಾದ ಮಕ್ಕಳಿಗೆ ಬಹುಮಾನ ವಿತರಣೆ ಮಾಡಲಾಯಿತು.
ಕಾರ್ಯಕ್ರಮದಲ್ಲಿ ಗ್ರಾಪಂ ಅಧ್ಯಕ್ಷರಾದ ತಿಮ್ಮೇಶ ಜೆ., ಮಾಜಿ ಅಧ್ಯಕ್ಷ ಚಂದ್ರಪ್ಪ ಬಿ.ಇ., ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಮುಖ್ಯಶಿಕ್ಷಕ ಸೋಮಶೇಖರಪ್ಪ, ನಿವೃತ್ತ ಶಿಕ್ಷಕ ಲೋಕೇಶ್ವರಯ್ಯ ರಾಜಶೇಖರಪ್ಪ, ಗ್ರಾಮದ ಹಿರಿಯರಾದ ಕೆ.ಎನ್. ಈಶ್ವರಪ್ಪ, ಎಸ್‌ಡಿಎಂಸಿ ಸದಸ್ಯರಾದ ಯೋಗೇಶ್, ಅಶೋಕ, ಗಂಗಪ್ಪ, ಗ್ರಂಥಪಾಲಕ ರಾಜಪ್ಪ ಎಚ್.ಕೆ., ವಿದ್ಯಾರ್ಥಿಗಳು ಭಾಗವಹಿಸಿದ್ದರು.