ಚಿತ್ರದುರ್ಗ: ನಗರದ ದೇವರಾಜ ಅರಸು ಶಿಕ್ಷಣ ಸಂಸ್ಥೆ ಶ್ರೀ ವೆಂಕಟೇಶ್ವರ ಶಿಕ್ಷಣ ಮಹಾವಿದ್ಯಾಲಯದಲ್ಲಿ ಅ.19ರಂದು ಬೆಳಗ್ಗೆ 10 ಗಂಟೆಗೆ, ನ್ಯಾಕ್-ಅಕ್ರಿಡಿಟೇಶನ್ ಫ್ರೇಮ್ ವರ್ಕ್ ಆಫ್ ರಿಫಾರ್ಮ್ಸ್-2024 ಕುರಿತಂತೆ ರಾಷ್ಟ್ರೀಯ ಸಮ್ಮೇಳನ ಏರ್ಪಡಿಸಲಾಗಿದೆ. ಹೊಳಲ್ಕ್ಕೆರೆ ಶಾಸಕ ಹಾಗೂ ಸಂಸ್ಥೆ ಸಂಸ್ಥಾಪಕ ಕಾರ‌್ಯದರ್ಶಿ ಡಾ.ಎಂ.ಚಂದ್ರಪ್ಪ ಸಮ್ಮೇಳನ ಉದ್ಘಾಟಿಸುವರು.
ಸಂಸ್ಥೆ ಮುಖ್ಯ ಕಾರ‌್ಯನಿರ್ವಹಣಾಧಿಕಾರಿ ಎಂ.ಸಿ.ರಘುಚಂದನ್ ಉದ್ಘಾಟನಾ ಹಾಗೂ ಕಾಲೇಜು ಶಿಕ್ಷಣ ಇಲಾಖೆ ಎಸ್‌ಕ್ಯೂಎಸಿ ನೋಡಲ್ ಅಧಿಕಾರಿ ಡಾ.ಕೆ.ವಿಕ್ರಂ ದಿಕ್ಸೂಚಿ ಭಾಷಣ ಮಾಡುವರು.
ಸಂಸ್ಥೆ ಆಡಳಿತಾಧಿಕಾರಿ ಎಚ್.ಚಂದ್ರಕಲಾ, ದಾವಣಗೆರೆ ವಿವಿ ಮೌಲ್ಯಮಾಪನ ಕುಲಸಚಿವ ಡಾ.ಸಿ.ಕೆ.ರಮೇಶ್, ಕಾಲೇಜು ಶಿಕ್ಷಣ ಇಲಾಖೆ ಶಿವಮೊಗ್ಗ ವಲಯ ಜಂಟಿ ನಿರ್ದೇಶಕ ಡಾ.ಕೆ.ಎ.ವಿಷ್ಣುಮೂರ್ತಿ ಮುಖ್ಯ ಅತಿಥಿಗಳಾಗಿ ಆಗಮಿಸುವರು. ಪ್ರಾಚಾರ್ಯ ಡಾ.ಬಿ.ಸಿ.ಅನಂತ ರಾಮ್ ಅಧ್ಯಕ್ಷತೆ ವಹಿಸುವರು.
ನ್ಯಾಕ್ ಸಂಸ್ಥೆ ನಿಕಟಪೂರ್ವ ಉಪಾಧ್ಯಕ್ಷ ಡಾ.ಎಸ್.ಶ್ರೀನಿವಾಸ್ ಹಾಗೂ ಬೆಂಗಳೂರಿನ ಪ್ರೆಸಿಡೆನ್ಸಿ ವಿವಿಯ ಡಾ.ಎಚ್.ಎಸ್.ಬದ್ರಿಯವರು ತಾಂತ್ರಿಕ ಗೋಷ್ಠಿಗಳಲ್ಲಿ ಭಾಗವಹಿಸುವರು. ಸಂಜೆ 4.30ಕ್ಕೆ ಏರ್ಪಡಿಸಿರುವ ಸಮಾರಂಭದಲ್ಲಿ ದಾವಣಗೆರೆ ವಿವಿ ಶಿಕ್ಷಣ ವಿಭಾಗದ ಮುಖ್ಯಸ್ಥ ಡಾ.ಕೆ. ವೆಂಕಟೇಶ್ ಸಮಾರೋಪ ಭಾಷಣ ಮಾಡುವರು.
ನಗರದ ಸರ್ಕಾರಿ ಶಿಕ್ಷಕರ ಶಿಕ್ಷಣ ಮಹಾವಿದ್ಯಾಲಯದ ಪದನಿಮಿತ್ತ ಜಂಟಿ ನಿರ್ದೇಶಕಿ ಟಿ. ಜಿ.ಲೀಲಾವತಿ ಪ್ರಮಾಣಪತ್ರ ವಿತರಿಸುವರು. ಸಮ್ಮೇಳನ ಸಂಯೋಜಕರಾದ ಪ್ರೊ.ಆರ್.ಎಸ್.ರಾಜು ಹಾಗೂ ಡಾ.ಜಿ.ಇ.ಬೈರಸಿದ್ದಪ್ಪ ಉಪಸ್ಥಿತರಿರುವರು ಎಂದು ಪ್ರಕಟಣೆ ತಿಳಿಸಿದೆ.