ಮಹಾಗಾಂವ್ ಕ್ರಾಸ್ನಲ್ಲಿರುವ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಶನಿವಾರ ಹಮ್ಮಿಕೊಂಡಿದ್ದ ಹಳೆಯ ವಿದ್ಯಾರ್ಥಿಗಳ ಸಂಘದ ಉದ್ಘಾಟನೆ, ವಾರ್ಷಿಕ ಸಂಚಿಕೆ ಬಿಡುಗಡೆ ಕಾರ್ಯಕ್ರಮವನ್ನು ಶಾಸಕ ಬಸವರಾಜ ಮತ್ತಿಮಡು ಉದ್ಘಾಟಿಸಿದರು. ಶಿವಪ್ರಭು ಪಾಟೀಲ್, ಶಿವಕುಮಾರ ಪಸಾರ, ರಾಜಕುಮಾರ ಕೋಟೆ, ಜೈಕಿಶನ್ ಠಾಕೂರ್, ಗಿರೀಶ ಪಾಟೀಲ್, ಪ್ರೊ.ಭಾರತಿ, ಪ್ರೊ. ರೇಣುಕಾ ಇತರರಿದ್ದರು. 
ಜಿಲ್ಲೆ

ನ್ಯಾಕ್ ಮಾನ್ಯತೆ ಪಡೆಯಲು ಸಹಕಾರ ನೀಡುವೆ

ಕಮಲಾಪುರ (ಕಲಬುರಗಿ): ಮಹಾಗಾಂವ್ ಕ್ರಾಸ್​ನ ಸರ್ಕಾರಿ ಕಾಲೇಜಿನ ಸಿಬ್ಬಂದಿ ನ್ಯಾಕ್ ಮಾನ್ಯತೆ ಪಡೆಯಲು ನಿರಂತರ ಪ್ರಯತ್ನ ಮಾಡುತ್ತಿದ್ದು, ಅವರಿಗೆ ಅಗತ್ಯ ಮೂಲ ಸೌಕರ್ಯ ಒದಗಿಸುವ ಮೂಲಕ ನ್ಯಾಕ್ ಮಾನ್ಯತೆಗಾಗಿ ಸಹಕಾರ ನೀಡುವುದಾಗಿ ಶಾಸಕ ಬಸವರಾಜ ಮತ್ತಿಮಡು ಭರವಸೆ ನೀಡಿದರು.

ಮಹಾಗಾಂವ ಕ್ರಾಸ್​ನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಶನಿವಾರ ಹಮ್ಮಿಕೊಂಡಿದ್ದ ವಾರ್ಷಿಕ ಸಂಚಿಕೆ ಬಿಡುಗಡೆ, ಹಳೆಯ ವಿದ್ಯಾರ್ಥಿ ಗಳ ಸಂಘ ಮತ್ತು ಬೇಬಿ ಕೇರ್ ಸೆಂಟರ್ ಉದ್ಘಾಟಿಸಿ ಮಾತನಾಡಿ, ಕಾಲೇಜಿನ ವಿದ್ಯಾರ್ಥಿಗಳ ಕಲಿಕೆಗೆ ಅನುಕೂಲವಾಗಲಿ ಎಂದು ಕೆಲ ದಿನ ಹಿಂದೆ 1 ಕೋಟಿ ರೂ. ವೆಚ್ಚದಲ್ಲಿ ನೂತನ ಕೊಠಡಿ ನಿರ್ಮಾಣ ಮತ್ತು ಪುನರ್ ನವೀಕರಣ ಕಾಮಗಾರಿಗೆ ಚಾಲನೆ ನೀಡಲಾಗಿದೆ. ಅಲ್ಲದೆ ವಿಜ್ಞಾನ ಪ್ರಯೋಗಾಲಯದ ಪೀಠೋಪಕರಣ ಹಾಗೂ ಮತ್ತಿತರ ಸೌಕರ್ಯಕ್ಕಾಗಿ 25 ಲಕ್ಷ ರೂ. ಒದಗಿಸಲಾಗಿದೆ ಎಂದರು.

ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಶಿವಪ್ರಭು ಪಾಟೀಲ್ ಮಾತನಾಡಿದರು. ಕಾಲೇಜಿನ ಹಳೆಯ ವಿದ್ಯಾರ್ಥಿಗಳ ಸಂಘ ಉದ್ಘಾಟಿಸಿ, ಪತ್ರಕರ್ತ ಸುರೇಶ ಲೇಂಗಟಿ ಅವರನ್ನು ಅಧ್ಯಕ್ಷರನ್ನಾಗಿ ನೇಮಕ ಮಾಡಲಾಯಿತು.

ಪ್ರಾಂಶುಪಾಲ ಜೈಕಿಶನ್ ಠಾಕೂರ್, ಪಿಕೆಪಿಎಸ್ ಅಧ್ಯಕ್ಷ ಗಿರೀಶ ಪಾಟೀಲ್, ಪ್ರಮುಖರಾದ ರಾಜಕುಮಾರ ಕೋಟೆ, ಶಿವಕುಮಾರ ಪಸಾರ, ಮಲ್ಲಿಕಾರ್ಜುನ ಮರತೂರಕರ, ಪ್ರವೀಣ ಮುಚ್ಚಟ್ಟಿ, ಶಶಿಕಾಂತ ಪಾಟೀಲ್, ರಾಬಿಯಾ ಇಪ್ಪತ್, ಮಹ್ಮದ್ ಯೂನಿಸ್, ಸುಜಾತಾ ದೊಡ್ಡಮನಿ, ಭಾರ್ಗವಿ ಎಚ್., ಶಾಮಲಾ ಸ್ವಾಮಿ, ಅಂಬಾರಾಯ ಮಡ್ಡೆ, ಬಂಗಾರಪ್ಪ ಚೌದ್ರಿ, ಕಲ್ಪನಾ, ಬಾಬು ಜಾಲಹಳ್ಳಿ ಇತರರಿದ್ದರು.

ಪ್ರೋ.ಶಶಿಕಾಂತ ಪಾಟೀಲ್ ಸ್ವಾಗತಿಸಿದರು. ಪ್ರೋ.ಭಾರತಿ ಭೂಸಾರೆ ನಿರೂಪಣೆ ಮಾಡಿದರು. ಪ್ರೋ. ರೇಣುಕಾ ವಂದಿಸಿದರು.

ಬಡ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ಸಿಗಲಿ ಎಂಬ ಉದ್ದೇಶದಿಂದ ಸರ್ಕಾರ ಸಾಕಷ್ಟು ಯೋಜನೆಗಳನ್ನು ಜಾರಿಗೆ ತಂದಿದ್ದು, ಅವುಗಳ ಸದುಪಯೋಗ ಪಡೆದುಕೊಳ್ಳಬೇಕು. ಕ್ಷೇತ್ರದಲ್ಲಿನ ಸರ್ಕಾರಿ ಶಾಲೆ- ಕಾಲೇಜುಗಳ ಅಭಿವೃದ್ಧಿಗೆ ಹಗಲಿರುಳು ಶ್ರಮಿಸುತ್ತಿದ್ದೇನೆ. ವಿದ್ಯಾರ್ಥಿಗಳು ತಮ್ಮ ಸಮಸ್ಯೆಯನ್ನು ನೇರವಾಗಿ ನನ್ನ ಮುಂದೆ ಹೇಳಿಕೊಳ್ಳಬಹುದು.
| ಬಸವರಾಜ ಮತ್ತಿಮಡು, ಶಾಸಕ

ಗ್ರಾಮೀಣ ಭಾಗದ ಬಡ ಮಕ್ಕಳು ಗುಣಮಟ್ಟದ ಶಿಕ್ಷಣ ಪಡೆದು, ರಾಜ್ಯ ಮಟ್ಟದಲ್ಲಿ ಸಾಧನೆ ಮೆರಯಬೇಕು. ವಿದ್ಯಾರ್ಥಾಗಳ ಕಲಿಕೆಗೆ ಬಡತನ ಅಡ್ಡಿಯಾಗುತ್ತಿದ್ದರೆ, ಅಂಥವರಿಗೆ ಶಿಕ್ಷಣ ಸಾಲ ಒದಗಿಸಲಾಗುವುದು. ಇದಲ್ಲದೆ ಏನಾದರೂ ಸಹಕಾರ ಬೇಕಾದರು ನೀಡಲು ಸಿದ್ಧನಿದ್ದೇನೆ.
| ಶಿವಪ್ರಭು ಪಾಟೀಲ್, ಜಿಪಂ ಮಾಜಿ ಅಧ್ಯಕ್ಷ