ವಿಜಯವಾಣಿ ಸುದ್ದಿಜಾಲ ಕಾರವಾರ
ಡಿಸೆಂಬರ್ 17 ಹಾಗೂ 18 ರಂದು ಉಳವಿ ಕ್ಷೇತ್ರದಲ್ಲಿ ಆಯೋಜಿಸಿರುವ 22 ನೇ ಉತ್ತರ ಕನ್ನಡ ಜಿಲ್ಲಾ ಸಾಹಿತ್ಯ ಸಮ್ಮೇಳನವನ್ನು ನಿವೃತ್ತ ನ್ಯಾಯಮೂರ್ತಿ ಎಚ್.ಎಸ್.ನಾಗಮೋಹನದಾಸ ಅವರು ಶನಿವಾರ ಬೆಳಗ್ಗೆ 10.30 ಕ್ಕೆ ಉದ್ಘಾಟಿಸುವರು ಎಂದು ಕಸಾಪ ಜಿಲ್ಲಾಧ್ಯಕ್ಷ ಬಿ.ಎನ್.ವಾಸರೆ ತಿಳಿಸಿದರು.
ಜಿಲ್ಲಾ ಸಾಹಿತ್ಯ ಸಮ್ಮೇಳನದ ಆಮಂತ್ರಣ ಪತ್ರಿಕೆಯನ್ನು ಗುರುವಾರ ಬಿಡುಗಡೆ ಮಾಡಿ ಅವರು ಮಾತನಾಡಿದರು. ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರು ಪುಸ್ತಕಗಳನ್ನು ಬಿಡುಗಡೆ ಮಾಡುವರು. ಶಾಸಕ ಆರ್.ವಿ.ದೇಶಪಾಂಡೆ ಅವರು ಸ್ಮರಣ ಸಂಚಿಕೆ ಬಿಡುಗಡೆ ಮಾಡುವರು. ಕಸಾಪ ಅಧ್ಯಕ್ಷ ಮಹೇಶ ಜೋಶಿ ಪುಸ್ತಕ ಮಳಿಗೆಗಳನ್ನು ಉದ್ಘಾಟಿಸುವರು.
ಜ್ಞಾನನಿಽ ಚೆನ್ನ ಬಸವಣ್ಣ ಅವರ ಹೆಸರನ್ನು ಪ್ರಧಾನ ವೇದಿಕೆಗೆ ಇಡಲಾಗಿದೆ. ಜಿಲ್ಲೆಯ ಸಾಹಿತ್ಯ, ಶಿಕ್ಷಣ ಕ್ಷೇತ್ರಕ್ಕೆ ಕೊಡುಗೆ ನೀಡಿದ ನಾ.ಸು.ಭರತನಹಳ್ಳಿ, ವಿ.ಜೆ.ನಾಯಕ, ಪ್ರಭಾಕರ ರಾಣೆ, ಮಾದೇವ ವೇಳೀಪ, ಡಾ.ವಿಠ್ಠಲ ಭಂಡಾರಿ ಅವರ ಹೆಸರನ್ನು ವಿವಿಧ ದ್ವಾರಗಳಿಗೆ ಇಡಲಾಗಿದೆ. ಸಚಿವ ಶಿವರಾಮ ಹೆಬ್ಬಾರ ಅವರು ಆ ದ್ವಾರಗಳನ್ನು ಉದ್ಘಾಟಿಸುವರು. ಸಾಹಿತ್ಯ ಸಮ್ಮೇಳನ್ಕೆ ಉಳವಿಗೆ ಬರುವವರಿಗೆ ದಾಂಡೇಲಿ ಹಾಗೂ ಜೊಯಿಡಾದಿಂದ ಬೆಳಗ್ಗೆ ಮತ್ತು ರಾತ್ರಿ ಎನ್‌ಡಬ್ಲುಕೆಆರ್‌ಟಿಸಿ ಬಸ್ ವ್ಯವಸ್ಥೆ ಮಾಡಲಾಗಿದೆ. ವಸತಿ, ಊಟದ ವ್ಯವಸ್ಥೆ ಮಾಡಲಾಗುತ್ತಿದೆ. ಶಿಕ್ಷಕರಿಗೆ ಒಒಡಿ ಸೌಲಭ್ಯವಿದೆ. ಪುಸ್ತಕ ಹಾಗೂ ಇತರ ಎಲ್ಲ ಮಳಿಗೆಗಳನ್ನು ಉಚಿತವಾಗಿ ನೀಡಲಾಗಿದೆ ಎಂದು ಮಾಹಿತಿ ನೀಡಿದರು. ಸಮ್ಮೇಳನ ಸರ್ವಾಧ್ಯಕ್ಷ ಶಾಂತಾರಾಮ ನಾಯಕ ಹಿಚಕಡ ಅವರನ್ನು ಮೆರವಣಿಗೆಯಲ್ಲಿ ಕರೆತರಲಾಗುವುದು. ಅದಕ್ಕೂ ಪೂರ್ವದಲ್ಲಿ ರಾಷ್ಟç, ನಾಡ ಧ್ವಜ ಹಾಗೂ ಕಸಾಪ ಧ್ವಜಾರೋಹಣ ನಡೆಯಲಿದೆ ಎಂದರು.
ಗೋಷ್ಠಿಗಳು:
ಉತ್ತರ ಕನ್ನಡ ಜಿಲ್ಲೆಯ ಬುಡಕಟ್ಟುಗಳು ಬದುಕು ಬವಣೆ ಮತ್ತು ಸಂಸ್ಕೃತಿ ಎಂಬ ವಿಚಾರವಾಗಿ ಮೊದಲ ದಿನ ಮಧ್ಯಾಹ್ನ 2.30 ಮೊದಲ ಗೋಷ್ಠಿ ನಡೆಯಲಿದ್ದು, ಎಂಎಲ್‌ಸಿ ಶಾಂತಾರಾಮ ಸಿದ್ದಿ ಅಧ್ಯಕ್ಷತೆ ವಹಿಸುವರು. ಸಾಯಂಕಾಲ 4 ಗಂಟೆಗೆ ಕವಿ ಕಾವ್ಯ ಸಮಯ ಗೋಷ್ಠಿ ನಡೆಯಲಿದ್ದು, ಡಾ.ಶ್ರೀಪಾದ ಶೆಟ್ಟಿ ಅಧ್ಯಕ್ಷತೆ ವಹಿಸುವರು. 5.30 ಕ್ಕೆ ಮಾಧ್ಯಮ ಮತ್ತು ವರ್ತಮಾನದ ಸವಾಲುಗಳು ಗೋಷ್ಠಿಯ ಅಧ್ಯಕ್ಷತೆಯನ್ನು ಹಿರಿಯ ಪತ್ರಕರ್ತ ಜಿ.ಯು.ಭಟ್ ವಹಿಸುವರು. ಅಂದು ಸಾಯಂಕಾಲ ವಿವಿಧ ಕಲಾವಿದರು ಹಾಗೂ ಜೊಯಿಡಾ ಶಾಲೆಗಳ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ.
ಡಿ.18 ರಂದು ಬೆಳಗ್ಗೆ 9.30 ರಿಂದ ಉತ್ತರ ಕನ್ನಡ ಜಿಲ್ಲೆಯ ಅಭಿವೃದ್ಧಿಯ ಮುನ್ನೋಟ ವಿಷಯದ ಕುರಿತು ಗೋಷ್ಠಿ ನಡೆಯಲಿದ್ದು, ಪ್ರಮೋದ ಹೆಗಡೆ ಅಧ್ಯಕ್ಷತೆ ವಹಿಸುವರು. ಯುವ ಗೋಷ್ಠಿಯು 11.30 ರಿಂದ ನಡೆಯಲಿದ್ದು, ಮಾಧವಿ ಭಂಡಾರಿ ಅಧ್ಯಕ್ಷತೆ ವಹಿಸುವರು. 1 ಗಂಟೆಯಿAದ ನಡೆಯುವ ಸಮ್ಮೇಳನಾಧ್ಯಕ್ಷರ ಸಾಹಿತ್ಯಾವಲೋಕನದಲ್ಲಿ ಸುಬ್ರಾಯ ಮತ್ತಿಹಳ್ಳಿ, ಪಾಲ್ಗುಣ ಗೌಡ ಮಾತನಾಡುವರು. ಮಧ್ಯಾಹ್ನ 3 ರಿಂದ ವಚನ ವಿಚಾರ ಗಾಯನ ಗೋಷ್ಠಿಯ ಅಧ್ಯಕ್ಷತೆಯನ್ನು ಉಳವಿ ಪ್ರಧಾನ ಅರ್ಚಕ ಶಂಕರಯ್ಯ ಕಲ್ಮಠ ವಹಿಸುವರು. ನಂತರ ವಿವಿಧ ಕ್ಷೇತ್ರಗಳ 15 ಜನ ಸಾಧಕರಿಗೆ ಕಸಾಪ ಸನ್ಮಾನ ಕಾರ್ಯಕ್ರಮಗಳು ನಡೆಯಲಿವೆ. 5.30 ಕ್ಕೆ ಸಮಾರೋಪ ನುಡಿ ಇದ್ದು, ಬರಹಗಾರ್ತಿ ವಿನಯಾ ಒಕ್ಕುಂದ ಅಮಾರೋಪ ಭಾಷಣ ಮಾಡುವರು ಎಂದು ತಿಳಿಸಿದರು.
ರಾಮಾ ನಾಯ್ಕ, ಸ್ವಾಗತಿಸಿದರು. ಜಾರ್ಜ್ ಫರ್ನಾಂಡಿಸ್ ವಂದಿಸಿದರು. ಕಸಾಪ ಪದಾಽಕಾರಿಗಳಾದ ಪಿ.ಆರ್.ನಾಯ್ಕ, ಮಾಧವ ನಾಯ್ಕ, ಮಹೇಶ ಗೂಳೀಕಟ್ಟಿ, ಯು.ಎಸ್.ಪಾಟೀಲ, ಬಾಬು ಶೇಖ್ ಇದ್ದರು.