ಹೊಸಪೇಟೆ: ನೌಕರರು ಯೋಜನಾಬದ್ಧ ಆರ್ಥಿಕ ಉಳಿತಾಯ ಶಿಸ್ತನ್ನು ರೂಢಿಸಿಕೊಳ್ಳಬೇಕು, ನಿವೃತ್ತಿಯ ನಂತರ ಬೇರೆಯವರ ಮೇಲೆ ಬದುಕಿಗಾಗಿ ಅವಲಂಬಿತರಾಗುವುದು ತಪ್ಪುತ್ತದೆ ಎಂದು ಕನ್ನಡ ವಿವಿ ಕುಲಪತಿ ಡಾ.ಡಿ.ವಿ.ಪರಮಶಿವಮೂರ್ತಿ ಹೇಳಿದರು.
ಕನ್ನಡ ವಿವಿಯ ಪಂಪ ಸಭಾಂಗಣದಲ್ಲಿ ಇತ್ತೀಚೆಗೆ ಬ್ಯಾಂಕಿನ ಆರ್ಥಿಕ ಸೌಲಭ್ಯಗಳ ಹಾಗೂ ಯೋಜನೆಗಳ ಕುರಿತ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದರು.
ಪ್ರಸ್ತುತ ಕಾಲದಲ್ಲಿ ಬ್ಯಾಂಕ್‌ಗಳಿಂದ ವಿವಿಧ ಆರ್ಥಿಕ ಸಂಸ್ಥೆಗಳಿಂದ ಅನೇಕ ರೀತಿಯ ಅಂದರೆ ಮ್ಯೂಚುವಲ್ ಫಂಡ್, ಷೇರು ಖರೀದಿ, ಗೃಹ ಸಾಲ, ವಾಹನ ಸಾಲ, ವಿದ್ಯೆಗಾಗಿ ಶೈಕ್ಷಣಿಕ ಸಾಲ ಹೀಗೆ ಅನೇಕ ರೀತಿಯಿಂದ ಆರ್ಥಿಕ ಸೌಲಭ್ಯಗಳಿವೆ. ಯೋಜನೆಗಳಿವೆ. ಬ್ಯಾಂಕಿಗೆ ಹೋಗಿ ಅಧಿಕಾರಿಗಳಿಂದ ತಿಳುವಳಿಕೆ ಪಡೆದು ಸೌಲಭ್ಯಗಳನ್ನು ಸದುಪಯೋಗ ಮಾಡಿಕೊಂಡರೆ ಸಾಲವಿಲ್ಲದೆ ಮಾದರಿಯಾಗಿ ಬದುಕಬಹುದು ಎಂದರು.
ಪವರ್ ಪಾಯಿಂಟ್ ಪ್ರೆಸೆÀಂಟೇಶನ್ ಮೂಲಕ ಹುಬ್ಬಳ್ಳಿಯ ವಲಯ ಆಧಿಕಾರಿ ಅಪ್ಪುರಾವ್ ಹಾಗೂ ದೀಪಕ್‌ರಾಣ, ಡ್ಯಾನಿ ಅವರು ಕನ್ನಡ ವಿಶ್ವವಿದ್ಯಾಲಯದ ಉದ್ಯೋಗಿಗಳಿಗೆ ಬ್ಯಾಂಕಿನ ಆರ್ಥಿಕ ಸೌಲಭ್ಯಗಳ ಕುರಿತು ಸುದೀರ್ಘವಾಗಿ ಮಾಹಿತಿ ಒದಗಿಸಿದರು.
ಕಮಲಾಪುರದ ಬ್ಯಾಂಕ್ ಆಫ್ ಇಂಡಿಯಾ ವ್ಯವಸ್ಥಾಪಕ ಅರುಣ್‌ಕುಮಾರ್, ವಿವಿಯ ಹಣಕಾಸು ಅಧಿಕಾರಿ ಡಾ.ಎ.ಶ್ರೀಧರ್, ಪ್ರಾಧ್ಯಾಪಕರಾದ ಡಾ.ಶೈಲಜಾ ಇಂ.ಹಿರೇಮಠ, ಡಾ.ಅಮರೇಶ ಯತಗಲ್, ಡಾ.ವೆಂಕಟಗಿರಿ ದಳವಾಯಿ, ಡಾ.ಮಲ್ಲಿಕಾರ್ಜುನ ವಣೇನೂರು, ಡಾ.ಡಿ.ಮೀನಾಕ್ಷಿ, ಡಾ.ಎ.ವೆಂಕಟೇಶ, ಎಸ್.ಕೆ.ವಿಜಯೇಂದ್ರ ಇತರರಿದ್ದರು.