ಬಾಗಲಕೋಟೆ: ದಿನವೀಡಿ ಒತ್ತಡದ ಕರ್ತವ್ಯದ ನಿರ್ವಹಣೆಯಲ್ಲಿ ತೊಡಗುತ್ತಿದ್ದ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಽಕಾರಿ ಶಶಿಧರ ಕುರೇರ ಸೇರಿದಂತೆ ಜಿ.ಪಂ ವಿವಿಧ ಅಽಕಾರಿಗಳು ಕ್ರೀಡಾಕೂಟದಲ್ಲಿ ಭಾಗವಹಿಸಿ ಸಿಬ್ಬಂದಿಗಳಿಗೆ ಹುರುಪು ತುಂಬಿದರು.
ನವನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಮೂರು ದಿನಗಳ ಕಾಲ ಹಮ್ಮಿಕೊಂಡ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ ರಾಜ್ ಇಲಾಖಾ ನೌಕರರ ಕ್ರೀಡಾಕೂಟ ಎರಡನೇ ದಿನವಾದ ಶನಿವಾರ ಚೆಸ್, ಕೇರಂ, ಗುಂಡು ಎಸೆತ, ಟೆನಿಕ್ವಾಯಿಟ್, ಕ್ರಿಕೆಟ್ ಸೇರಿದಂತೆ ಇತರೆ ಕ್ರೀಡೆಗಳಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದು ಗಮನ ಸೆಳೆಯಿತು. ಅಽಕಾರಿಗಳೊಂದಿಗೆ ಆಟದಲ್ಲಿ ಭಾಗಿಯಾದ ಇಲಾಖೆ ಸಿಬ್ಬಂದಿಗಳು ಸಂಭ್ರಮಿಸಿದರು.
ಪುರುಷರ ವಿಭಾಗದ ವ್ಯಯಕ್ತಿಕ ಕ್ರೀಡೆಗಳಾದ ೧೦೦ ಮೀಟರ (ಎಸ್‌ಡಿಎ) ಓಟದಲ್ಲಿ ಸಿ.ಆರ್.ಆಸಂಗಿ (ಪ್ರಥಮ), ಎನ್.ಡಿ.ಕುಂಬಾರ (ದ್ವಿತೀಯ), ಎಂ.ಎಸ್.ದೇಸಾಯಿ (ತೃತೀಯ), ೧೦೦ ಮೀಟರ್ ಓಟ (ಝಡ್‌ಪಿ, ಟಿಪಿ) ಚೇತನ ಚೋತಗತ್ತಿ (ಪ್ರಥಮ), ದಾನೇಶ ಕಾಂಬಳೆ (ದ್ವಿತೀಯ), ಸದಾಶಿವ ಪಟ್ಟೆಪ್ಪಗೋಳ (ತೃತೀಯ), ೧೦೦ ಮೀಟರ್ (ಎಡಿಆರ್‌ಓ) ಮಹೇಶ ಜಗಲಿ (ಪ್ರಥಮ), ಗಂಗಾಧರ ಹನಮಸಾಗರ (ದ್ವಿತೀಯ), ಶೇಖರ ಅಂಗಡಿ (ತೃತೀಯ), ಉದ್ದ ಜಿಗಿತದಲ್ಲಿ ಅನೀಲ ಲಮಾಣಿ (ಪ್ರಥಮ), ಮಂಜುನಾಥ ಗೌಡರ (ದ್ವಿತೀಯ), ಬ್ರಹ್ಮಾನಂದ ಹಲಕುರ್ಕಿ (ತೃತೀಯ), ಗುಂಡು ಎಸೆತದಲ್ಲಿ ಅನೀಲ್ ಲಮಾಣಿ (ಪ್ರಥಮ), ದಯಾನಂದ ಅದಾನಿ (ದ್ವಿತೀಯ), ಗಜಾನಂದ ಪಶ್ಚಾಪುರ (ತೃತೀಯ), ಚಕ್ರ ಎಸೆತದಲ್ಲಿ ಅನೀಲ ಲಮಾಣಿ (ಪ್ರಥಮ), ಚೇತನಸಿಂಗ್ ರಜಪುತ (ದ್ವಿತೀಯ), ಮಹಾಂತೇಶ ಕೊಡಕೇರಿ (ತೃತೀಯ), ಎತ್ತರ ಜಿಗಿತದಲ್ಲಿ ಬ್ರಹ್ಮಾನಂದ ಹಲಕುರ್ಕಿ (ಪ್ರಥಮ), ಚೇತನಸಿಂಗ್ ರಜಪೂತ (ದ್ವಿತೀಯ), ರಾಮು ಕರೆಪ್ಪನವರ (ತೃತೀಯ) ಸ್ಥಾನ ಪಡೆದುಕೊಂಡರು.
ಮಹಿಳಾ ವಿಭಾಗದ ವ್ಯಯಕ್ತಿಕ ಕ್ರೀಡೆಗಳಾದ ಗುಂಡು ಎಸೆತದಲ್ಲಿ ಕಾವೇರಿ ಹೋಳಿಕಟ್ಟಿ (ಪ್ರಥಮ), ಲಕ್ಕವ್ವ ಜನವಾಡ (ದ್ವಿತೀಯ), ಕೀರ್ತಿ ಚಂದನಶಿರ (ತೃತೀಯ), ಉದ್ದ ಜಿಗಿತದಲ್ಲಿ ಲಕ್ಷಿ÷್ಮÃ ತಿಮ್ಮನ್ನವರ (ಪ್ರಥಮ), ರೇಣುಕಾ ಅಮರಿ (ದ್ವಿತೀಯ), ಲಕ್ಷಿ÷್ಮÃ ಅವರಾ (ತೃತೀಯ), ಎತ್ತರ ಜಿಗಿತದಲ್ಲಿ ಲಕ್ಷಿ÷್ಮÃ ತಿಮ್ಮನ್ನವರ (ಪ್ರಥಮ), ಶಕುಂತಲಾ ಯಲ್ಲಡಗಿ (ದ್ವಿತೀಯ), ಕೀರ್ತಿ ಚಂದನಶಿವ (ತೃತೀಯ), ಚಕ್ರ ಎಸೆತದಲ್ಲಿ ಕಾವೇರಿ ಹೊಳಿಕೊಟ್ಟಿ (ಪ್ರಥಮ), ಲಕ್ಕವ್ವ ಜುನವಾಡ (ದ್ವಿತೀಯ), ಅಮೃತ ಎಂ.ಬಿ. (ತೃತೀಯ), ೧೦೦ ಮೀಟರ್ ಓಟ (ಮಹಿಳಾ ಕಾರ್ಯದರ್ಶಿ) ಸುಕನ್ಯಾ ಕಲ್ಲೊಳ್ಳಿ (ಪ್ರಥಮ), ಸಾವಿತ್ರಿ ಸಿದ್ದಾಪುರ (ದ್ವಿತೀಯ), ಸವಿತಾ ವಾಲಿಕಾರ (ತೃತೀಯ), ೧೦೦ ಮೀಟರ್ ಓಟ (ಪಿಡಿಒ) ಸುನಿತಾ ಅಂಕೋಲೆ (ಪ್ರಥಮ), ಮಾಲಾಶ್ರೀ ಕೆಂಚನಗೌಡ (ದ್ವಿತೀಯ), ಅರ್ಚನಾ ಕಲಕರ್ಣಿ (ತೃತೀಯ) ಸ್ಥಾನ ಪಡೆದುಕೊಂಡಿದ್ದಾರೆ.