ಶಹಾಪುರ: ಮುಂದಿನ ದಿನಗಳಲ್ಲಿ ಭೂಮಿ ಖರೀದಿಸಿ ಅಲ್ಲಿ ನೌಕರರಿಗೆ ನಿವೇಶನ ನೀಡುವ ಯೋಜನೆ ಹಾಕಿಕೊಂಡಿರುವುದಾಗಿ ನೌಕರರ ಗೃಹ ನಿರ್ಮಾಣ ಸಂಘದ ಅಧ್ಯಕ್ಷ ವಿಶ್ವನಾಥರಡ್ಡಿ ದರ್ಶನಾಪುರ ಹೇಳಿದರು.
ಇಲ್ಲಿನ ಭೀಮ್ಮರಡ್ಡಿ ಬೈರಡ್ಡಿ ನಗರದಲ್ಲಿರುವ (ಎನ್‌ಜಿಒ ಕಾಲನಿ) ಸಂಘದ ಕಚೇರಿಯಲ್ಲಿ ಸೋಮವಾರ ಹಮ್ಮಿಕೊಂಡ ಆಡಳಿತ ಮಂಡಳಿ ೨೯ನೇ ವಾರ್ಷಿಕೋತ್ಸವ ಸಭೆ ಉದ್ಘಾಟಿಸಿ ಮಾತನಾಡಿದರು.
ಸಂಘ ೧೯೯೫ ಸ್ಥಾಪನೆಯಾಗಿದ್ದು, ಇಲ್ಲಿಯವರೆಗೂ ೬೨೯ ನೌಕರರು ಸದಸ್ಯರಾಗಿದ್ದು, ಇದರಲ್ಲಿ ಅನೇಕ ನೌಕರರಿಗೆ ನೀವೇಶನ ಹಂಚಿಕ್ಕೆ ಮಾಡಲಾಗಿದೆ. ಮುಂದೆಯೂ ಕೂಡ ನೌಕರರ ಹಿತರಕ್ಷಣೆಗಾಗಿ ಸಂಘ ಸದಾ ಕೆಲಸ ಮಾಡುತ್ತದೆ ಎಂದರು.
ಸAಘದ ಕಟ್ಟಡದ ನೆಲಮಹಡಿ ಕಾಮಗಾರಿ ಸಂಪೂರ್ಣ ಮುಕ್ತಾಯವಾಗಿದ್ದು, ಇನ್ನೂ ಆರು ತಿಂಗಳಲ್ಲಿ ಮೊದಲನೆ ಮಹಡಿ ಕಾಮಗಾರಿ ಪೂರ್ಣಗೊಳಿಸಿ ಉದ್ಘಾಟಿಸಲಾಗುವುದು ಎಂದರು.
೨೦೨೩-೨೪ನೇ ಸಾಲಿನ ವಾರ್ಷಿಕ ಲೆಕ್ಕಪತ್ರ ವರದಿ ಗೃಹ ನಿರ್ಮಾಣ ಸಹಕಾರ ಸಂಘದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಶಂಕರಗೌಡ ಯಕ್ಷಂತಿ ಸಭೆಗೆ ಮಂಡಿಸಿದರು. ಸಂಘದ ಸಲಹೆಗಾರ ಸಂಘದ ಕಾರ್ಯಚಟುವಟಿಕೆಗಳು ಜಿಲ್ಲಾ ಮಟ್ಟಕ್ಕೆ ವಿಸ್ತರಿಸಲಾಗುವುದು ಎಂದರು. ಸಂಘದ ಪದಾಧಿಕಾರಿ ಮತ್ತು ನಿರ್ದೇಶಕರಾದ ರೇಖು ಚವ್ಹಾಣ್, ಬೀಮ್ಮರಡ್ಡಿ ಬೈರಡ್ಡಿ, ಶಂಕರಗೌಡ ಪೊಲೀಸ್ ಪಾಟೀಲ್, ಬಾಪುಗೌಡ ಅಸನ್ಪೂರ, ರಾಮಗೊಂಡಪ್ಪ ಅರಳಗೊಂಡ, ಶಿವರಾಜ ಹಾಲಗೇರಾ, ಶಮಿನಾ ಶಾಹಿನ್, ಶೈಲಜಾ ಪತ್ತಾರ್, ದೇವೇಂದ್ರಪ್ಪ ತಡಬಿಡಿ, ಬಸವರಾಜ ಸಿಂಗ್ರಿ, ಅಮರಪ್ಪ ಸಗರ, ಹೇಮ್ಮರಡ್ಡಿ ಪಾಟೀಲ್, ತಾಂತ್ರಿಕ ಸಲಹೆಗಾರದ ರಾಜು ಸಾಹುಕಾರ್, ಶಿವಶರಣ ಕನ್ನೂಳಿ, ಚಾಂದಪಾಶಾ, ಶಾಂತಗೌಡ ಸಾಧ್ಯಪೂರ, ಅಶೋಕ ಕೂಡ್ಲೂರ, ಶಾಂತಗೌಡ ತುಂಬಿಗಿ, ಬಸವರಾಜ ಯಾಳಗಿ ಇತರರಿದ್ದರು.