ಜಿಲ್ಲೆ

ನೋವು ಕೊಡಬೇಡಿ ಎಂದು ಕಾರ್ಯಕರ್ತರಿಗೆ ಕೈ ಮುಗಿದ ಎಚ್‌ಡಿಕೆ

ಮೈಸೂರು: ಕೈ ಜೋಡಿಸಿ ಮನವಿ ಮಾಡುತ್ತೇನೆ. ದಯವಿಟ್ಟು ಮತ್ತೊಬ್ಬರ ಜತೆ ಸೇರಿ ಸರ್ಕಾರ ರಚಿಸುವ ಪರಿಸ್ಥಿತಿ ನಿರ್ಮಾಣ ಮಾಡಬೇಡಿ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಕಾರ್ಯಕರ್ತರಲ್ಲಿ ಮನವಿ ಮಾಡಿದರು.
50-60 ಸ್ಥಾನ ಪಡೆದು ಮತ್ತೊಬ್ಬರ ಜತೆ ಹೋಗುವ ಪರಿಸ್ಥಿತಿ ಬರೋದು ಬೇಡ. ಹೋದರೆ ಏನಾಗುತ್ತದೆ ಎಂಬ ನೋವನ್ನು ನಾನು ಅನುಭವಿಸಿದ್ದೇನೆ. ದಯವಿಟ್ಟು ಬೇರೊಬ್ಬರ ಜತೆ ಸೇರಿ ಸರ್ಕಾರ ರಚಿಸುವ ಪರಿಸ್ಥಿತಿ ತರಬೇಡಿ ಎಂದು ಕೈ ಮುಗಿದರು.