ಜಿಲ್ಲೆ

ನೊಂದವರಿಗೆ ಬೆಲ್ದಾಳೆ ನೆರವು

ಬೀದರ್: ಬಿಜೆಪಿ ಬೀದರ್ ದಕ್ಷಿಣ ಕ್ಷೇತ್ರದ ಎಸ್ಸಿ ಮೋರ್ಚಾ ಉಪಾಧ್ಯಕ್ಷ ಭರತಕುಮಾರ ಸಿದ್ಧಾ ಇತ್ತೀಚೆಗೆ ಅನಾರೋಗ್ಯದಿಂದ ನಿಧನ ಹೊಂದಿದ್ದು, ಸಿರ್ಸಿ (ಎ) ಗ್ರಾಮದಲ್ಲಿರುವ ಅವರ ಮನೆಗೆ ಕೆಎಸ್ಐಐಡಿಸಿ ಅಧ್ಯಕ್ಷ ಡಾ.ಶೈಲೇಂದ್ರ ಬೆಲ್ದಾಳೆ ಭೇಟಿ ನೀಡಿ ಸಾಂತ್ವನ ಹೇಳಿ ವೈಯಕ್ತಿಕ ನೆರವು ನೀಡಿದರು.

ಭರತಕುಮಾರ ನಿಷ್ಠೆಯಿಂದ ಪಕ್ಷದಲ್ಲಿ ಹಗಲಿರುಳು ಶ್ರಮಿಸಿದ್ದರು. ಅವರ ಅಗಲಿಕೆ ನೋವು ತರಿಸಿದೆ. ಅವರ ಮಗನ ಶಿಕ್ಷಣದ ಖಚರ್ು ಭರಿಸುವೆ ಹಾಗೂ ಭರತಕುಮಾರ ಪತ್ನಿಗೆ ಗುತ್ತಿಗೆ ಆಧಾರದ ಮೇಲೆ ಅತಿಥಿ ಉಪನ್ಯಾಸಕರ ಕೆಲಸ ಕೊಡಿಸುವುದಾಗಿ ಬೆಲ್ದಾಳೆ ಭರವಸೆ ನೀಡಿದರು.

ಬಿಜೆಪಿ ಬೀದರ್ ದಕ್ಷಿಣ ಮಂಡಲ ಅಧ್ಯಕ್ಷ ರಾಜರಡ್ಡಿ ಶಾಬಾದ್, ಪ್ರಧಾನ ಕಾರ್ಯದರ್ಶಿ ಚನ್ನಪ್ಪ ಗೌರಶೆಟ್ಟಿ, ಪ್ರಮುಖರಾದ ಚಂದ್ರಯ್ಯ ಸ್ವಾಮಿ, ಶಿವಕಾಂತ ಶೇಕಾಪುರ, ಸುರೇಶ ಮಾಶೆಟ್ಟಿ, ಘಾಳೆಪ್ಪ ಚಟ್ನಳ್ಳಿ, ಓಂಕಾರ ಮಜಗೆ, ಕಾಶೀನಾಥ ಅಲ್ದಿ, ಪುಂಡಲೀಕ ಟುಬಾಕ, ಸೂರ್ಯಕಾಂತ ಪೋತಾ ಇತರರಿದ್ದರು.