ಚಿತ್ರದುರ್ಗ: ಸಂಕಷ್ಟದಲ್ಲಿರುವ ಮತ್ತು ದೌರ್ಜನ್ಯಕ್ಕೆ ಒಳಗಾದ ಮಹಿಳೆಯರಿಗೆ ಒಂದೇ ಸೂರಿನಡಿ ವೈದ್ಯಕೀಯ ಚಿಕಿತ್ಸೆ,ಪೊಲೀಸ್,ಕಾನೂನು,ಆಪ್ತ ಸ ಮಾಲೋಚನೆ ಹಾಗೂ ತಾತ್ಕಾಲಿಕ ಆಶ್ರಯದಂಥ ಅಗತ್ಯ ತುರ್ತು ಸೇವೆಗಳನ್ನು ಒದಗಿಸಲು,ಎಲ್ಲ ಜಿಲ್ಲೆಗಳಲ್ಲಿರುವ ಸಖಿ(ಒನ್‌ಸ್ಟಾಫ್ ಸೆಂಟರ್)ಕೇಂದ್ರಗಳಿಗೆ ವಾಹನ ಸೌಲಭ್ಯವನ್ನು ಒದಗಿಸಲಾಗಿದೆ.
ಪ್ರತಿ ಕೇಂದ್ರಕ್ಕೆ ತಲಾ ಒಂದರಂತೆ ವಾಹನ ಸೌಲಭ್ಯವನ್ನು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಒದಗಿಸಿದೆ. ಕಳೆದ ಜುಲೈನಲ್ಲಿ ಈ ಸಂಬಂಧ ವಾಹನ ಸೌಲಭ್ಯಕ್ಕೆ ಸೂಚಿಸಿದ್ದ ಇಲಾಖೆ ನಿರ್ದೇಶಕರು,ಮಾಸಿಕ ಗರಿಷ್ಠ 35 ಸಾವಿರ ರೂ.ವೆಚ್ಚದಂತೆ ಕಾರನ್ನು ಬಳಸಲು ಇಲಾಖೆ ಒಪ್ಪಿಗೆ ನೀಡಿದ್ದಾರೆ.
ಆಯಾ ಜಿಲ್ಲಾ ಮಟ್ಟದಲ್ಲಿ ವಾಹನಕ್ಕೆ ಪ್ರತ್ಯೇಕ ಟೆಂಡರ್ ಆಗಿದ್ದು,ಹಲವು ಜಿಲ್ಲೆಗಳಲ್ಲಿ ವಾಹನ ಸೌಕರ್ಯಕ್ಕೆ ಚಾಲನೆ ಸಿಕ್ಕಿದೆ. ಮಂಗಳ ವಾರ ಚಿತ್ರದುರ್ಗದಲ್ಲಿ ಜಿಲ್ಲಾಧಿಕಾರಿ ಟಿ.ವೆಂಕಟೇಶ್,ಎಸ್‌ಪಿ ರಂಜಿತ್‌ಕುಮಾರ್‌ಬಂಡಾರು ಹಾಗೂ ವಕೀಲರ ಸಂಘದ ಅಧ್ಯಕ್ಷ ತಿಪ್ಪೇಸ್ವಾ ಮಿ ಅವರು ಈ ವಾಹನಕ್ಕೆ ಹಸಿರು ನಿಶಾನೆ ತೋರಿಸಿದ್ದಾರೆ.
ಸರ್ಕಾರಿ ವಿಶೇಷ ದತ್ತು ಕೇಂದ್ರ
ಚಿತ್ರದುರ್ಗ ಜಿಲ್ಲೆಗೆ ಹೊಸದಾಗಿ ಸರ್ಕಾರಿ ವಿಶೇಷ ದತ್ತು ಕೇಂದ್ರ ಮಂಜೂರಾಗಿದೆ. ಪ್ರಸ್ತುತ ಬಾಲಕಿಯರ ಬಾಲ ಮಂದಿರದ ಕಟ್ಟ ಡದಲ್ಲಿ ದತ್ತು ಸ್ವೀಕಾರ ಕೇಂದ್ರವನ್ನು ಪ್ರಾರಂಭಿಸಲಾಗುವುದು ಎಂದು ಜಿಲ್ಲಾ ಮಹಿಳಾ ರಕ್ಷಣಾಧಿಕಾರಿ ಸವಿತಾ ತಿಳಿಸಿದ್ದಾರೆ.
ಸಹಾಯವಾಣಿ
ಪ್ರಧಾನ ಮಂತ್ರಿ ಬೇಟಿ ಬಚಾವೋ ಬೇಟಿ ಪಡಾವೋ ಹಾಗೂ ಪ್ರಧಾನ ಮಂತ್ರಿ ಮಾತೃ ವಂದನಾ ಯೋಜನೆಗಳ ಪೂರಕವಾಗಿ ಟೋ ಲ್‌ಫ್ರೀ ಸಂಖ್ಯೆ 181ಗೆ ಸಂಕಷ್ಟದಲ್ಲಿರುವ ಮಹಿಳೆಯರು ಕರೆ ಮಾಡಿದರೆ ಅಗತ್ಯ ನೆರವಿಗೆ ಇಲಾಖೆ ಮುಂದಾಗಲಿದೆ. ದಿನದ 24/7 ಕಾರ‌್ಯ ನಿರ್ವಹಿಸುವ ಈ ಸಹಾಯವಾಣಿಗೆ ನೊಂದವರು ಕರೆ ಮಾಡಬಹುದಾಗಿದೆ. ಚಿತ್ರದುರ್ಗ ಜಿಲ್ಲಾಸ್ಪತ್ರೆ ಆವರಣದಲ್ಲಿ ಪ್ರಸ್ತುತ ಕಾರ‌್ಯನಿರ್ವ ಹಿಸುತ್ತಿರುವ ಸಖಿ ಕೇಂದ್ರವನ್ನು ಸದ್ಯದಲ್ಲೇ ಸ್ವಂತ ಕಟ್ಟಡಕ್ಕೆ ಸ್ಥಳಾಂತರಿಸುವುದಾಗಿ ಇಲಾಖೆ ಮೂಲಗಳು ತಿಳಿಸಿವೆ.
---
ಕೋಟ್
ಸಖಿ ಕೇಂದ್ರದಲ್ಲಿ ಕಳೆದ ಸೆಪ್ಟೆಂಬರ್ ಅಂತ್ಯದವರೆಗೆ 7ಕೌಟುಂಬಿಕ ಕಲಹ,4 ಅತ್ಯಾಚಾರ, 22 ಪೋಕ್ಸೋ,15 ಕಾಣೆ, 14 ಇತರೆ ಸೇರಿ 62 ಪ್ರಕರಣಗಳು ದಾಖಲಾಗಿವೆ. ಸದರಿ ಪ್ರಕರಣಗಳಲ್ಲಿ ಸಂಕಷ್ಟದಲ್ಲಿರುವ ಮಹಿಳೆಯರಿಗೆ ಅಗತ್ಯ ತುರ್ತು ನೆರವನ್ನು ಒದಗಿಸಲಾಗಿದೆ.
ಭಾರತಿ ಆರ್.ಬಣಕಾರ್,ಉಪ ನಿರ್ದೇಶಕಿ,ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ,ಚಿತ್ರದುರ್ಗ.
--