ಇಂಡಿ ಪಟ್ಟಣದ ಎಸ್‌ಎಸ್ ಪ್ಯಾರಾ ಮೆಡಿಕಲ್ ಕಾಲೇಜಿನಲ್ಲಿ ಜರುಗಿದ ಅಂತಿಮ ವರ್ಷದ ವಿದ್ಯಾರ್ಥಿಗಳ ಬೀಳ್ಕೊಡುವ ಸಮಾರಂಭದಲ್ಲಿ ನ್ಯಾಯವಾದಿ ಎಸ್.ಬಿ. ಕೆಂಬೋಗಿ, ಸೌಮ್ಯ ರೂಗಿ, ಮಹಾಂತೇಶ ಪಾಟೀಲ, ಡಾ. ಸಾಗರ ಪಾಟೀಲ ಇತರರಿದ್ದರು. 
ಜಿಲ್ಲೆ

ನೊಂದ ಜೀವಿಗಳಿಗೆ ಸ್ಪಂದಿಸಿ

ಇಂಡಿ: ಆರೋಗ್ಯ ಸೇವೆ ಮಾಡುವುದಕ್ಕೆ ಎಲ್ಲರಿಗೂ ಅವಕಾಶಗಳು ಸಿಗುವುದಿಲ್ಲ. ಅದು ನಿಮಗೆ ಸಿಕ್ಕಿದ್ದು, ನೊಂದ ಜೀವಗಳಿಗೆ ಸ್ಪಂದಿಸುವ ಮನಸ್ಸು, ನಿಸ್ವಾರ್ಥ ಸೇವೆಯ ಮನೋಭಾವ ನಿಮ್ಮಲ್ಲಿರಬೇಕು ಎಂದು ಎಸ್‌ಎಸ್ ಪ್ಯಾರಾ ಮೆಡಿಕಲ್ ಸಂಸ್ಥೆಯ ಅಧ್ಯಕ್ಷ, ನ್ಯಾಯವಾದಿ ಎಸ್.ಬಿ. ಕೆಂಬೋಗಿ ಹೇಳಿದರು.

ಪಟ್ಟಣದ ಎಸ್‌ಎಸ್ ಪ್ಯಾರಾ ಮೆಡಿಕಲ್ ಕಾಲೇಜಿನಲ್ಲಿ ಅಂತಿಮ ವರ್ಷದ ವಿದ್ಯಾರ್ಥಿಗಳ ಬೀಳ್ಕೊಡುವ ಸಮಾರಂಭದಲ್ಲಿ ಅವರು ಮಾತನಾಡಿದರು.

ವಿದ್ಯಾರ್ಥಿಗಳಿಗೆ ಶಿಕ್ಷಣವು ಎಲ್ಲಾ ಸಂಪತ್ತುಗಳಿಗಿಂತ ವಿದ್ಯಾ ಸಂಪತ್ತು ಪರಮ ಶ್ರೇಷ್ಠವಾದುದು. ದುಡ್ಡೆ ದೊಡ್ಡಪ್ಪ ಆದರೆ, ವಿದ್ಯೆ ಅದರಪ್ಪ ಎಂಬುದನ್ನು ಪ್ರತಿಯೊಬ್ಬರೂ ಅರ್ಥೈಸಿಕೊಂಡು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ವೃತ್ತಿಪರ ಕೋರ್ಸ್‌ಗಳು ಜೀವನದಲ್ಲಿ ಬದಕಲು ಪಾಠವನ್ನು ಕಲಿಸುತ್ತವೆ. ಯಾವತ್ತು ವೃತ್ತಿಪರ ಕೋರ್ಸ್‌ಗಳು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಹೇಳಿದರು.

ಪ್ರಾಂಶುಪಾಲೆ ಸೌಮ್ಯ ರೂಗಿ ಮಾತನಾಡಿ, ಈಗಿನ ಯುಗದಲ್ಲಿ ಸಾಕಷ್ಟು ಜ್ಞಾನ ಪಡೆದುಕೊಳ್ಳಲು ಶ್ರಮ ಪಡೆಯುವ ಅಶ್ಯಕತೆಯಿಲ್ಲ. ಅಂತರ್ಜಾಲದಲ್ಲಿ ವಿಷಯಕ್ಕೆ ಸಂಬಂಧಿಸಿದಂತೆ ಮಾಹಿತಿ ಸಿಗುತ್ತದೆ. ನಮ್ಮ ದೇಹದ ಹೊರಗಿನ ಕಣ್ಣುಗಳು ಹೊರ ಜಗತ್ತನ್ನು ಮಾತ್ರ ಕಾಣಬಲ್ಲವು. ಆದರೆ ಜ್ಞಾನವು ಜಗತ್ತನೆ ಸೃಷ್ಠಿಸುತ್ತದೆ ಎಂದರು.

ಎಸ್‌ಎಸ್ ಪ್ಯಾರಾ ಮೆಡಿಕಲ್ ಸಂಸ್ಥೆಯು ನಿರುದ್ಯೋಗ ಹೋಗಲಾಡಿಸುವ ನಿಟ್ಟಿನಲ್ಲಿ ಮೆಡಿಕಲ್ ಕೋರ್ಸ್ ಆರಂಭಿಸಿದೆ. ಈ ಕೋರ್ಸ್ ಪೂರೈಸಿದವರಿಗೆ ಸ್ಥಳೀಯ ಮತ್ತು ದೇಶ ವಿದೇಶಲ್ಲೂ ಸೇವೆ ಮಾಡಬಹುದು. ಅದರಂತೆ ಅಮೇರಿಕ, ಸೌದಿ ಅರೇಬಿಯಾ ಸೇರಿದಂತೆ ಹಲವು ರಾಷ್ಟ್ರಗಳಲ್ಲಿ ಉದ್ಯೋಗಾವಕಾಶಗಳು ಸಾಕಷ್ಟಿವೆ ಎಂದರು.

ಕಾರ್ಯಕ್ರಮದಲ್ಲಿ ಮಹಾಂತೇಶ ಪಾಟೀಲ, ಡಾ. ಸಾಗರ ಪಾಟೀಲ, ಪುಷ್ಪಾ ಪೋದ್ದಾರ, ಶ್ವೇತಾ ದೋತ್ರೆ, ಶ್ರೀಶೈಲ ಹೂಗಾರ ,ಮುಕ್ತಮ ಮುಲ್ಲಾ, ಡಾ. ಸುನೀಲಕುಮಾರ ಸರಸಂಬಿ ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.