filter: 0; fileterIntensity: 0.0; filterMask: 0; captureOrientation: 0; module: video; hw-remosaic: false; touch: (-1.0, -1.0); modeInfo: Beauty ; sceneMode: 0; cct_value: 4104; AI_Scene: (-1, -1); aec_lux: 50.0; aec_lux_index: 0; hist255: 0.0; hist252~255: 0.0; hist0~15: 0.0; albedo: ; confidence: ; motionLevel: -1; weatherinfo: null; temperature: 46; 
ಜಿಲ್ಲೆ

ನೊಂದ ಕುಟುಂಬಕ್ಕೆ ‘ಅನ್ನದಾತ’ ನೆರವಿನ ಹಸ್ತ

ಚಿತ್ರದುರ್ಗ: ರೇಣುಕಸ್ವಾಮಿ ಮನೆಗೆ ನೊಣವಿನಕೆರೆ ಕಾಡಸಿದ್ದೇಶ್ವರ ಮಠದ ಡಾ. ಶ್ರೀ ಕರಿವೃಷಭ ದೇಶೀಕೇಂದ್ರ ಶಿವಯೋಗೀಶ್ವರ ಸ್ವಾಮೀಜಿ ಭಾನುವಾರ ಭೇಟಿ ನೀಡಿ, ನೊಂದ ಕುಟುಂಬದವರಿಗೆ ಸಾಂತ್ವನ ಹೇಳಿದರು. ಈ ವೇಳೆ ಕುಟುಂಬ ವರ್ಗದವರು ಶ್ರೀಗಳ ಪಾದಪೂಜೆ ಮಾಡಿದರು.
ರೇಣುಕಸ್ವಾಮಿಯ ಲೋಪಕ್ಕೆ ಪ್ರತಿಯಾಗಿ ಈ ರೀತಿಯ ಕೃತ್ಯ ನಡೆದಿರುವುದು ದೊಡ್ಡ ಅಪರಾಧ, ಧರ್ಮದ ವಿರುದ್ಧವಾದದ್ದು. ಕುಟುಂಬಕ್ಕೆ ದೊಡ್ಡ ಅನ್ಯಾಯವಾಗಿದೆ. ಇದೊಂದು ದುರದೃಷ್ಟಕರ ಸಂಗತಿ. ಮೃತನ ಆತ್ಮಕ್ಕೆ ಶಾಂತಿ ಸಿಗಲಿ. ನೊಂದಿರುವ ಕುಟುಂಬಕ್ಕೆ ನ್ಯಾಯ ಸಿಗಲಿ ಎಂದರು.
ರಾಣೆಬೆನ್ನೂರಿನ ಅನ್ನದಾತ ಸೇವಾ ಸಂಸ್ಥೆ ಮುಖ್ಯಸ್ಥ ನಾಗರಾಜ್ ಸಾಲಗೇರಿ ಅವರ ತಂಡ ರೇಣುಕಸ್ವಾಮಿ ಕುಟುಂಬಕ್ಕೆ ಒಂದು ಲಕ್ಷ ರೂ. ನೆರವು ನೀಡಿದರು. ಚೆಕ್‌ನ್ನು ಶ್ರೀಗಳು ಕುಟುಂಬಕ್ಕೆ ಹಸ್ತಾಂತರಿಸಿದರು.
ಸಂಸ್ಥೆ ಮುಖ್ಯಸ್ಥ ನಾಗರಾಜ್ ಸಾಲಗೇರಿ ಮಾತನಾಡಿ, ಕಷ್ಟದಲ್ಲಿ ಇರುವಂಥವರಿಗೆ ಸಂಸ್ಥೆಯಿಂದ ಸಹಾಯ, ಸಹಕಾರ ನೀಡುತ್ತಾ ಬಂದಿದೆ. ರೇಣುಕಸ್ವಾಮಿ ಹತ್ಯೆ ವಿಚಾರ ತಿಳಿದು ಬಹಳ ನೋವಾಯಿತು ಎಂದರು.
ವಯಸ್ಸಾದ ತಂದೆ, ತಾಯಿ, ಗರ್ಭಿಣಿ ಪತ್ನಿ ಇದ್ದಾರೆ. ಸಂಸ್ಥೆ ಸದಸ್ಯರೆಲ್ಲರೂ ಸೇರಿ ಆರ್ಥಿಕ ನೆರವನ್ನು ಕೊಟ್ಟಿದ್ದೇವೆ. ಅವರ ದುಃಖ ಹಂಚಿಕೊಳ್ಳಲು ಸಾಧ್ಯವಿಲ್ಲ, ಆದರೆ ಈ ಕಹಿ ಘಟನೆಗಳನ್ನೆಲ್ಲ ಕುಟುಂಬದವರು ಮರೆತು ಗಟ್ಟಿಯಾಗಿ ಜೀವನ ನಡೆಸಬೇಕು, ಸಂಸ್ಥೆ ನೊಂದ ಕುಟುಂಬದ ಜತೆಗಿದೆ ಎಂದು ಹೇಳಿದರು.
ರೇಣುಕಸ್ವಾಮಿ ಅವರ ತಂದೆ ಶಿವನಗೌಡ್ರು, ಕುಟುಂಬ ಸದಸ್ಯರು, ಚನ್ನಪ್ಪ ಕಿತ್ತೂರಮಠ, ಸುನೀಲ್ ಹುಲಿಹಳ್ಳಿ, ಭರಮಪ್ಪ ಕೂನಬೇವು, ಬೀರೇಶ ಸಾಲಗೇರಿ,ಮಲ್ಲಿಕಾರ್ಜುನ ಸಿರಿಗೆರೆ, ಸಿದ್ದು ಮಾಕನೂರ ಮತ್ತಿತರರು ಇದ್ದರು.