ಶೆಟ್ಟಿಕೊಪ್ಪ ಸರ್ಕಾರಿ ಶಾಲೆಯಲ್ಲಿ ಎನ್‌ಎಸ್‌ಎಸ್ ಶಿಬಿರಕ್ಕೆ ಎಸ್‌ಡಿಎಂಸಿ ಅಧ್ಯಕ್ಷ ಎಂ.ಜಗದೀಶ್ ಚಾಲನೆ ನೀಡಿದರು. ಡಾ.ನಾಗರಾಜ ಪರಿಸರ, ಎಸ್.ನಯನಾ, ಎನ್.ಎಂ.ಕಾಂತರಾಜ್, ಕೆ.ಉಮೇಶ್, ಚಂದ್ರಶೇಖರ್ ಇತರರಿದ್ದರು. 
ಜಿಲ್ಲೆ

ನೈಸರ್ಗಿಕ ಸಂಪನ್ಮೂಲ ಬಳಕೆ ಅರಿತುಕೊಳ್ಳಿ

ಎನ್.ಆರ್.ಪುರ: ದೇಶದ ಯುವ ಶಕ್ತಿ ಬಲಿಷ್ಠವಾಗಿದೆ. ನೈಸರ್ಗಿಕ ಸಂಪನ್ಮೂಲ ಬಳಕೆ ಅರಿತುಕೊಳ್ಳಬೇಕು ಎಂದು ಕುವೆಂಪು ವಿವಿ ಎನ್‌ಎಸ್‌ಎಸ್ ಕಾರ್ಯಕ್ರಮ ಸಂಯೋಜನಾಧಿಕಾರಿ ಡಾ. ನಾಗರಾಜ ಪರಿಸರ ಹೇಳಿದರು.

ಶೆಟ್ಟಿಕೊಪ್ಪ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಕಾಲೇಜು ಶಿಕ್ಷಣ ಇಲಾಖೆ, ಕುವೆಂಪು ವಿವಿ, ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಹಾಗೂ ಎಂ.ಕಾಂ.ಸ್ನಾತಕೋತ್ತರ ಅಧ್ಯಯನ ಕೇಂದ್ರದ ಆಶ್ರಯದಲ್ಲಿ ಆಯೋಜಿಸಿದ್ದ ಎನ್‌ಎಸ್‌ಎಸ್ ಶಿಬಿರದಲ್ಲಿ ಮಾತನಾಡಿದರು.
ಸತ್ಯದ ಹಾದಿಯಲ್ಲಿ ಬಾಳಿದರೆ ಸಮಾಜದಲ್ಲಿ ತಲೆ ಎತ್ತಿ ನಡೆಯಬಹುದು. ಸಿಕ್ಕ ಅವಕಾಶಗಳನ್ನು ಸದ್ಬಳಕೆ ಮಾಡಿಕೊಳ್ಳಿ ಎಂದು ವಿದ್ಯಾರ್ಥಿಗಳಿಗೆ ತಿಳಿಸಿದರು.
ತಾಪಂ ಇಒ ಎಸ್.ನಯನಾ ಮಾತನಾಡಿ, ಎನ್‌ಎಸ್‌ಎಸ್ ಘಟಕ ನಾಯಕತ್ವ ಗುಣ ಕಲಿಸುತ್ತದೆ ಎಂದರು. ಹಳೇ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷ ಎನ್.ಎಂ.ಕಾಂತರಾಜ್ ಮಾತನಾಡಿ, ಶಿಬಿರಾರ್ಥಿಗಳು ಸರ್ಕಾರಿ ಶಾಲೆಗಳನ್ನು ಉಳಿಸಲು ಮಕ್ಕಳ ಪಾಲಕರಲ್ಲಿ ಅರಿವು ಮೂಡಿಸಬೇಕು ಎಂದರು. ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಚಾರ್ಯ ಡಾ. ಕೆ.ಉಮೇಶ್, ಎಸ್‌ಡಿಎಂಸಿ ಅಧ್ಯಕ್ಷ ಎಂ.ಜಗದೀಶ್, ಕಡಹಿನಬೈಲು ಗ್ರಾಪಂ ಅಧ್ಯಕ್ಷ ಚಂದ್ರಶೇಖರ್, ಸದಸ್ಯರಾದ ವಾಣಿ ನರೇಂದ್ರ, ಪೂರ್ಣಿಮಾ ಸಂತೋಷ್, ಶೈಲಾ ಎಂ.ಮಹೇಶ್, ಎ.ಬಿ.ಮಂಜುನಾಥ್, ಶ್ರೀ ಅಯ್ಯಪ್ಪ ಸ್ವಾಮಿ ಭಜನಾ ಮಂಡಳಿ ಅಧ್ಯಕ್ಷ ಕೆ.ಎನ್.ನಗಾರಜ್, ಮುಖ್ಯಶಿಕ್ಷಕಿ ಪುಟ್ಟಮ್ಮ, ಘಟಕ ಕಾರ್ಯಕ್ರಮ ಅಧಿಕಾರಿ ರುಖಿಯತ್, ಉಪನ್ಯಾಸಕರಾದ ಅಣ್ಣಪ್ಪ ಎನ್.ಮಳಿಮಠ್, ನಾಗೇಶ್ ಗೌಡ, ಡಾ. ಧನಂಜಯ್ ಇದ್ದರು.