ಪರಮಾನಂದವಾಡಿ: ಪರಿಸರ ನೈರ್ಮಲ್ಯ ಕಾಪಾಡಿಕೊಳ್ಳಲು ಮತ್ತು ಬಯಲು ಮಲ ವಿಸರ್ಜನೆ ನಿರ್ಮೂಲನೆಗಾಗಿ ಶೌಚಗೃಹ ಬಳಕೆ ಮಾಡಿ ಎಂದು ಕುಡಚಿಯ ಬಿ. ಶಂಕರಾನಂದ ಪದವಿ ಮಹಾವಿದ್ಯಾಲಯದ ಪ್ರಾಚಾರ್ಯ ಅಶೋಕ ಕಾಂಬಳೆ ತಿಳಿಸಿದರು.
ಸಮೀಪದ ಸಿದ್ದಾಪುರ ಗ್ರಾಮದಲ್ಲಿ ಈಚೆಗೆ ಹಮ್ಮಿಕೊಂಡಿದ್ದ ಶ್ರೀ ಜೆ.ಪಿ.ಶಿರಗೂರಕರ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯದ ರಾ.ಸೇ.ಯೋಜನೆ ಶಿಬಿರದಲ್ಲಿ ಶೌಚಗೃಹ ಬಳಕೆಯ ಅರಿವು ಹಾಗೂ ಸ್ವಚ್ಛ ಭಾರತದ ಕುರಿತು ಮಾತನಾಡಿದರು.
ಉಪನ್ಯಾಸಕ ಡಿ.ಕೆ.ಕಾಂಬಳೆ ಮಾತನಾಡಿದರು. ಎಸ್.ಎಂ.ಪಾಟೀಲ, ಗ್ರಾಪಂ ಸದಸ್ಯ ಮೀನಾಕ್ಷಿ ಹಟ್ಟಿ, ಮಾಜಿ ಗ್ರಾಪಂ ಸದಸ್ಯ ಅಭಾಸ ಸನದಿ, ರಾವಸಾಹೇಬ ಪಾಟೀಲ, ಸುರೇಶ ಹೀರೆಮಠ, ಅಣ್ಣಪ್ಪ ಕಲಕೇರಿ, ಪ್ರಾಚಾರ್ಯ ಆರ್.ವಿ.ಕಾಂಬಳೆ, ಶ್ರೀ ಹಾಲ ಸಿದ್ಧೇಶ್ವರ ಶಿಕ್ಷಣ ಸಂಸ್ಥೆ ಕಾರ್ಯದರ್ಶಿ ವಿಜಯ ದಳವಾಯಿ, ಎನ್.ಬಿ.ಕುಸನಾಳೆ, ಕೆ.ಬಿ.ಘಟಕಾಂಬಳೆ, ಎಚ್.ಎಸ್.ಕುರಣೆ, ಆರ್.ಎಚ್.ನಾಯಿಕ ಇತರರಿದ್ದರು. ಡಿ.ಎಂ.ದುರದುಂಡಿ ನಿರೂಪಿಸಿದರು. ಎನ್.ಎಸ್.ಬಂಡಗಾರ ವಂದಿಸಿದರು.