ಜಿಲ್ಲೆ

ನೈಜ ಕಾರ್ಮಿಕರಿಗೆ ಸೌಲಭ್ಯ ದೊರೆಯಲಿ

ಕಲಬುರಗಿ:  ಕಾರ್ಮಿಕರಿಗಾಗಿ ಸರ್ಕಾರ ಘೋಷಿಸುವ ವಿವಿಧ ಯೋಜನೆಗಳ ಸಾವಿರಾರು ಕೋಟಿ ರು. ನಿಜವಾದ ಕರ‍್ಮಿಕರಿಗೆ ದೊರೆಯಬೇಕು. ಬೋಗಸ್​ ಕರ‍್ಮಿಕರು ಕಚೇರಿಗೆ ಹೋಗಿ, ಲಂಚ ನೀಡಿ ಕೆಲಸ ಮಾಡಿಕೊಳ್ಳುತ್ತಾರೆ. ನೈಜ ಕರ‍್ಮಿಕರು ದುಡಿಯಲು ಹೋಗುತ್ತಾರೆ. ದುಡಿಯುವವರಿಗೆ ಲಾಭ ದೊರೆಯಬೇಕು ಎಂದು ಕಲ್ಯಾಣ ರ‍್ನಾಟಕ ಹೋರಾಟ ಸಮಿತಿ ಅಧ್ಯಕ್ಷ ಲಕ್ಷ$್ಮಣ ದಸ್ತಿ ಹೇಳಿದರು.

ನಗರದ ಜಗತ್​ ವೃತ್ತದಲ್ಲಿ ನವ ಕಲ್ಯಾಣ ರ‍್ನಾಟಕ ಕಟ್ಟಡ ಕರ‍್ಮಿಕ ಸಂದಿಂದ ಗುರುವಾರ ರ‍್ಪಡಿಸಿದ್ದ ವಿಶ್ವ ಕರ‍್ಮಿಕರ ದಿನಾಚರಣೆಯಲ್ಲಿ ಮಾತನಾಡಿ, ಎಐಸಿಸಿ ಅಧ್ಯಕ್ಷ ಡಾ.ಮಲ್ಲಿಕರ‍್ಜುನ ರ‍್ಖಗೆ, ಎಸ್​.ಕೆ.ಕಾಂತಾ ಸೇರಿ ರಾಜ್ಯ, ದೇಶದಲ್ಲಿ ನೂರಾರು ಕರ‍್ಮಿಕ ಹೋರಾಟಗಾರರು ಉನ್ನತ ಸ್ಥಾನಕ್ಕೆ ತಲುಪಿದ್ದಾರೆ ಎಂದರು.

ಬಹುತೇಕರು ಶ್ರಮಿಕ, ಕರ‍್ಮಿಕನಾಗಿ, ನಾಯಕರಾದವರು. ಪ್ರಸ್ತುತ ಕರ‍್ಮಿಕರೂ ನಾಯಕರಾಗಿ ಹೊರಹೊಮ್ಮಿದಾಗ ನ್ಯಾಯ ಪಡೆಯಲು ಸಾಧ್ಯ. ಕರ‍್ಮಿಕ ಹಕ್ಕು, ಕರ‍್ಮಿಕರ ಬಲಿದಾನ, ಒಗ್ಗಟ್ಟಿನ ದಿನ. ಇದನ್ನು ಪ್ರತಿಯೊಬ್ಬರ ಕರ‍್ಮಿಕರಿಗೆ ತಿಳಿಸಿ, ಒಗ್ಗೂಡಿ ಆಚರಿಸಬೇಕು ಎಂದು ಹೇಳಿದರು.

ಕಾಂಗ್ರೆಸ್​ ಮುಖಂಡ ಪ್ರವಿಣ ಪಾಟೀಲ್​ ಹರವಾಳ ಮಾತನಾಡಿ, ಕರ‍್ಮಿಕರು ನಿಜವಾದ ದೇಶ ಕಟ್ಟುವವರು. ಕರ‍್ಮಿಕರು ಇಲ್ಲದಿದ್ದರೆ ಜೀವನ ಸಾಗಿಸುವುದೇ ಕಷ್ಟ. ಇಡೀ ದಿನ ದುಡಿದು ಮನೆಗೆ ಹೋಗಿ ಹಲವು ಸಮಸ್ಯೆಗಳ ಮಧ್ಯೆ ಜೀವನ ಸಾಗಿಸುತ್ತಿದ್ದು, ಬೇಡಿಕೆ, ಸಮಸ್ಯೆಗಳಿದ್ದರೆ ರ‍್ಕಾರದ ಗಮನಕ್ಕೆ ತಂದು ಪರಿಹರಿಸಲಾಗುವುದು ಎಂದರು.

ಶರಣಬಸವೇಶ್ವರ ವಿದ್ಯಾರ‍್ಧಕ ಸಂದ ಆಡಳಿತಾಧಿಕಾರಿ ಡಾ.ಅಲ್ಲಮಪ್ರಭು ದೇಶಮುಖ ಮಾತನಾಡಿ, ಶರಣರು ನುಡಿದಂತೆ ಕಾಯಕ ದಾಸೋಹ ತತ್ವವನ್ನು ನಿರಂತರವಾಗಿ ಪಾಲಿಸಿ, ಜೀವನ ಸಾಗಿಸುತ್ತಿರುವವರು ಕರ‍್ಮಿಕರು. ಕರ‍್ಮಿಕರ ಬೆವರು, ಕಷ್ಟ, ಶ್ರಮದಲ್ಲಿಯೇ ಭಾರತದ ಭವಿಷ್ಯ ಅಡಗಿದೆ. ಶ್ರಮಿಕರಿಲ್ಲದ ದೇಶ ಉಹಿಸಲೂ ಕಷ್ಟ ಎಂದು ಹೇಳಿದರು.

ಆಪ್​ ಮುಖಂಡ ರಾವೇಂದ್ರ ಚಿಂಚನಸೂರ ಮಾತನಾಡಿದರು. ಸಂದ ಅಧ್ಯಕ್ಷ ಭೀಮರಾಯ ಕಂದಳ್ಳಿ, ಪ್ರಮುಖರಾದ ಅನೀಲಕುಮಾರ ಗಂಗಾಣಿ, ನೀಲಕಂಠರಾವ ಮೂಲಗೆ, ಪ್ರವಿಣ ಹರವಾಳ, ಲಿಂಗರಾಜ ತಾರಫೇಲ್​, ಶಿವಾನಂದ ಹೊನಗುಂಟಿ, ಪಿ.ಬಿ.ಜೋಶಿ, ಪ್ರಸನ್ನ, ಪ್ರವಿಣ ದೊಡ್ಡಮನಿ, ಚಂದ್ರಕಾಂತ ತುಪ್ಪದ, ಪುನೀತ ಪಾವಡೆ, ರಾಜು ಜಮಾದಾರ, ಬುದ್ಧಪ್ಪ ಪೋತೆಕರ್​, ಮಹಾಂತೇಶ ದೊಡ್ಡಮನಿ, ಮುತ್ತಣ್ಣ ರಾಜಾಪುರ, ಮರೆಪ್ಪ ರೋಟನಡಗಿ, ಸಾಹೇಬಗೌಡ ಇದ್ದರು.