ಜಿಲ್ಲೆ

ನೇರ ಸಂದರ್ಶನಕ್ಕೆ ಆಹ್ವಾನ

ಯಾದಗಿರಿ : ಜಿಲ್ಲೆಯ ಜಿಲ್ಲಾ ಉದ್ಯೋಗ ವಿನಿಮಯ ಕಛೇರಿವತಿಯಿಂದ 2024ರ ಡಿಸೆಂಬರ್ 9ರ ಸೋಮವಾರ ರಂದು ಬೆಳಿಗ್ಗೆ 10 ರಿಂದ ಮಧ್ಯಾಹ್ನ 2 ಗಂಟೆಯ ವರೆಗೆ ನೇರ ಸಂದರ್ಶನವನ್ನು ಆಯೋಜಿಸಲಾಗಿದೆ ಎಂದು ಉದ್ಯೋಗಾಧಿಕಾರಿ ಪ್ರಭಕಾರ ಅವರು ತಿಳಿಸಿದ್ದಾರೆ.

ಕ್ರೇಡಿಟ್ ಅಕ್ಸಿಸ್ ಗ್ರಾಮೀಣ ಪ್ರೆöÊ.ಲಿ. ಟ್ರೆöÊನೀ ಕೇಂದ್ರ ಮ್ಯಾನೆಜರ್ 30 ಹುದ್ದೆಗಳು ಖಾಲಿ ಇದ್ದು, ಹುದ್ದೆಗೆ ಅರ್ಹತೆ ಪಿಯುಸಿ ಪಾಸ್, ಫೇಲ್ ವಿಧ್ಯಾರ್ಹತೆ ಹೊಂದಿರಬೇಕು. ಯಾದಗಿರಿ, ಶಹಾಪೂರು, ಲಿಂಗಸೂಗುರು, ಕೆಂಭಾವಿ, ಯಡ್ರಾಮಿ ಉದ್ಯೋಗ ಸ್ಥಳವಾಗಿದೆ. 19 ರಿಂದ 30 ವರ್ಷ ಒಳಗಿರಬೇಕು,  ಮಹಿಳೆ 19 ರಿಂದ 35 ವರ್ಷ ಒಳಗಿರಬೇಕು. ಅಭ್ಯರ್ಥಿಗಳು ಮಾತ್ರ ಭಾಗಹಿಸಬಹುದಾಗಿದೆ, ಬಯಕ್ ಮತ್ತು ಡಿ.ಎಲ್. ಕಡ್ಡಾಯವಾಗಿದೆ. ಫ್ಲೀಫ್ ಕಾರ್ಟ್ ಬೆಂಗಳೂರು, ಪಿಕಿಂಗ್, ಪ್ಯಾಕಿಂಗ್, ಸ್ಕಾನಿಂಗ್ 200 ಹುದ್ದೆಗಳು ಖಾಲಿ ಇದ್ದು, ಹುದ್ದೆಗೆ ಅರ್ಹತೆ ಯಾವುದೇ 8ನೇ, 10ನೇ, ಪಿಯುಸಿ ವಿದ್ಯಾರ್ಹತೆ ಹೊಂದಿರಬೇಕು. ಪುರುಷ ಅಭ್ಯರ್ಥಿಗಳು ಭಾಗವಹಿಸಬಹುದಾಗಿದೆ. 18 ರಿಂದ 35 ವರ್ಷ ಒಳಗಿರಬೇಕು, ಬೆಂಗಳೂರು ಉದ್ಯೋಗ ಸ್ಥಳವಾಗಿದೆ. ಐ ಫೋನ್ ಮ್ಯಾನುಫಾಕ್ಷÄರಿಂಗ್ ಕಂಪನಿ ಬೆಂಗಳೂರು, ಕ್ವಾಲಿಟಿ ಚೆಂಕಿAಗ್, ಚೀಫ್ ಸಿಫ್ಟಿಂಗ್, ಅಸೆಂಬ್ಲಿAಗ್ 500 ಹುದ್ದೆಗಳು ಖಾಲಿ ಇದ್ದು, ಹುದ್ದೆಗೆ ಅರ್ಹತೆ 10ನೇ, ಪಿಯುಸಿ, ಐಟಿಐ, ಡಿಪ್ಲೋಮ ಯಾವುದೇ ಪದವಿ ವಿದ್ಯೆರ್ಹತೆ ಹೊಂದಿರಬೇಕು. ಮಹಿಳಾ ಅಭ್ಯರ್ಥಿಗಳು ಭಾಗವಹಿಸಬಹುದಾಗಿದೆ. 18 ರಿಂದ 28 ವರ್ಷ ಒಳಗಿರಬೇಕು, ಬೆಂಗಳೂರು ಉದ್ಯೋಗ ಸ್ಥಳವಾಗಿದೆ.

ನಿರುದ್ಯೋಗಿ ಅಭ್ಯರ್ಥಿಗಳು ನೇರ ಸಂದರ್ಶನಕ್ಕೆ ಹಾಜರಾಗಲು ತಿಳಿಸಲಾಗಿದ್ದು, ಈ ನೇರ ಸಂದರ್ಶನಕ್ಕೆ ಬರುವ ಅಭ್ಯರ್ಥಿಗಳು ತಮ್ಮ ದಾಖಲಾತಿಗಳೊಂದಿಗೆ ವ್ಯಕ್ತಿ ಪರಿಚಯ ರಿಸ್ಯೂಮ್, ಬಯೋಡಾಟಾದೊಂದಿಗೆ ನೇರ ಸಂದರ್ಶನಕ್ಕೆ ಹಾಜರಾಗಲು ತಿಳಿಸಲಾಗಿದೆ. ಹಾಗೂ ನೇರ ಸಂದರ್ಶನಕ್ಕೆ ಹಾಜರಾದ ಅಭ್ಯರ್ಥಿಗಳಿಗೆ ಯಾವುದೇ ತರಹದ ಭತ್ಯೆ ನೀಡಲಾಗುವುದಿಲ್ಲ. ಹೆಚ್ಚಿನ ಮಾಹಿತಿಗಾಗಿ ನೇರ ಸಂದರ್ಶನ ನಡೆಯುವ ಸ್ಥಳ ಚಿತ್ತಾಪೂರು ರೋಡ್ (ಮಿನಿ ವಿಧಾನ ಸೌಧ) ಜಿಲ್ಲಾಡಳಿತ ಭವನ, ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರ ಬಿ ಬ್ಲಾಕ್ ರೂ.ನಂ.ಬಿ1, ಬಿ2 2ನೇ ಮಹಡಿ ಯಾದಗಿರಿ, ದೂ.ಸಂ.08473253718, ಮೊ.ನಂ.9448566765ಗೆ ಕಛೇರಿ ಸಮದಲ್ಲಿ ಸಂಪರ್ಕಿಸಬಹುದು ಎಂದು ತಿಳಿಸಿದ್ದಾರೆ.