ಸಾಂದರ್ಭಿಕ ಚಿತ್ರ 
ಜಿಲ್ಲೆ

ನೇರ ರೈಲು ಮಾರ್ಗಕ್ಕೆ 300 ಕೋಟಿ ಅನುದಾನ

ಚಿತ್ರದುರ್ಗ: ತುಮಕೂರು-ಚಿತ್ರದುರ್ಗ-ದಾವಣಗೆರೆ ನೇರ ರೈಲು ಮಾರ್ಗ ಯೋಜನೆಗೆ 300 ಕೋಟಿ ರೂ., ತುಮಕೂರು-ರಾಯದುರ್ಗ-ವಯಾ ಕಲ್ಯಾಣದುರ್ಗ ಮಾರ್ಗ ಯೋಜನೆಗೆ 250 ಕೋಟಿ ರೂ., ಸೇರಿ 550 ಕೋಟಿ ರೂ. ಅನುದಾನ, ಹುಬ್ಬಳ್ಳಿ-ಚಿಕ್ಕಜಾಜೂರು ರೈಲ್ವೆ ಮಾರ್ಗದಲ್ಲಿ ಡಬ್ಲಿಂಗ್ ಯೋಜನೆಗೆ 94 ಕೋಟಿ ರೂ. ಮೀಸಲಿಡುವುದಾಗಿ ಈ ಬಾರಿಯ ಕೇಂದ್ರ ಬಜೆಟ್‌ನಲ್ಲಿ ಘೋಷಿಸಲಾಗಿದೆ. ಹೀಗಾಗಿ ವೇಗ ಪಡೆಯುವ ಸಾಧ್ಯತೆ ಇದೆ. ಮೂರು ಪ್ರಮುಖ ಎಕಾನಾಮಿಕ್ ರೈಲ್ವೇ ಕಾರಿಡಾರ್, ಆರ್‌ಒಬಿ, ಆರ್‌ಎಲ್‌ಯುಬಿಗೂ ಒತ್ತು ನೀಡಲಾಗಿದೆ. ಆದರೆ, ಭದ್ರಾ ಮೇಲ್ದಂಡೆ ಯೋಜನೆ ಕುರಿತು ಪ್ರಸ್ತಾಪಿಸದೆ ಇರುವುದು ಜಿಲ್ಲೆಯ ಹಲವರಲ್ಲಿ ಅಸಮಾಧಾನ ಮೂಡಿಸಿದೆ. ಬಜೆಟ್ ಕುರಿತು ಮಿಶ್ರ ಪ್ರತಿಕ್ರಿಯೆಗಳು ವ್ಯಕ್ತವಾಗಿವೆ.