ಜಿಲ್ಲೆ

ನೇಮಕ ಸ್ಥಗಿತಗೊಳಿಸಿ, ಒಳಮೀಸಲು ಜಾರಿ ಮಾಡಿ

ಕಲಬುರಗಿ: ಒಳಮೀಸಲಾತಿಗೆ ನ್ಯಾಯಮೂರ್ತಿ ಚಂದ್ರಚೂಡ ಸೇರಿ ಏಳು ಸದಸ್ಯರ ಸಂವಿಧಾನಿಕ ಪೀಠದ ತೀರ್ಪು ಸ್ವಾಗತಾರ್ಹ, ಆ.೧ರಂದು ಮಾದಿಗರಿಗೆ ನಿಜವಾದ ಸ್ವಾತಂತ್ರ್ಯ ದೊರೆಕಿದ್ದು, ಕೂಡಲೇ ಮುಖ್ಯಮಂತ್ರಿ ಸಿದ್ದರಾಮಯ್ಯನವರ ನೇತೃತ್ವದ ಸರ್ಕಾರ ಸುಪ್ರೀಂ ಆದೇಶವನ್ನು ತಕ್ಷಣಕ್ಕೆ ಜಾರಿಗೊಳಿಸಬೇಕು ಎಂದು ಜಿಲ್ಲಾ ಮಾದಿಗರ ಸಂಘಟನೆಗಳ ಒಕ್ಕೂಟದ ಸಂಚಾಲಕ ಅಂಬಾರಾಯ ಚಲಗೇರಾ ಒತ್ತಾಯಿಸಿದರು.

೧೯೯೫ರಿಂದ ಮಾದಿಗ ಸಮುದಾಯ ಹಾಗೂ ಮಾದಿಗ ಪರ ವಿವಿಧ ಸಂಘಟನೆಗಳು ಹೋರಾಟದ ಮೂಲಕ ಸರ್ಕಾರಗಳಿಗೆ ಒತ್ತಾಯಿಸುತ್ತಿದ್ದವು. ಇದೀಗ ಕೋರ್ಟ್ ತೀರ್ಪು ನೀಡಿ ಎಲ್ಲ ತೊಡಕು ನಿವಾರಣೆ ಮಾಡಿದೆ. ನರೇಂದ್ರ ಮೋದಿ ಅವರ ಸರ್ಕಾರ ಈ ನಿಟ್ಟಿನಲ್ಲಿ ಪ್ರಯತ್ನ ಮಾಡಿದೆ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು. ಕೆಪಿಎಸ್‌ಸಿ, ಕೆಇಎ ಸೇರಿ ವಿವಿಧ ಇಲಾಖೆಗಳ ಹುದ್ದೆಗಳ ನೇಮಕಾತಿ ಭರ್ತಿ ಪ್ರಕ್ರಿಯೆ ಸ್ಥಗಿತಗೊಳಿಸಿ, ಒಳ ಮೀಸಲಾತಿ ವರ್ಗೀಕರಣ ಆಧರಿಸಿ ನೇಮಕ ಮಾಡಿಕೊಳ್ಳಬೇಕು ಎಂದರು. ಗುಂಡಪ್ಪ ಸಿರಾಡೋಣ, ರವಿ ಸಿಂಗೆ, ಅನಿಲಕುಮಾರ ಡೊಂಗರಗಾಂವ್, ರಾಜು ಕಟ್ಟಿಮನಿ, ಮಲ್ಲು ಜಿನಕೇರಿ, ಬಂಡೇಶ ತಾರಫೈಲ್, ರವಿಚಂದ್ರ ಕ್ರಾಂತಿಕಾರ, ಗುಂಡು ಸಂಗವಾರ ಇತರರಿದ್ದರು.