ಜಿಲ್ಲೆ

ನೇತ್ರ ಆರೋಗ್ಯ ಜಾಗೃತಿ

ಬೀದರ್: ವಿಶ್ವ ದೃಷ್ಟಿ ದಿನಾಚರಣೆ ಅಂಗವಾಗಿ ಚಿಟಗುಪ್ಪ ಹಾಗೂ ಔರಾದ್‍ನಲ್ಲಿ ಡಾ. ಸಾಲಿನ್ಸ್ ನೇತ್ರ ಆಸ್ಪತ್ರೆ ಮತ್ತು ಜಿಲ್ಲಾ ಅಂಧತ್ವ ನಿಯಂತ್ರಣ ಇಲಾಖೆ ವತಿಯಿಂದ ನೇತ್ರ ಆರೋಗ್ಯದ ಕುರಿತು ಜನ ಜಾಗೃತಿ ಮೂಡಿಸಲಾಯಿತು.
ಸಾಲಿನ್ಸ್ ಆಸ್ಪತ್ರೆಯ ಚಿಟಗುಪ್ಪ, ಔರಾದ್ ಉಪ ಕೇಂದ್ರಗಳ ಸಿಬ್ಬಂದಿ ಹಾಗೂ ಆರೋಗ್ಯ ಕಾರ್ಯಕರ್ತರು ಕಾಲ್ನಡಿಗೆ ಜಾಥಾ, ಫಲಕ ಪ್ರದರ್ಶನದ ಮೂಲಕ ನೇತ್ರ ಆರೋಗ್ಯದ ಮಹತ್ವವನ್ನು ಸಾರ್ವಜನಿಕರಿಗೆ ಮನವರಿಕೆ ಮಾಡಿದರು.
ಚಿಟಗುಪ್ಪ ಉಪ ಕೇಂದ್ರದಲ್ಲಿ ಆಯೋಜಿಸಿದ್ದ ನೇತ್ರ ಆರೋಗ್ಯ ಜಾಗೃತಿ ಕಾರ್ಯಕ್ರಮವನ್ನು ಜಿಲ್ಲಾ ಅಂಧತ್ವ ನಿಯಂತ್ರಣ ಇಲಾಖೆಯ ಅಧಿಕಾರಿ ಡಾ. ಕಿರಣ ಪಾಟೀಲ ಉದ್ಘಾಟಿಸಿದರು. ಡಾ. ಸಾಲಿನ್ಸ್ ಆಸ್ಪತ್ರೆಯ ನಿರ್ದೇಶಕಿ ಡಾ. ಸಿಬಿಲ್ ಸಾಲಿನ್ಸ್, ಆಡಳಿತಾಧಿಕಾರಿ ಫಿಲೋಮನ್‍ರಾಜ್ ಪ್ರಸಾದ್, ಡಾ. ವೀರೇಂದ್ರ ಪಾಟೀಲ ಹಾಗೂ ಸಿಬ್ಬಂದಿ ಇದ್ದರು.
10 ಜನರ ಉಚಿತ ನೇತ್ರ ಶಸ್ತ್ರಚಿಕಿತ್ಸೆ ಮಾಡಲಾಯಿತು.
ಔರಾದ್‍ನಲ್ಲಿ ತಾಲ್ಲೂಕು ಆಸ್ಪತ್ರೆ ವೈದ್ಯಾಧಿಕಾರಿ ಡಾ. ರಮನ್ ಪೋಕಲ್‍ವಾರ್ ಕಾರ್ಯಕ್ರಮ ಉದ್ಘಾಟಿಸಿದರು. ಡಾ. ರೋಜಲಿನ್, ಡಾ. ಸಾಲಿನ್ಸ್ ಆಸ್ಪತ್ರೆಯ ಯೋಜನಾಧಿಕಾರಿ ಪುಟ್ಟರಾಜ ಬಲ್ಲೂರಕರ್, ಸುದೇಶ್ ಉಪಸ್ಥಿತರಿದ್ದರು.