ಜಿಲ್ಲೆ

ನೇಣುಬಿಗಿದ ಸ್ಥಿತಿಯಲ್ಲಿ ಗರ್ಭಿಣಿ ಸಾವು

ತುಮಕೂರು ಡೆಸ್ಕ್

ತುಮಕೂರು: ನಗರದ ಹೌಸಿಂಗ್​ ಬೋರ್ಡ್​ ನಿವಾಸಿ ನಗ್ಮಾ(30) ಅವರ ಮೃತದೇಹ ನೇಣುಬಿಗಿದ ಸ್ಥಿತಿಯಲ್ಲಿ ಶುಕ್ರವಾರ ರಾತ್ರಿ ಪತ್ತೆಯಾಗಿದ್ದು, ಸಾವಿಗೆ ಪತಿಯ ಕಿರುಕುಳವೇ ಕಾರಣ ಎಂದು ಆಕೆಯ ಸಂಬಂಧಿಕರು ಠಾಣೆಯಲ್ಲಿ ದೂರು ನೀಡಿದ್ದಾರೆ. 8 ತಿಂಗಳ ಗರ್ಭಿಣಿಯಾಗಿದ್ದ ನಗ್ಮಾ ಸಾವಿಗೆ ಪತಿ ಸೈಯದ್​ ಇರ್ಫಾನ್​ ಕಾರಣ ಎಂದು ದೂರು ನೀಡಿರುವ ಹಿನ್ನೆಲೆಯಲ್ಲಿ ಆತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗಿದೆ. ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕಳೆದ ವರ್ಷವಷ್ಟೇ ವಿವಾಹವಾಗಿದ್ದ ಮೃತ ನಗ್ಮಾ ಹಾಗೂ ಸೈಯದ್​ ಇಾರ್ನ್​ಗೆ ಇದು ಎರಡನೇ ವಿವಾಹವಾಗಿದ್ದು, ಮದುವೆಗೂ ಮುಂಚೆಯೇ ಮೊದಲ ದಾಂಪತ್ಯದ ಮಕ್ಕಳಿದ್ದರು. ಶುಕ್ರವಾರ ರಾತ್ರಿ ದಂಪತಿ ನಡುವೆ ಜಗಳವಾಗಿದ್ದು, ಮಗನನ್ನು ಆಕೆಯ ತಾಯಿ ಮನೆಗೆ ಬಿಟ್ಟು ಬಂದ ನಗ್ಮಾ ನೇಣಿಗೆ ಶರಣಾಗಿದ್ದಾರೆ. ಮನೆಗೆ ಬಂದಿದ್ದ ಪತಿ ಸೈಯದ್​ ಕಿಟಕಿ ಮೂಲಕ ನೇಣಿಗೆ ಶರಣಾಗಿದ್ದನ್ನು ಕಂಡು ಖಚಿತಪಡಿಸಿಕೊಳ್ಳಲು ಯತ್ನಿಸಿದ್ದಾನೆ. ಆಗದಿದ್ದಾಗ ಆಕೆಯ ಮೇಲೆ ಮಣ್ಣು ಎಸೆದಿದ್ದ ಎನ್ನಲಾಗಿದೆ. ಹಾಗಾಗಿ, ಮಣ್ಣು ಬಾಯಿಗೆ ತುರುಕಿ ಕೊಲೆ ಮಾಡಲಾಗಿದೆ ಎಂದು ಅನುಮಾನ ವ್ಯಕ್ತಪಡಿಸಿದ್ದರು. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಕೈಗೊಂಡಿದ್ದಾರೆ.