ಬಸವಕಲ್ಯಾಣ: ತಾಲೂಕಿನ ಧನ್ನೂರ (ಆರ್) ಗ್ರಾಮದಲ್ಲಿ ಸಾಲಬಾಧೆಯಿಂದ ರೈತ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಸೋಮವಾರ ನಡೆದಿದೆ.
ವೈಜಿನಾಥ ಮಾರುತಿ ಪರೀಟ್ (65) ಆತ್ಮಹತ್ಯೆ ಮಾಡಿಕೊಂಡ ರೈತ. ಕೃಷಿ ಚಟುವಟಿಕೆಗಾಗಿ ಎಸ್.ಬಿಐ ಹಾಗೂ ಖಾಸಗಿ ಸಾಲ ಪಡೆದಿದ್ದ. ಬೆಳೆ ಹಾನಿಯಿಂದ ಮನನೊಂದು ಹೊಲದಲ್ಲಿ ನೇಣು ಹಾಕಿಕೊಂಡಿದ್ದಾನೆ. ಪತ್ನಿ, ಮೂವರು ಪುತ್ರಿಯರು, ಓರ್ವ ಪುತ್ರನನ್ನು ಅಗಲಿದ್ದಾರೆ. ಮುಡಬಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.