ತುರುವೇಕೆರೆ: ಪಟ್ಟಣದ ಬೇಟೇರಾಯಸ್ವಾಮಿ ದೇವಾಲಯದ ಬಳಿಯ ಮನೆಯೊಂದರಲ್ಲಿ ಯುವಕನೋರ್ವನ ಶವ ನೇಣು ಬಿಗಿದುಕೊಂಡಿರುವ ಸ್ಥಿತಿಯಲ್ಲಿ ಪತ್ತೆಯಾಗಿದೆ. ಪಟ್ಟಣದ ನಿವಾಸಿ ರಾಜೇಶ್ (37)ಮೃತ. ಈತ ಪಟ್ಟಣದ ಬಾಡಿಗೆ ಮನೆಯಲ್ಲಿ ವಾಸವಾಗಿದ್ದು, ಹಲವು ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ. ಮನೆಗಳಿಗೆ ಪೈಂಟಿಂಗ್ ಮಾಡುತ್ತಿದ್ದ ಎನ್ನಲಾಗಿದೆ. ಈತನ ಶವ ಬುಧವಾರ ಬೆಳಗ್ಗೆ ಬಾಡಿಗೆ ಮನೆಯಲ್ಲಿ ಪತ್ತೆಯಾಗಿದೆ. ಪಟ್ಟಣದ ಪೊಲೀಸರು ಭೇಟಿ ನೀಡಿ ಪರಿಶೀಲಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಪಾದಚಾರಿ ಸಾವು ತುರುವೇಕೆರೆ: ತಾಲೂಕಿನ ತಾವರೇಕೆರೆ 150ಎ ರಾಷ್ಟ್ರೀಯ ಹೆದ್ದಾರಿ ರಸ್ತೆ ಬದಿ ಮಂಗಳವಾರ ರಾತ್ರಿ ಪಾದಚಾರಿಗೆ ಕಾರು ಡಿಕ್ಕಿಯಾಗಿ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ತಾವರೇಕೆರೆ ಬಡಾವಣೆಯ ನಿವಾಸಿ ಸುರೇಶ್(48) ಮೃತ. ಮಂಗಳವಾರ ರಾತ್ರಿ ತಾವರೇಕೆರೆಯಿಂದ ಬಡಾವಣೆಗೆ ರಸ್ತೆ ಬದಿ ನಡೆದುಕೊಂಡು ಬರುತ್ತಿರುವಾಗ ಕೆ.ಬಿ.ಕ್ರಾಸ್ ಕಡೆಯಿಂದ ತುರುವೇಕೆರೆ ಕಡೆ ತೆರಳುತ್ತಿದ್ದ ಕಾರು ಗುದ್ದಿದೆ. ಸುರೇಶ್ ರಸ್ತೆ ಪಕ್ಕದ ಬೇಲಿಯೊಳಗೆ ಬಿದ್ದಿರುವುದನ್ನು ಬುಧವಾರ ಬೆಳಗ್ಗೆ ತೋಟಕ್ಕೆ ಹೋಗುವ ಜನರು ಗಮನಿಸಿ ಪಟ್ಟಣದ ಪೊಲೀಸರಿಗೆ ವಿಷಯ ತಿಳಿಸಿದ್ದಾರೆ. ಸ್ಥಳಕ್ಕೆ ಸಿಪಿಐ ಲೋಹಿತ್, ಪಿಎಸ್ಐ ಸಂಗಮೇಟಿ ಮತ್ತು ಪೊಲೀಸ್ ಸಿಬ್ಬಂದಿ ಮೃತ ಸುರೇಶ್ ಶವವನ್ನು ಹೊರ ತೆಗೆದಿದ್ದಾರೆ. ಮೃತನಿಗೆ ಪತ್ನಿ, ಪುತ್ರ ಇದ್ದಾರೆ. ಪಟ್ಟಣದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.