ಜಿಲ್ಲೆ

ನೇಣಿಗೆ ಶರಣಾದ ಮದ್ಯವ್ಯಸನಿ

ಕೊಳ್ಳೇಗಾಲ: ತಾಲೂಕಿನ ಸಿಂಗನಲ್ಲೂರು ಗ್ರಾಮದಲ್ಲಿ ಮದ್ಯವ್ಯಸನಿಯೊಬ್ಬ ನೇಣಿಗೆ ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಗ್ರಾಮದ ನಾಗರಾಜು (30) ಮೃತರು. ಈತ ಹೆಂಡತಿ ಕಳೆದುಕೊಂಡ ಕಾರಣ ಕುಡಿತಕ್ಕೆ ದಾಸನಾಗಿದ್ದ. ಈ ನಡುವೆ ಮದ್ಯ ಸೇವಿಸಲು ಮನೆಯಲ್ಲಿ ಹಣಕ್ಕಾಗಿ ಪೀಡಿಸುತ್ತಿದ್ದ. ಮದ್ಯ ಕುಡಿಯಲು ತಾಯಿ ಬಳಿ ಹಣ ಕೇಳಿದ್ದಾನೆ. ಆದರೆ, ಹಣ ಕೊಡದ ಹಿನ್ನೆಲೆಯಲ್ಲಿ ತಾಯಿ ಕೂಲಿ ಕೆಲಸಕ್ಕೆ ಹೋಗಿ ಬರುವಷ್ಟರಲ್ಲಿ ಮನೆಯಲ್ಲಿ ನಾಗರಾಜು ನೇಣು ಹಾಕಿಕೊಂಡಿದ್ದಾನೆ. ಬಳಿಕ ಆತನನ್ನು ಕಾಮಗೆರೆ ಆಸ್ಪತ್ರೆಗೆ ಕರೆದೊಯ್ಯಲಾಯಿತು. ವ್ಯೆದ್ಯರು ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ.

ಸದ್ಯ ಕೊಳ್ಳೇಗಾಲ ಗ್ರಾಮಾಂತರ ಠಾಣಾ ಪೊಲೀಸರು ಮೃತದೇಹವನ್ನು ಸರ್ಕಾರಿ ಆಸ್ಪತ್ರೆಯ ಶವಾಗಾರದಲ್ಲಿ ಇರಿಸಿದ್ದಾರೆ. ಈ ಸಂಬಂಧ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.